ಇನ್ಮುಂದೆ ಆನ್​ಲೈನ್ ಆರ್ಡರ್ ಮಾಡಿದ್ರೆ ಸಾಕು ಮನೆಬಾಗಿಲಿಗೆ ಬರುತ್ತೆ ಮದ್ಯ  

0
710

ಬೆಂಗಳೂರು: ಲಾಕ್​ಡೌನ್ ಆದಾಗಿನಿಂದಲೂ ಮದ್ಯ ಪ್ರಿಯರು ಮದ್ಯ ಸಿಗದೇ ಮದ್ಯದಂಗಡಿ ಯಾವಾಗ ಓಪನ್ ಆಗುತ್ತೋ ಅಂತ ಕಾಯುತ್ತಿದ್ದರು. ಆದರೆ ಈಗ ಸರ್ಕಾರ ಲಾಕ್​ಡೌನ್ ಸಡಿಲಿಕೆ ಮಾಡಿ ಮದ್ಯದಂಗಡಿಗಳನ್ನು ಓಪನ್ ಮಾಡಿದ್ದೇ ತಡ ಮನೆಯೊಳಗಿದ್ದ ಮದ್ಯ ಪ್ರಿಯರೆಲ್ಲರೂ ಬೀದಿಗಿಳಿದು ಮದ್ಯದಂಗಡಿಯ ಎದುರು ಸಾಲು ನಿಂತಿದ್ದಾರೆ.

ಲಾಕ್​ಡೌನ್ ಆದಾಗಿನಿಂದ ಅದ್ಯಾವುದಕ್ಕೆ ಸಾಲಾಗಿ ನಿಂತು ಕಾದಿದ್ದಾರೋ ಗೊತ್ತಿಲ್ಲ. ಆದರೆ ಮದ್ಯದಂಗಡಿ ಓಪನ್ ಆಗಿದ್ದೇ ತಡ ಮದ್ಯಕ್ಕಾಗಿ ಜನ ಕಿಲೋಮೀಟರ್​ಗಟ್ಟಲೆ ಸಾಲು ನಿಂತಿದ್ದಾರೆ. ಉರಿ ಬಿಸಿಲನ್ನು ಲೆಕ್ಕಿಸದೇ ಜನ ಮದ್ಯಕ್ಕಾಗಿ ಸಾಲುಗಟ್ಟಿ ನಿಂತರು. ಇನ್ನು ಬಿಸಿಲಿನಲ್ಲಿ ನಿಂತು ಮೂರ್ಚೆ ಹೋದರೂ ಮದ್ಯಕ್ಕಾಗಿ ಸಾಲು ನಿಂತರು. ಆದರೆ ಇನ್ನು ಮುಂದೆ ಮದ್ಯಕ್ಕಾಗಿ ಸಾಲುಗಟ್ಟಿ ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ. ಯಾಕಂದ್ರೆ ಮನೆಬಾಗಿಲಿಗೆ ಮದ್ಯಗಳನ್ನು ತಂದು ಕೊಡಲಿದ್ದಾರೆ.

ಹೌದು ಮದ್ಯದಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಮದ್ಯವನ್ನು ಆನ್​ಲೈನ್ ಮೂಲಕ ಆರ್ಡರ್ ಮಾಡಬಹುದು. ಆರ್ಡರ್ ಮಾಡಿದ ಮದ್ಯವನ್ನು ಮನೆ ಬಾಗಿಲಿಗೆ ತಂದುಕೊಡಲು  ಝೊಮ್ಯಾಟೋ ಸಂಸ್ಥೆ ರೆಡಿಯಾಗಿದ್ದು, ಆದರೆ ಈ ಸೇವೆಯನ್ನು ಜಾರಿಗೆ ಯಾವುದೇ ಯೋಜನೆಗಳು ಭಾರತದಲ್ಲಿಲ್ಲ. ಹಾಗಾಗಿ ಇದರ ಬಗ್ಗೆ ಈಗಾಗಲೇ ಭಾರತೀಯ ಸ್ಪಿರಿಟ್ಸ್ ಮತ್ತು ವೈನ್ಸ್ ಸಂಸ್ಥೆ ಆನ್​ಲೈನ್ ಆಹಾರ ಸರಬರಾಜು ಸಂಸ್ಥೆಗಳೊಂದಿಗೆ ಸೇರಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಶುರು ಮಾಡಿದೆ. ಇನ್ನು ಏನಿದ್ರೂ ಇದಕ್ಕೆ ಸರ್ಕಾರದ ಅನುಮತಿ ಕೊಡೋದಷ್ಟೇ ಬಾಕಿ ಇದೆ.

 

LEAVE A REPLY

Please enter your comment!
Please enter your name here