ಸಂಜೆ 6 ಗಂಟೆಗೆ YesBank ಕಮ್​ಬ್ಯಾಕ್

0
438

ಬೆಂಗಳೂರು: ಇಂದು ಸಂಜೆ 6 ಗಂಟೆಯಿಂದ YesBank ಮತ್ತೆ ಕಾರ್ಯಾರಂಭ ಮಾಡಲಿದೆ. ಮರುಪಾವತಿಸದ ಸಾಲದ ಸುಳಿಯಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ YesBank ಸಂಪೂರ್ಣ ದಿವಾಳಿ ಆಗುವ ಆತಂಕದಲ್ಲಿತ್ತು. ಆದರೆ ಇದೀಗ ಯೆಸ್ ಬ್ಯಾಂಕ್​ನ ಒಂದು ಷೇರು 60 ರೂಪಾಯಿ ಗಡಿ ದಾಟಿದೆ. ಹಾಗಾಗಿ ಒಂದೇ ವಾರದಲ್ಲಿ ಸುಮಾರು ಶೇ.75ರಷ್ಟು ಏರಿಕೆ ಕಂಡಿದ್ದು, ಇಂದು ಸಂಜೆಯಿಂದ ಯೆಸ್ ಬ್ಯಾಂಕ್​ನ ಎಲ್ಲಾ ಕಾರ್ಯಗಳು ಆರಂಭವಾಗುತ್ತದೆ ಎಂದು ನಿಯೋಜಿತ ಸಿಇಓ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಯೆಸ್ ಬ್ಯಾಂಕ್ ಮತ್ತೆ ಆರಂಭಿಸುವುದರ ಬಗ್ಗೆ ಮಾಹಿತಿ ನೀಡಿರುವ ಅವರು, ‘ಬ್ಯಾಂಕ್​ನಲ್ಲಿ ಹಣಕಾಸು ಮೂಲಕ್ಕೆ ಯಾವುದೇ ಕೊರತೆಯಿಲ್ಲ. ಇಂದು ಸಂಜೆ 6 ಗಂಟೆ ನಂತರ ಬ್ಯಾಂಕ್​ನ ಕೆಲಸ ಕಾರ್ಯಗಳೆಲ್ಲವೂ ಆರಂಭವಾಗಲಿದೆ. ಇನ್ನು ಠೇವಣಿಗಾಗಿ ಜನಜಂಗುಳಿ ಕಂಡು ಬಂದರೆ ವೀಕೆಂಡ್​ನಲ್ಲೂ ಕೆಲಸ ಮಾಡಲು ನಮ್ಮ ಉದ್ಯೋಗಿಗಳು ಸಿದ್ಧರಾಗಿದ್ದಾರೆ‘ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here