Yes ಬ್ಯಾಂಕ್ ಬಿಕ್ಕಟ್ಟು ; Phonepe ಸ್ಥಗಿತ..!

0
996

ನವದೆಹಲಿ: ತೀವ್ರ ಹಣಕಾಸಿನ ಬಿಕ್ಕಟ್ಟಿನಲ್ಲಿರುವ ಯೆಸ್ ಬ್ಯಾಂಕನ್ನು ಆರ್​ ​ಬಿಐ ತಾತ್ಕಾಲಿಕ ನಿಷೇಧಿಸಿರುವ ಹಿನ್ನೆಲೆಯಲ್ಲಿ  ಫೋನ್​ಪೇ ಯುಪಿಐ ಟ್ರಾನ್ಸಾಕ್ಷನ್ ಸಾಧ್ಯವಾಗುತ್ತಿಲ್ಲ. ಜನಪ್ರಿಯ ಮನಿ ಟ್ರಾನ್ಸ್​ಫರ್ ಆ್ಯಪ್ Phonepe ಸ್ಥಗಿತ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. 

 ಫೋನ್​ಪೇ ಅ್ಯಪ್ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹಣ ವರ್ಗಾವಣೆಗೆ ಪ್ರಯತ್ನಿಸಿದಾಗೆಲ್ಲಾ ‘ನಿಮ್ಮ ಟ್ರಾನ್ಸಾಕ್ಷನ್​ ಸಾಧ್ಯವಾಗುತ್ತಿಲ್ಲ, ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಆದಷ್ಟು ಬೇಗ ಸೇವೆಗೆ ಮರಳುತ್ತೇವೆ ‘  ಎಂಬ ನೋಟಿಫಿಕೇಶನ್​ ಕಾಣುತ್ತಿದೆ. 

ಫೋನ್​ಪೇ ಸಿಇಓ ಸಮೀರ್​  ‘ ಪ್ರಿಯ ಗ್ರಾಹಕರೇ, ದೀರ್ಘ ಅಡಚಣೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಮ್ಮ ಪಾಲುದಾರ ಬ್ಯಾಂಕ್​ (ಯೆಸ್ ಬ್ಯಾಂಕ್​) ಅನ್ನು ಆರ್​ಬಿಐ ನಿಷೇಧಿಸಿದೆ . ಮರಳಿ ಸೇವೆಯನ್ನು ಮುಂದುವರಿಸಲು ನಮ್ಮ ತಂಡ ಹಗಲಿರುಳು ಶ್ರಮಿಸುತ್ತಿದೆ. ಕೆಲವೇ ಸಮಯದಲ್ಲಿ ಮರಳಿ ಕಾರ್ಯ ನಿರ್ವಹಿಸುವ ಭರವಸೆ ಇದೆ . ನಿಮ್ಮ ತಾಳ್ಮೆಗೆ ಧನ್ಯವಾದ’.  ಎಂದು ಟ್ವೀಟ್ ಮಾಡಿದ್ದಾರೆ. 

   ಡಿಜಿಟಲ್ ಪೇಮೆಂಟ್ ಆ್ಯಪ್ ಫೋನ್ ಪೇ  ಯೆಸ್ ಬ್ಯಾಂಕ್​ನೊಂದಿಗೆ ಆಂತರಿಕ ಹೊಂದಾಣಿಕೆ ಮಾಡಿಕೊಂಡಿತ್ತು. ಈಗ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿ ಆರ್​ಬಿಐನಿಂದ ನಿಷೇಧ ಹೇರಲ್ಪಟ್ಟ ಯೆಸ್​ ಬ್ಯಾಂಕ್​​ನ ಸಮಸ್ಯೆಯಿಂದ  ಬಳಿಕ ಫೋನ್​ಪೇ ಸೌಲಭ್ಯಗಳು ಅಲಭ್ಯವಾಗಿದೆ.

LEAVE A REPLY

Please enter your comment!
Please enter your name here