ಜೊಲಿಮಂಟ್ : ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್, 2007ರ ಟಿ20 ಮತ್ತು 2011ರ ಏಕದಿನ ವರ್ಲ್ಡ್ಕಪ್ ಹೀರೋ ಯುವರಾಜ್ ಸಿಂಗ್ ಬ್ಯಾಟಿಂಗ್ ವೈಭವವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳೋ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಸಿಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ ಬಳಿಕ ಕೆನಡಾ ಟಿ20 ಲೀಗ್ ಆಡಿದ್ದ ಯುವಿ ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯೋ ಬುಷ್ ಫೈರ್ ಬ್ಯಾಷ್ ಆಡಲಿದ್ದಾರೆ.
ಫೆಬ್ರವರಿ 8ರಂದು ಪಂದ್ಯ ನಡೆಯುತ್ತಿದ್ದು, ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ್ದ ಕಾಡ್ಗಿಚ್ಚಿನಿಂದ ಉಂಟಾದ ಹಾನಿಗಳಿಗೆ ಪರಿಹಾರಕ್ಕಾಗಿ ಈ ಪಂದ್ಯದ ಹಣವನ್ನು ನೀಡಲಾಗುತ್ತಿದೆ. ವಿಶೇಷ ಅಂದ್ರೆ ಫೆಬ್ರವರಿ 8 ರಂದು ಈ ಮ್ಯಾಚ್ ಮಾತ್ರವಲ್ಲದೆ ಐಸಿಸಿ ಟಿ20 ಮಹಿಳಾ ವರ್ಲ್ಡ್ಕಪ್ನ ಭಾರತ ಮತ್ತು ಆಸೀಸ್ ನಡುವಿನ ಮ್ಯಾಚ್ ಮತ್ತು ಬಿಗ್ ಬ್ಯಾಷ್ ಲೀಗ್ ಫೈನಲ್ ಪಂದ್ಯ ಕೂಡ ನಡೆಯಲಿದೆ.
ಯುವರಾಜ್ ಸಿಂಗ್ ಮಾತ್ರಲ್ಲದೆ ಪಾಕಿಸ್ತಾನದ ಮಾಜಿ ವೇಗಿ ವಾಸೀಮ್ ಅಕ್ರಮ್, ಆಸೀಸ್ ಮಾಜಿ ಕ್ರಿಕೆಟಿಗರಾದ ಆ್ಯಡಂ ಗಿಲ್ಕ್ರಿಸ್ಟ್, ಮೈಕೆಲ್ ಹಸ್ಸಿ, ಬ್ರೆಟ್ ಲೀ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಆಸೀಸ್ ಮಾಜಿ ಕ್ಯಾಪ್ಟನ್ ರಿಕಿಪಾಂಟಿಂಗ್ ಮತ್ತು ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಎರಡು ತಂಡಗಳನ್ನು ಮುನ್ನಡೆಸಲಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪಾಟಿಂಗ್ XI ಹಾಗೂ ವೆಸ್ಟ್ ಇಂಡೀಸ್ ವೇಗಿ ಕರ್ಟ್ನಿ ವಾಲ್ಷ್ ವಾರ್ನ್ XI ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
Hi friends, its impressive piece of writing on the topic of teachingand
fully defined, keep it up all the time.