Home ದೇಶ-ವಿದೇಶ ಮುಳುಗೇ ಹೋಯ್ತಾ Yes Bank?  ಎಟಿಎಂನಲ್ಲಿ ದುಡ್ಡಿಲ್ಲ, ನೆಟ್ ಬ್ಯಾಂಕಿಂಗ್ ವರ್ಕ್​ ಆಗ್ತಿಲ್ಲ..! ಮುಂದೇನು?

ಮುಳುಗೇ ಹೋಯ್ತಾ Yes Bank?  ಎಟಿಎಂನಲ್ಲಿ ದುಡ್ಡಿಲ್ಲ, ನೆಟ್ ಬ್ಯಾಂಕಿಂಗ್ ವರ್ಕ್​ ಆಗ್ತಿಲ್ಲ..! ಮುಂದೇನು?

ನವದೆಹಲಿ : ಮರುಪಾವತಿಸದ ಸಾಲದ ಸುಳಿಯಲ್ಲಿ ಸಿಲುಕಿರುವ yes Bank ಬಿಕ್ಕಟ್ಟಿನಲ್ಲಿದ್ದು, ಸಂಪೂರ್ಣ ದಿವಾಳಿ ಆಗುವ ಆತಂಕದಲ್ಲಿದೆ. ಇತ್ತ ಬ್ಯಾಂಕಿನಲ್ಲಿ ತಮ್ಮ ಹಣ ಇಟ್ಟಿರುವ ಗ್ರಾಹಕರು ಸಂಪೂರ್ಣವಾಗಿ ಪರದಾಡುವಂತಾಗಿದೆ.  yes Bank ನೆಟ್​ ಬ್ಯಾಂಕಿಂಗ್​ ಸೇವೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಗ್ರಾಹಕರನ್ನು ಚಿಂತೆಗೀಡು ಮಾಡಿದೆ.  ಕ್ರೆಡಿಟ್ , ಡೆಬಿಟ್​ ಕಾರ್ಡ್​ಗಳನ್ನು ಬೇರೆ ಬ್ಯಾಂಕ್​ಗಳಲ್ಲೂ ಬಳಸಲಾಗದೆ ಗ್ರಾಹಕರು ಪರದಾಡುವಂತಾಗಿದೆ.

 ನಿನ್ನೆ ರಾತ್ರಿ  yes Bank​ ಸೂಪರ್​ಸೀಡ್ ಆದ ವಿಷಯ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಬ್ಯಾಂಕ್ ಹಾಗೂ ಎಟಿಎಂ ಮುಂದೆ ಗ್ರಾಹಕರು ಸಾಲು ಸಾಲಾಗಿ ನಿಂತಿದ್ದಾರೆ. ಇನ್ನು ಹಲವಾರು ಕಂಪೆನಿಗಳ ಸಂಬಳದ ಖಾತೆಯೂ ಯೆಸ್​ ಬ್ಯಾಂಕ್​ನಲ್ಲಿದೆ. ಹಣ ಬ್ಯಾಂಕ್​ನಲ್ಲಿ ಸುಭದ್ರವಾಗಿದೆ ಎಂದು ಆರ್​ಬಿಐ ಮತ್ತು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ ದಿನಬಳಕೆಯ ಖರ್ಚಿಗೆ ಏನು ಮಾಡುವುದು ಎನ್ನುವುದು ಗ್ರಾಹಕರ ಪ್ರಶ್ನೆಯಾಗಿದೆ.

yes Bank ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಬೆನ್ನಲ್ಲೇ ನಿನ್ನೆಯೇ ಹಳೆ  ಆಡಳಿತ ಮಂಡಳಿಯನ್ನು ವಿಸರ್ಜಿಸಿ, ಹೊಸ ಆಡಳಿತ ಮಂಡಳಿಯನ್ನು ಆರ್​ಬಿಐ ರಚಿಸಲು ಮುಂದಾಗಿತ್ತು. ಜೊತೆಯಲ್ಲೇ  ವಿಥ್​ಡ್ರಾ ಲಿಮಿಟನ್ನು ದಿನಕ್ಕೆ 50 ಸಾವಿರಕ್ಕೆ ಇಳಿಸಿರುವುದು ಮತ್ತಷ್ಟು ಚಿಂತೆಗೆ ಎಡೆಮಾಡಿಕೊಟ್ಟಿದೆ.

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments