“ಮೋದಿ, ಅಮಿತ್ ಶಾ ಅವರೇ ನಿಮ್ಮ ತಂದೆ, ತಾತನ ಸರ್ಟಿಫಿಕೇಟ್ ಇದ್ಯಾ”? : ಜಮೀರ್​ ಅಹ್ಮದ್​

0
840

ಬೆಂಗಳೂರು : ಮೋದಿ, ಅಮಿತ್ ಶಾ ಅವರೇ ನಿಮ್ಮ ತಂದೆ ಮತ್ತು ತಾತನ ಸರ್ಟಿಫಿಕೇಟ್ ಇದ್ಯಾ ಅಂತ ಶಾಸಕ ಜಮೀರ್ ಅಹಮ್ಮದ್ ಖಾನ್ ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹಸಚಿವರ ವಿರುದ್ಧ ಹರಿಹಾಯ್ದಿದರು.
ಸಿಎಎ ವಿರೋಧಿಸಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಮೋದಿ, ಶಾ ಮೊದಲು ಅವರಪ್ಪ, ತಾತನ ಬಗ್ಗೆ ಸರ್ಟಿಫಿಕೇಟ್ ತರಲಿ. ಮೋದಿ ಅವರೇ ನಿಮ್ಮ ಬಳಿ ನಿಮ್ಮ ತಂದೆಯ ಸರ್ಟಿಫಿಕೇಟ್ ಇದ್ಯಾ? ಶಾ ಅವರೇ ನಿಮ್ಮ ತಂದೆ, ತಾತನ ಸರ್ಟಿಫಿಕೇಟ್​​​ ಇದ್ಯಾ? ಮೊದಲು ನೀವು ನಿಮ್ಮ ತಂದೆ, ತಾತನ ಬಗ್ಗೆ ಸರ್ಟಿಫಿಕೇಟ್ ತನ್ನಿ. ಆನಂತರ ನಾವೂ ತಂದು ತೋರಿಸುತ್ತೇವೆ” ಎಂದು ಗುಡುಗಿದರು.

LEAVE A REPLY

Please enter your comment!
Please enter your name here