ಧರ್ಮಸ್ಥಳ : ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಕಣಕ್ಕಳಿಯೋದು ಕನ್ಫರ್ಮ್ ಆಗಿದ್ದು, ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಅವರು, ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸೋದು ಖಚಿತ. ದೇವೇಗೌಡರು ಕೊಟ್ಟಿರೋ ಜವಬ್ದಾರಿಯನ್ನು ನಿರ್ವಹಿಸುತ್ತೇನೆ. ಅಧಿಕೃತವಾಗಿ ನಂಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಮಂಡ್ಯದ ಋಣ ತೀರಿಸಲು ಪ್ರಯತ್ನ ಮಾಡುತ್ತೇನೆ. ವರಿಷ್ಠರು ತೀರ್ಮಾನಿಸಿದ ಮೇಲೆ ನಾವು ಸ್ಪರ್ಧಿಸಲೇ ಬೇಕು’ ಎಂದರು. ಆದರೆ, ಸುಮಲತಾ ಅಂಬರೀಶ್ ಅವರ ಸ್ಪರ್ಧೆ ಬಗ್ಗೆ ಕೇಳಿದ್ದಕ್ಕೆ, ‘ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ’ ಅಂದರು.
ದೇವೇಗೌಡರು ಕೊಟ್ಟ ಜವಬ್ದಾರಿ ನಿರ್ವಹಿಸ್ತೇನೆ : ನಿಖಿಲ್
RELATED ARTICLES