Home ದೇಶ-ವಿದೇಶ ವಾಟ್ಸಾಪ್​ ಮಿಸ್​ಯೂಸ್​ ಮಾಡಿದ್ರೆ ನೇರ ಜೈಲಿಗೆ..!

ವಾಟ್ಸಾಪ್​ ಮಿಸ್​ಯೂಸ್​ ಮಾಡಿದ್ರೆ ನೇರ ಜೈಲಿಗೆ..!

ನೀವೇನಾದ್ರೂ ವಾಟ್ಸಾಪ್​ನಲ್ಲಿ ಸುಳ್ಳು ಸುದ್ದಿ ಶೇರ್ ಮಾಡೋದು, ಪ್ರಚೋದನಾತ್ಮಕ ವಿಚಾರ ಹಂಚಿಕೊಳ್ಳೋವಂತಹ ಕೆಲಸ ಮಾಡಿದ್ರೆ ಖಂಡಿತ ಪೊಲೀಸರು ನಿಮ್ಮನೆಗೇ ಬರ್ತಾರೆ. ಹೇಗೆ ಅಂತೀರಾ..? ನಿಮ್ಮ ವಾಟ್ಸಾಪ್​ನ್ನು ನಿಮಗರಿಯದಂತೆಯೇ ವಾಚ್​ ಮಾಡ್ತಿದೆ ವಾಟ್ಸಾಪ್​ ಸಂಸ್ಥೆ. ಹಾಗೇ ಸಂಶಯಾಸ್ಪದವಾಗಿ ಏನು ಕಂಡು ಬಂದ್ರೂ ನಿಮ್ಮ ಡೀಟೇಲ್ಸ್​ ಡೈರೆಕ್ಟ್​ ಪೊಲೀಸರಿಗೆ ಸಿಗುತ್ತೆ.

ವಾಟ್ಸಾಪ್​ ಸಂವಹನವನ್ನು ಸರಳವಾಗಿಸಿರುವುದು ಸುಳ್ಳಲ್ಲ. ಆದರೆ ಭಾರತದಲ್ಲಿ ವಾಟ್ಸಾಪ್​ ಮೂಲಕ ತಪ್ಪು ಮಾಹಿತಿ, ಪ್ರಚೋದನಾತ್ಮಕ ಮಾಹಿತಿಗಳು ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ ಎಂಬ ವಿಚಾರವೂ ಬಯಲಾಗಿದೆ. ಸಂಘರ್ಷಗಳನ್ನು ಉಂಟು ಮಾಡುವುದಕ್ಕಾಗಿಯೇ ವಾಟ್ಸಾಪ್​ ಮೂಲಕ ವದಂತಿಗಳನ್ನು ಹಬ್ಬಲಾಗುತ್ತಿದೆ ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. ಪ್ರತಿ ಬಳಕೆದಾರರ ಮೇಲೆ ವಾಟ್ಸಾಪ್​ ಸಂಸ್ಥೆ ಗಮನವಿಡುತ್ತಿದೆ. ಕಾನೂನು ಜಾರಿ ನಿರ್ದೇಶನಾಲಯ ಯಾವುದೇ ಮಾಹಿತಿ ಕೇಳಿದಲ್ಲಿ ಸಂಸ್ಥೆ ನೀಡಲೇಬೇಕಾಗುತ್ತದೆ. ವ್ಯಕ್ತಿಯೊಬ್ಬನ ವಿಚಾರಣೆ ಸಂದರ್ಭ ಪೊಲೀಸರು ಮಾಹಿತಿಯನ್ನು ಕೇಳಿದಲ್ಲಿ ಕಂಪನಿಯು ವ್ಯಕ್ತಿಯ ಹೆಸರು, ಐಪಿ ಎಡ್ರೆಸ್​, ಮೊಬೈಲ್​ ಸಂಖ್ಯೆ, ಸ್ಥಳ, ಮೊಬೈಲ್​ ನೆಟ್​ವರ್ಕ್​, ಇನ್ನು ಯಾವ ಮಾಡೆಲ್ ಮೊಬೈಲ್​ ಎಂಬುದನ್ನೂ ಪೊಲೀಸರಿಗೆ ತಿಳಿಸಬೇಕಾಗಿರುತ್ತದೆ.

ಯಾರ ಜೊತೆ ಚಾಟ್​ ಮಾಡುತ್ತಿದ್ದೆವು, ಎಷ್ಟು ಹೊತ್ತು ಚಾಟ್​ ಮಾಡಲಾಗಿದೆ, ಯಾವ ಸಮಯದಲ್ಲಿ ಚಾಟ್ ಮಾಡಲಾಗಿದೆ ಎಂಬ ಮಾಹಿತಿಯೂ ದೊರೆಯುತ್ತದೆ. ಹಾಗೇ ವ್ಯಕ್ತಿಯ ಮೊಬೈಲ್​ನಲ್ಲಿರುವ ಇತರ ಕಾಂಟಾಕ್ಟ್​ಗಳೂ ಪೊಲೀಸರಿಗೆ ಸುಲಭವಾಗಿ ದೊರೆಯಲಿದೆ. ವಾಟ್ಸಾಪ್​ ಕುರಿತು ಯಾವುದೇ ವಿಶೇಷ ಕಾನೂನು ಇರದೆ ಇರುವುದರಿಂದ 2000ದ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪೊಲೀಸರು ಅಪರಾಧಿಗಳನ್ನು ಬಂಧಿಸಬಹುದಾಗಿದೆ.

ಫೇಸ್​ಬುಕ್​ ಕಂಪನಿ ಒಡೆತನದ ವಾಟ್ಸಾಪ್​ ಇತ್ತೀಚೆಗೆ ಸುಳ್ಳು ಸುದ್ದಿ, ತಪ್ಪು ಮಾಹಿತಿ ರವಾನೆ ಮಾಡುವುದಕ್ಕೇ ಹೆಚ್ಚಾಗಿ ಬಳಕೆಯಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ವಾಟ್ಸಾಪ್​ ಬಳಕೆದಾರರನ್ನು ಎಚ್ಚರಿಸುತ್ತಲೇ ಬಂದಿದ್ದು, ಈಗ ಈ ಕುರಿತು ದೃಶ್ಯ ಮಾಧ್ಯಮದಲ್ಲಿ ಜಾಗೃತಿ ಮೂಡಿಸುತ್ತಿದೆ.

 

 

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments