ಇನ್ಮುಂದೆ ಕಾರ್ಡ್​ ಇಲ್ಲದೇ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳಬಹುದು..!

0
230

ಇನ್ಮುಂದೆ ಎಟಿಎಂನಲ್ಲಿ ಕಾರ್ಡ್ ಇಲ್ಲದೇ ಹಣ ಡ್ರಾ ಮಾಡಿಕೊಳ್ಳಬಹುದು..! ಅರೆ, ಕಾರ್ಡ್​ ಇಲ್ಲದೆ ಹಣ ಡ್ರಾ ಮಾಡಿಕೊಳ್ಳೋದಾ..?
ಹೌದು. ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಈ ಹೊಸ ಸೇವೆಯನ್ನು ಆರಂಭಿಸಿದೆ. ಎಟಿಎಂ ಕಾರ್ಡ್​ಗಳನ್ನು ನಕಲು ಮಾಡೋದು ಹಾಗೂ ದುರ್ಬಳಕೆ ಆಗೋದನ್ನು ತಪ್ಪಿಸಲು ಎಸ್​ಬಿಐ ಮೊಟ್ಟ ಮೊದಲ ಬಾರಿಗೆ ಈ ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಈ ಹೊಸ ಸೇವೆಗೆ ‘ಯೋನೊ ಕ್ಯಾಶ್​’ ಅಂತ ಕರೀತಾರೆ. ಸದ್ಯ ಎಸ್​ಬಿಐನ 16,500 ಎಟಿಎಂಗಳಲ್ಲಿ ಈ ಸೇವೆ ಲಭ್ಯವಿದೆ. ಈ ಎಟಿಎಂ ಕೇಂದ್ರಗಳನ್ನು ‘ಯೋನೊ ಕ್ಯಾಶ್​ ಪಾಯಿಂಟ್​​ಗಳು ಅಂತ ಹೆಸರಿಸಲಾಗಿದೆ.
ಗ್ರಾಹಕರು ತಮ್ಮ ಮೊಬೈಲ್​ಗೆ ಯೋನೊ (ಯೂ ಓನ್ಲೀ ನೀಡ್​ ಒನ್​) ಆ್ಯಪ್ ಇನ್​ ಸ್ಟಾಲ್​ ಮಾಡಿಕೊಳ್ಳಬೇಕು. ಆಮೇಲೆ 6 ಡಿಜಿಟ್​ಗಳ ಪಿನ್​ ನಂಬರ್ ಸೆಟ್​ ಮಾಡ್ಬೇಕು. ಹಣ ಡ್ರಾ ಮಾಡಿಕೊಳ್ಳುವಾಗ ಆ್ಯಪ್​ ಓಪನ್ ಮಾಡಿ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡಿಕೊಳ್ಳಲಿರೋ ಆಪ್ಷನ್​ ಅನ್ನು ಕ್ಲಿಕ್ ಮಾಡಬೇಕು. ಆಗ ನೋಂದಾಯಿತ ಮೊಬೈಲ್​ ನಂಬರ್​ಗೆ ಮತ್ತೆ 6 ಅಂಕಿಗಳ ಪಿನ್ ನಂಬರ್ ಬರುತ್ತೆ. ಆ ಪಿನ್​ ನಂಬರ್ ಎಸ್​ಎಂಎಸ್ ಬಂದ 30 ನಿಮಿಷದೊಳಗೆ ಹತ್ತಿರದ ಯೋನೊ ಕ್ಯಾಶ್​ ಪಾಯಿಂಟ್​ಗೆ ಹೋಗಿ ಪಿನ್​ ನಂಬರ್ ಬಳಸಿ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಬಹುದು..!

LEAVE A REPLY

Please enter your comment!
Please enter your name here