Home ಸಿನಿ ಪವರ್ ಬಾಲಿವುಡ್ ಶಾರುಖ್ ಎದುರು ಬಂದ್ರೆ ಯಶ್ ಅಂತಿಮ ಯಾತ್ರೆ - ಶಾರುಖ್ ಅಭಿಮಾನಿಯಿಂದ ಯಶ್ ಗೆ ಧಮ್ಕಿ

ಶಾರುಖ್ ಎದುರು ಬಂದ್ರೆ ಯಶ್ ಅಂತಿಮ ಯಾತ್ರೆ – ಶಾರುಖ್ ಅಭಿಮಾನಿಯಿಂದ ಯಶ್ ಗೆ ಧಮ್ಕಿ

ಸ್ಯಾಂಡಲ್ ವುಡ್ ಸಿನಿಮಾಗಳು ಯಾವ್ದಕ್ಕೂ ಕಮ್ಮಿ ಇಲ್ಲ ಅನ್ನೋದು ಪ್ರೂವ್ ಆಗಿದೆ. ಕನ್ನಡ ಸಿನಿಮಾಗಳ ಮುಂದೆ ಪರ ಭಾಷಾ ಸಿನಿಮಾಗಳು ನಿಲ್ಲಲು ಹೆದರುತ್ತಿವೆ.
ಇದೀಗ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಎದುರು ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವ್ರ ‘ಝೀರೋ’ ಸಿನಿಮಾ ಪೈಪೋಟಿ ನೀಡೋಕೆ ಭಯ ಬಿದ್ದಿದೆ. ಇದಕ್ಕೆ ಶಾರುಖ್ ಅಭಿಮಾನಿಗಳು ಯಶ್ ಗೆ ಹಾಕಿರೋ ಧಮ್ಕಿಯೇ ಸಾಕ್ಷಿ.
ಶಾರುಖ್ ಅಭಿನಯದ ‘ಝೀರೋ’ ಸಿನಿಮಾ ಡಿಸೆಂಬರ್ 21ರಂದು ರಿಲೀಸ್ ಆಗ್ತಿದೆ. ಇದೇ ದಿನ ಯಶ್ ಅಭಿನಯದ ‘ಕೆಜಿಎಫ್’ ರಿಲೀಸ್ ಆಗಲಿದೆ ಅನ್ನೋ ನ್ಯೂಸ್ ಬಂದಿದೆ. ಇದ್ರಿಂದ ಭಯಗೊಂಡಿರೋ ಶಾರುಖ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಯಶ್ ಗೆ ಧಮ್ಕಿ ಹಾಕಿದ್ದಾರೆ. ಬಾಲಿವುಡ್ ನ ಹೆಸರಾಂತ ಡೆಸ್ಟ್ರಿಬ್ಯೂಟರ್ ಗಳೇ ‘ಕೆಜಿಎಫ್’ ಡಿಸ್ಟ್ರಿಬ್ಯೂಟ್ ಮಾಡ್ತಿದ್ದಾರೆ. ಹೀಗಾಗಿ ಶಾರುಖ್ ಅಭಿಮಾನಿಗಳಿಗೆ ಝೀರೋ’ ಮುಂದೆ ಕೆಜಿಎಫ್ ಹೀರೋ ಆಗೋ ಹೆದರಿಕೆ ಶುರುವಾಗಿದೆ.
ಬಾಲಿವುಡ್ ಡೈರೆಕ್ಟರ್ ಫರ್ಹಾನ್​ ಅಖ್ತರ್ ಮುಂದಿನ ತಿಂಗಳು ಕೆಜಿಎಫ್ ರಿಲೀಸ್ ಆಗಲಿದೆ ಅಂತ ಪೋಸ್ಟ್ ಮಾಡಿದ್ದೇ ತಡ ಶಾರುಖ್ ಅಭಿಮಾನಿಗಳು ಭಯಪಟ್ಟು ಕಿಡಿಕಾರಲಾರಂಭಿಸಿದ್ದಾರೆ. ಶಾರುಖ್ ಅವರ ಓರ್ವ ಅಂದಾಭಿಮಾನಿ ‘ so called star #Yash ಶಾರುಖ್ ಎದುರು ಬಂದ್ರೆ ನಿನ್ನ ಅಂತಿಮ ಯಾತ್ರೆ ನಡೆಯಲಿದೆ ಅಂತ ಟ್ವೀಟ್ ಮಾಡಿದ್ದಾನೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments