ಬುಮ್ರಾ ಹ್ಯಾಟ್ರಿಕ್ ಸಾಧನೆಯನ್ನು ಎಲ್ರೂ ಕೊಂಡಾಡ್ತಿದ್ರೆ ಯುವರಾಜ್​ ಸಿಂಗ್ ಹೀಗನ್ನೋದಾ..!

0
748

ಜಮೈಕಾದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಮ್ಯಾಚ್​ನ ಎರಡನೇ ದಿನದ ಆಟದಲ್ಲಿ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ್ದರು. ಬುಮ್ರಾ ಸಾಧನೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಬಳಿಕ ಟೆಸ್ಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎನ್ನುವ ಶ್ರೇಯಕ್ಕೆ ಬುಮ್ರಾ ಭಾಜನರಾಗಿದ್ದಾರೆ.
ಬುಮ್ರಾ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.. ಆದರೆ, ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ಈ ಬಗ್ಗೆ ತನಗೆ ಆಶ್ಚರ್ಯವೇನೂ ಇಲ್ಲ ಅಂತ ಹೇಳಿದ್ದಾರೆ..! ಹಾಗೆಂದ ಮಾತ್ರಕ್ಕೆ ಯುವಿ ಬುಮ್ರಾ ಅವರನ್ನು ಟೀಕಿಸಿದ್ದಾರೆ ಅಂತ ಅನ್ಕೋ ಬೇಡಿ…ಯುವಿ ವಿಶ್ವದ ನಂಬರ್ 1 ಬೌಲರ್ ಬುಮ್ರಾ ಅವರನ್ನು ಹೊಗಳಿದ ಪರಿ ಇದು.
‘ಜಸ್​​ಪ್ರೀತ್​ ಬುಮ್ರಾ ಹ್ಯಾಟ್ರಿಕ್​ ವಿಕೆಟ್ ಪಡೆದಿರುವುದಕ್ಕೆ ಅವರಿಗೆ ಅಭಿನಂದನೆಗಳು. ಆದ್ರೆ, ನೀವು ಹ್ಯಾಟ್ರಿಕ್ ವಿಕೆಟ್ ಕಿತ್ತಿರುವುದು ನಂಗೆ ಅಶ್ವರ್ಯವೆನಿಲ್ಲ. ಯಾಕೆಂದ್ರೆ ನೀವು ವಿಶ್ವದ ನಂಬರ್ 1 ಬೌಲರ್. ಅದನ್ನು ಮತ್ತೆ ಸಾಬೀತು ಪಡಿಸಿದ್ದೀರಿ ನೀವು ಏನು ಎಂಬುದನ್ನು ಮತ್ತೊಮ್ಮೆ ಕ್ರೀಡಾ ಲೋಕಕ್ಕೆ ತೋರಿಸಿ ಕೊಟ್ಟಿದ್ದೀರಿ’ ಅಂತ ಯುವರಾಜ್ ಟ್ವೀಟ್ ಮೂಲಕ ಬುಮ್ರಾರ ಆಟಕ್ಕೆ ಭೇಷ್ ಅಂದಿದ್ದಾರೆ.

LEAVE A REPLY

Please enter your comment!
Please enter your name here