ತಿರುಪತಿ : ಆರ್ಥಿಕ ಮುಗ್ಗಟ್ಟಿನಿಂದ ದಿವಾಳಿಯಾಗುವ ಮಟ್ಟಕ್ಕೆ ಬಂದಿರುವ Yes Bankನಿಂದ ತಿರುಪತಿ ತಿಮ್ಮಪ್ಪನ ಕಾಸು ಬಚಾವಾಗಿದೆ ಎಂಬ ವಿಷಯ ಬಯಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಈ ಹಿಂದೆ ಸುಮಾರು 1300 ಕೋಟಿಯಷ್ಟು ಹಣವನ್ನು Yes Bankನಲ್ಲಿ ಠೇವಣಿ ಇರಿಸಿತ್ತು. ಆದರೆ ಕೆಲವು ದಿನಗಳ ಹಿಂದಷ್ಟೇ ಟಿಟಿಡಿ ಈ ಠೇವಣಿ ಹಣವನ್ನು Yes Bankನಿಂದ ಬೇರೊಂದು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಈ ನಡೆಯಿಂದ ಸುಮಾರು 1300 ಕೋಟಿ ರೂ ಸುರಕ್ಷಿತವಾದಂತಿದೆ.