ಬೆಂಗಳೂರು : ಮಾಜಿ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿಧಿವಶರಾಗಿ ಒಂದು ವರ್ಷ ಕಳೆದಿದ್ದು, ತಮ್ಮ ಆಪ್ತ ಗೆಳಯನನ್ನು ನೆನೆದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾವುಕ ಟ್ವೀಟ್ ಮಾಡಿದ್ದಾರೆ .
“ನನ್ನ ಪರಮಾಪ್ತ ಸ್ನೇಹಿತ ಅನಂತ್ ಕುಮಾರ್ ನಮ್ಮನಗಲಿದ ದಿನ ನೆನೆದರೆ ಮನಸ್ಸು ಭಾರವಾಗುವುದು ” ಎಂದು ಬಿಎಸ್ವೈ ಅನಂತ್ ಕುಮಾರ್ ಅವರನ್ನು ನೆನೆದಿದ್ದಾರೆ. ”ಸರಳ ಸಜ್ಜನಿಕೆಯ ವ್ಯಕ್ತಿ, ಸಂಘಟನಾ ಚತುರ, ರಾಜ್ಯ ಮತ್ತು ಕೇಂದ್ರಕ್ಕು ಕೊಂಡಿಯಂತಿದ್ದ, ಅದ್ವಿತೀಯ ನಾಯಕ, ನನ್ನ ಪರಮಾಪ್ತ ಶ್ರೀ ಅನಂತ್ ಕುಮಾರ್ ಅವರು, ನಮ್ಮನ್ನಗಲಿದ ದಿನ ನೆನೆದರೆ ಮನಸ್ಸು ಭಾರವಾಗುವುದು.ದೇಶಕ್ಕಾಗಿ ನೀಡಿದ ಸೇವೆಯಿಂದ ಅವರು ಸದಾ ಜೀವಂತ. ಅದಮ್ಯ ಚೇತನ ಅನಂತ್ ಕುಮಾರ್ ಅವರ ಪುಣ್ಯತಿಥಿಯಂದು ನನ್ನ ಭಾವಪೂರ್ಣ ಶ್ರದ್ಧಾಂಜಲಿ” ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಕಾನ್ಸರ್ ನಿಂದ ಬಳಲುತ್ತಿದ್ದ ಅನಂತ್ ಕುಮಾರ್ 2018 ನವೆಂಬರ್ 12 ರಂದು ಅಗಲಿದ್ದರು.