ಬೆಂಗಳೂರು: ಮೆಗಾ ಡಿಲರ್ ಯುವರಾಜ್ ನ ಮಾತು ಕೇಳಿ ಸಿಸಿಬಿ ವಿಚಾರಣೆ ವೇಳೆ ಆತನ ಮಾತು ಕೇಳಿ ಪೋಲಿಸರಿಗೆ ಶಾಕ್.
ಲಕ್ಷ್ಮೀ ಮನೆಗೆ ಹುಡುಕಿಕೊಂಡು ಬಂದರೆ ಬೇಡ ಅಂತ ಹೇಳೊಕ್ಕೆ ಆಗುತ್ತಾ? ನಿಮ್ಮ ಮನೆ ಬಾಗಿಲಿಗೆ ಲಕ್ಷ್ಮೀ ಬಂದರೆ ಬೇಡ ಅಂತ ಹೇಳುತ್ತಿರಾ? ಎಮದು ವಿಚಾರಣಾಧಿಕಾರಿಗಳಿಗೆ ವಂಚಕ ಯುವ ರಾಜ್ ಪ್ರಶ್ನೇ ಮಾಡುತ್ತಿದ್ದಾನೆ.
ಪ್ರತಿಷ್ಠಿತ ಹೋಟೆಲ್ ಗೆ ಊಟ, ಉಪಹಾರಕ್ಕೆ ಹೋದಾಗ 2 ಸಾವಿರ ಬಿಲ್ ಗೆ, 50 ಸಾವಿರ ಕೋಡುತ್ತಿದ್ದ ವಂಚಕ ಯುವರಾಜ್. 2 ಸಾವಿರ ಬಿಲ್ ಗೆ ಯಾಕೆ 50 ಸಾವಿರ ಕೋಡ್ತಿಯಾ ಅಂತ ತನಿಖಾಧಿಕಾರಿಗಳು ಪ್ರಶ್ನೇ ಮಾಡಿದ್ದಾಗ, ಅಷ್ಟು ಖರ್ಚು ಮಾಡಿಲ್ಲ ಅಂದರೆ ನೆಕ್ಸ್ಟ್ ಟೈಮ್ ಬಂದಾಗ ಸೆಲ್ಯೂಟ್ ಹೊಡೆಯಲ್ಲ, ಒಬ್ಬೋಬ್ಬರಿಗೆ 5 ಸಾವಿರ ಟಿಪ್ಸ್ ಕೊಡ್ತಿನಿ, ಇಳಿದಾಗ ಕಾರ್ ಡೊರ್ ತೆಗೆಯುತ್ತಾರೆ. ಬಾಡಿಗಾರ್ಡ್ ತರ ಕಾರ್ ವರೆಗೂ ಬಿಡ್ತಾರೆ, ಹಾಗೆ ಸೆಲ್ಯೂಟ್ ಹೊಡಿತ್ತಾರೆ ಅಂತ ಹೇಳುವುದರ ಮೂಲಕ ವಂಚಕ ಯವರಾಜ್ ಪೊಲೀಸರಿಗೆ ಶಾಕ್ ನೀಡಿದ್ದಾನೆ.