ಬೆಂಗಳೂರು : ಕೊರೋನಾ ದೆಸೆಯಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಕೂಡ ಆರಂಭವಾಗುತ್ತಿಲ್ಲ. ಶಾಲಾ – ಕಾಲೇಜುಗಳನ್ನು ತೆರೆಯುವುದೇ ದೊಡ್ಡ ತಲೆನೋವಾಗಿದೆ. ಹಾಗಾಗಿ ಆನ್ಲೈನ್ ಶಿಕ್ಷಣದ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಇದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಪಾಠ ನಡೆಸಲು ಸರ್ಕಾರ ಮುಂದಾಗಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಮೂಲಕ ಪ್ರೀ – ರೆಕಾರ್ಡ್ ಕ್ಲಾಸ್ಗಳನ್ನು ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ನಾಳೆಯಿಂದಲೇ (ಜುಲೈ -23) ಕ್ಲಾಸ್ಗಳು ಆರಂಭವಾಗಲಿವೆ.
ಜುಲೈ ಮತ್ತು ಆಗಸ್ಟ್ನಲ್ಲಿ ವಿಡಿಯೋ ಪಾಠಗಳು ನಡೆಯಲಿದ್ದು, ಪ್ರತಿದಿನ 45 ನಿಮಿಷಗಳ 4 ಅವಧಿಯ ತರಗತಿಗಳು ನಡೆಯಲಿವೆ. ಪ್ರತಿ ವಿಷಯಕ್ಕೆ ಎರಡು ಅವಧಿ, ಒಂದು ಅವಧಿಯಲ್ಲಿ ವಿಡಿಯೋ ತರಗತಿ, ಎರಡನೇ ಅವಧಿಯಲ್ಲಿ ನಡೆದ ತರಗತಿಗೆ ಸಂಬಂಧಿಸಿದ ಸಂದೇಹ ನಿವಾರಣೆ, ನೋಟ್ಸ್ ಬರವಣಿಗೆ ಇರಲಿದೆ. ಆಯಾ ಕಾಲೇಜಿನ ಆಯಾ ವಿಷಯದ ಉಪನ್ಯಾಸಕರು ಈ ಬಗ್ಗೆ ನಿಗಾವಹಿಸಬೇಕು ಅಂತ ಇಲಾಖೆ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
https://www.youtube.com/c/dpuedkpucpa ಯೂಟ್ಯೂಬ್ ಚಾನಲ್ನಲ್ಲಿ ಪಾಠ ನಡೆಯಲಿದೆ. ಜಿಲ್ಲಾ ಉಪ ನಿರ್ದೇಶಕರು, ಪ್ರಾಂಶುಪಾಲರು ಅಲ್ಲಿಂದ ಉಪನ್ಯಾಸಕರು ವಿದ್ಯಾರ್ಥಿಗಳು ತರಗತಿ ಮಿಸ್ ಮಾಡಿಕೊಳ್ಳದಂತೆ ಪ್ರೇರಿಪಸಬೇಕು ಅಂತ ಇಲಾಖೆ ಹೇಳಿದೆ. ವಿಡಿಯೋ ಚಾನಲ್ನಲ್ಲೇ ಇರಲಿದ್ದು, ಮತ್ತೆ ಮತ್ತೆ ವೀಕ್ಷಿಸಲು ಅವಕಾಶ ಕೂಡ ಇದೆ.
Youtube ತರಗತಿ ವೇಳಾಪಟ್ಟಿ
ಜುಲೈ 23 : ಭೌತಶಾಸ್ತ್ರ/ಅಕೌಂಟೆನ್ಸಿ, ಭೌತಶಾಸ್ತ್ರ ಅಕೌಂಟೆನ್ಸಿ (ನೋಟ್ಸ್), ರಸಾಯನಶಾಸ್ತ್ರ / ರಾಜ್ಯಶಾಸ್ತ್ರ ರಸಾಯನ ಶಾಸ್ತ್ರ/ ರಾಜ್ಯಶಾಸ್ತ್ರ (ನೋಟ್ಸ್)
ಜುಲೈ 24 : ಜೀವಶಾಸ್ತ್ರ, ಬಿಸಿನೆಸ್ ಸ್ಟಡೀಸ್, ಜೀವಶಾಸ್ತ್ರ / ಬಿಸಿನೆಸ್ ಸ್ಟಡೀಸ್ (ನೋಟ್ಸ್), ಗಣಿತ, ಅರ್ಥಶಾಸ್ತ್ರ , ಗಣಿತ, ಅರ್ಥಶಾಸ್ತ್ರ (ನೋಟ್ಸ್)
ಜುಲೈ 25 : ಗಣಿತ, ಇತಿಹಾಸ, ಗಣಿತ, ಇತಿಹಾಸ (ನೋಟ್ಸ್), ಬಿಸಿನೆಸ್ ಸ್ಟಡೀಸ್ (ನೋಟ್ಸ್
ಜುಲೈ 27 : ರಸಾಯನಶಾಸ್ತ್ರ / ರಾಜ್ಯಶಾಸ್ತ್ರ (ನೋಟ್ಸ್), ಕಂಪ್ಯೂಟರ್ ಸೈನ್ಸ್ / ಸಮಾಜಶಾಸ್ತ್ರ (ನೋಟ್ಸ್)
ಜುಲೈ 28 : ಬೇಸಿಕ್ ಮ್ಯಾಥ್ಸ್ , ಸಮಾಜಶಾಸ್ತ್ರ (ನೋಟ್ಸ್), ಭೌತಶಾಸ್ತ್ರ/ಅಕೌಂಟೆನ್ಸಿ (ನೋಟ್ಸ್),
ಜುಲೈ 29 : ಇಂಗ್ಲಿಷ್ ನೋಟ್ಸ್, ಕನ್ನಡ/ ಹಿಂದಿ/ ಸಂಸ್ಕೃತ ನೋಟ್ಸ್
ಜುಲೈ 30 : ಭೌತಶಾಸ್ತ್ರ / ಅಕೌಂಟೆನ್ಸಿ ನೋಟ್ಸ್. ರಸಾಯನಶಾಸ್ತ್ರ / ರಾಜ್ಯಶಾಸ್ತ್ರ ನೋಟ್ಸ್
ಜುಲೈ 31 : ಜೀವಶಾಸ್ತ್ರ / ಬಿಸಿನೆಸ್ ಸ್ಟಡೀಸ್ (ನೋಟ್ಸ್), ಗಣಿತ, ಅರ್ಥಶಾಸ್ತ್ರ (ನೋಟ್ಸ್).
ಆಗಸ್ಟ್ 01 : ಗಣಿತ / ಇತಿಹಾಸ (ನೋಟ್ಸ್), ಬಿಸಿನೆಟ್ ಸ್ಟಡೀಸ್ (ನೋಟ್ಸ್ )