Home ರಾಜ್ಯ ಇತರೆ ಯುವಕರ ಶ್ರಮದಿಂದ ಪಾಳು ಬಿದ್ದ ಬಾವಿಯಲ್ಲಿ ಚಿಮ್ಮಿತು ನೀರಿನ ಸೆಲೆ..!

ಯುವಕರ ಶ್ರಮದಿಂದ ಪಾಳು ಬಿದ್ದ ಬಾವಿಯಲ್ಲಿ ಚಿಮ್ಮಿತು ನೀರಿನ ಸೆಲೆ..!

ಕೊಪ್ಪಳ: ಕುಷ್ಟಗಿ ತಾಲೂಕಿನ ಹನಮಸಾಗರದಲ್ಲಿ ಪಾಳು ಬಿದ್ದಿದ್ದ ಬಾವಿ ಸ್ವಚ್ಛಗೊಳಿಸಿ ಹೂಳೆತ್ತಿದ್ದಾಗ ನೀರಿನ ಸೆಲೆ ಬಂದಿದೆ. ಕಲ್ಲು ಮಣ್ಣಿನಿಂದ ಮುಚ್ಚಿ ಹೋಗಿದ್ದ ಬಾವಿಯನ್ನು ಯುವಕರ ತಂಡವೊಂದು ಹೂಳೆತ್ತಿ ಸ್ವಚ್ಛಗೊಳಿಸಿದ್ದರಿಂದ ಬಿರುಬೇಸಿಗೆಯಲ್ಲೂ ಬಾವಿಯಲ್ಲಿ ನೀರಿನ ಸೆಲೆ ಬಂದಿದೆ.

ಹನಮಸಾಗರದ ಸೋಮಶಂಕರ ದೇವಸ್ಥಾನದಲ್ಲಿರುವ ನೂರಾರು ವರ್ಷ ಹಳೆಯದಾದ 35 ಅಡಿ ಅಗಲವಿರುವ ಬಾವಿಯಲ್ಲಿ ಕಲ್ಲು, ಮಣ್ಣು ಬಿದ್ದು, ಮುಳ್ಳಿನ ಗಿಡಗಳು ಬೆಳೆದಿದ್ದವು. ಇದರಿಂದ ಬಾವಿ ಮುಚ್ಚಿ ಹೋಗಿತ್ತು. ಯುವಕರ ತಂಡವೊಂದು ಈ ಬಾವಿಯ ಬಳಿ ವಾಯು ವಿಹಾರಕ್ಕೆ ಬರುತ್ತಿದ್ದರು. ಈ ಸಮಯದಲ್ಲಿ ಬಾವಿ ಮುಚ್ಚಿರುವುದನ್ನು ನೋಡಿದ ಯುವಕರು ಸ್ವಚ್ಛತೆಗೆ ಮುಂದಾಗಿದ್ದರು. ಸ್ವಚ್ಛತೆ ಮಾಡಲು ಮುಂದಾದಾಗಲೇ ನೀರಿನ ಸೆಲೆ ಬಂದಿರುವುದರಿಂದ ಯುವಕರು ಉತ್ಸಾಹದಲ್ಲಿ ಬಾವಿ ಸ್ವಚ್ಛಗೊಳಿಸಿದ್ದಾರೆ. “ಬೇಸಿಗೆಯಲ್ಲಿ ನೀರಿನ ಸೆಲೆ‌ಬಂದಿರುವುದು ಸಂತಸ ತಂದಿದೆ‌. ಇದು ಇನ್ನು ಮುಂದೆ ಪ್ರಾಣಿ‌, ಪಕ್ಷಿ ಸಂಕುಲಕ್ಕೆ ದಾಹ ತೀರಿಸುವ ತಾಣವಾದ್ರೆ ನಮ್ಮ ಪರಿಶ್ರಮ ಸಾರ್ಥಕ‌” ಎಂದು ಯುವಕರು ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments