Home ಪವರ್ ಪಾಲಿಟಿಕ್ಸ್ ಸಿಎಂ ಪುತ್ರ ವಿಜಯೇಂದ್ರಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಪಟ್ಟ | ಇಲ್ಲಿದೆ ನೂತನ ಪದಾಧಿಕಾರಿಗಳ ಪಟ್ಟಿ

ಸಿಎಂ ಪುತ್ರ ವಿಜಯೇಂದ್ರಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಪಟ್ಟ | ಇಲ್ಲಿದೆ ನೂತನ ಪದಾಧಿಕಾರಿಗಳ ಪಟ್ಟಿ

ಬೆಂಗಳೂರು :  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಕರ್ನಾಟಕ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿದ್ದ ವಿಜಯೇಂದ್ರ ಪಕ್ಷದಲ್ಲಿ ಬಡ್ತಿ ಪಡೆದಿದ್ದಾರೆ.

ವಿಜಯೇಂದ್ರ ಅವರಲ್ಲದೆ  ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ತೇಜಸ್ವಿನಿ ಅನಂತ್​ ಕುಮಾರ್​​ನಿರ್ಮಲ್​ ಕುಮಾರ್​ ಸುರಾನಾ, ಮಾಲೀಕಯ್ಯ ಗುತ್ತೇದಾರ್, ಪ್ರತಾಪ್​ ಸಿಂಹ, ಎಂ.ಬಿ. ನಂದೀಶ್, ಎಂ ಶಂಕ್ರಪ್ಪ, ಎಂ ರಾಜೇಂದ್ರ​  ಕೂಡ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ.

ರಾಜ್ಯ ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿ 

ರಾಜ್ಯ ಉಪಾಧ್ಯಕ್ಷರು: ಬಿ.ವೈ. ವಿಜಯೇಂದ್ರ, ಅರವಿಂದ ಲಿಂಬಾವಳಿ, ನಿರ್ಮಲ್‌ ಕುಮಾರ್‌ ಸುರಾನ, ಶೋಭಾ ಕರಂದ್ಲಾಜೆ, ಮಾಲೀಕಯ್ಯ ಗುತ್ತೇದಾರ್‌, ತೇಜಸ್ವಿನಿ ಅನಂತ ಕುಮಾರ್‌, ಪ್ರತಾಪಸಿಂಹ, ಎಂ.ಬಿ. ನಂದೀಶ್‌,  ಎಂ. ಶಂಕರಪ್ಪ, ಎಂ. ರಾಜೇಂದ್ರ.

ರಾಜ್ಯ ಪ್ರಧಾನ ಕಾರ್ಯದರ್ಶಿಗಳು: ಎನ್‌. ರವಿಕುಮಾರ್‌, ಸಿದ್ದರಾಜು, ಅಶ್ವತ್ಥ ನಾರಾಯಣ, ಮಹೇಶ್‌ ಟೆಂಗಿನಕಾಯಿ.

ರಾಜ್ಯ ಕಾರ್ಯದರ್ಶಿಗಳು: ಸತೀಶ್‌ ರೆಡ್ಡಿ, ತುಳಸಿ ಮುನಿರಾಜುಗೌಡ, ಎಸ್‌. ಕೇಶವ ಪ್ರಸಾದ್‌, ಜಗದೀಶ್‌ ಹಿರೇಮನಿ, ಸುಧಾ ಜಯರುದ್ರೇಶ್‌, ಭಾರತಿ ಮಗ್ದುಂ, ಹೇಮಲತಾ ನಾಯಕ್‌, ಉಜ್ವಲಾ ಬಡವಣ್ಣಾಚೆ, ಕೆ.ಎಸ್‌. ನವೀನ್‌, ವಿನಯ್‌ ಬಿದರೆ.

ರಾಜ್ಯ ಖಜಾಂಚಿ : ಸುಬ್ಬ ನರಸಿಂಹ, ಲೆಹರ್‌ ಸಿಂಗ್‌ ಸಿರೋಯಾ; ರಾಜ್ಯ ಕಾರ್ಯಾಲಯ ಕಾರ್ಯದರ್ಶಿ: ಲೋಕೇಶ್‌ ಅಂಬೇಕಲ್ಲು; ರಾಜ್ಯ ವಕ್ತಾರರು: ಕ್ಯಾ| ಗಣೇಶ್‌ ಕಾರ್ಣಿಕ್‌; ಪ್ರಕೋಷ್ಠಗಳ ಸಂಯೋಜಕರು: ಎಂ.ಬಿ. ಭಾನುಪ್ರಕಾಶ್‌, ಡಾ| ಎ.ಎಚ್‌. ಶಿವಯೋಗಿಸ್ವಾಮಿ

ಮೋರ್ಚಾ ಅಧ್ಯಕ್ಷರು

ಯುವ ಮೋರ್ಚಾ : ಡಾ| ಸಂದೀಪ್‌
ಮಹಿಳಾ ಮೋರ್ಚಾ : ಗೀತಾ ವಿವೇಕಾನಂದ
ರೈತ ಮೋರ್ಚಾ : ಈರಣ್ಣ ಕಡಾಡಿ
ಹಿಂದುಳಿದ ವರ್ಗಗಳ ಮೋರ್ಚಾ : ಅಶೋಕ್‌ ಗಸ್ತಿ
ಎಸ್‌.ಸಿ. ಮೋರ್ಚಾ : ಚಲವಾದಿ ನಾರಾಯಣಸ್ವಾಮಿ
ಎಸ್‌.ಟಿ. ಮೋರ್ಚಾ : ತಿಪ್ಪರಾಜು ಹವಾಲ್ದಾರ್‌
ಅಲ್ಪಸಂಖ್ಯಾಕರ ಮೋರ್ಚಾ : ಮುಜಾಂಮಿಲ್‌ ಬಾಬು.

 

LEAVE A REPLY

Please enter your comment!
Please enter your name here

- Advertisment -

Most Popular

ಮಂಗಳೂರು ನಗರ ವ್ಯಾಪ್ತಿಯಲ್ಲಿ ‘ನಿಷೇಧಾಜ್ಞೆ’ ಜಾರಿಗೆ ಪೊಲೀಸ್ ಕಮೀಷನರ್ ಆದೇಶ..!

ಮಂಗಳೂರು : ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯ ಭೂಮಿ ಪೂಜೆ ಹಿನ್ನೆಲೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಗೆ ಆದೇಶಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಆದೇಶವನ್ನ ಹೊರಡಿಸಿದ್ದು,...

ಎಂಟಿಬಿ v/s ಶರತ್ ಮುಸುಕಿನ ಗುದ್ದಾಟ ಶುರು

ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ರಾಜಕೀಯ ಜಿದ್ದಾಜಿದ್ದಿನ ರಾಜಕೀಯ. ಕಳೆದ ಬೈ ಎಲೆಕ್ಷನ್ ನಲ್ಲಿ ಎಂಟಿಬಿ ನಾಗರಾಜ್ ಸೋತ ನಂತರ ಹೊಸಕೋಟೆ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು...

ಕೋವಿಡ್ ಸೋಂಕಿತ ಮೃತಪಟ್ಟು ಮೂರು ದಿನ ಕಳೆದರೂ ಮನೆಯವರಿಗೆ ಮಾಹಿತಿ ಇಲ್ಲ – ಮೃತನ ಸಂಬಂಧಿಕರಿಂದ ಆಕ್ರೋಶ

ದೇವನಹಳ್ಳಿ : ಕೋವಿಡ್ ಸೋಂಕಿತ ಮೃತಪಟ್ಟು ಮೂರು ದಿನ ಕಳೆದರೂ ಮನೆಯವರಿಗೆ ಮಾಹಿತಿ ನೀಡಿಲ್ಲ ಅಂತ ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆಕಾಶ್ ಆಸ್ಪತ್ರೆಯಲ್ಲಿ...

ಶಾಸಕರಿಗೆ ರಾಖಿ ಕಟ್ಟಿದ ಮಹಿಳೆಯರು..

ಕೊಪ್ಪಳ : ಇಂದು ರಾಖಿ ಹಬ್ಬ.. ನಾಡಿನೆಲ್ಲೆಡೆ ತಂಗಿಯರು ಅಣ್ಣಂದಿರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅದೇ ರೀತಿ ಕೊಪ್ಪಳದ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸೂಗೂರು ಅವರಿಗೂ...

Recent Comments