40 ನಿಮಿಷದ ಆಡಿಯೋ ಬಾಂಬ್ ಸಿಡಿಸಿಯೇ ಬಿಟ್ರು ಸಿಎಂ..!

0
361

ಬೆಂಗಳೂರು :  ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ ಅವರು 40 ನಿಮಿಷದ ಆಡಿಯೋ ಬಾಂಬ್​ ಅನ್ನು ಸಿಡಿಸಿಯೇ ಬಿಟ್ಟಿದ್ದಾರೆ.

ಗುರುಮಿಠ್ಕಲ್ ಜೆಡಿಎಸ್​ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರ ಜೊತೆ ಬಿಎಸ್​ವೈ ಮಾತನಾಡಿದ್ದಾರೆ ಎನ್ನಲಾದ ಸುಮಾರು 14 ನಿಮಿಷದ ಆಡಿಯೋ ತುಣಕನ್ನು ಸಿಎಂ ರಿಲೀಸ್ ಮಾಡಿದ್ರು. ಆ ವಿಡಿಯೋ ಪ್ರಕಾರ ಬಿಎಸ್​ವೈ ಶರಣಗೌಡ ಅವರಿಗೆ ಹಣದ ಆಮಿಷ ಮತ್ತು ಟಿಕೆಟ್​ ನೀಡುವ ಭರವಸೆಯ ಜೊತೆ ಮಂತ್ರಿಗಿರಿಯ ಆಮಿಷವನ್ನೂ ಒಡ್ಡಿರುವ ಆರೋಪ ಕೇಳಿಬಂದಿದೆ. ಆದರೆ, ಆಡಿಯೋದಲ್ಲಿನ ಧ್ವನಿ ನನ್ನದಲ್ಲ ಅಂತ ಆರಂಭದಲ್ಲಿ ಹೇಳಿಕೊಂಡಿದ್ದ ಯಡಿಯೂರಪ್ಪ, ಬಳಿಕ ಆ ಧ್ವನಿ ನಂದೇ ಅಂತ ಒಪ್ಪಿಕೊಂಡಿದ್ರು.

ಆಡಿಯೋದಲ್ಲಿನ ಧ್ವನಿ ಬಿಎಸ್​ವೈ ಅವರದ್ದೇ..ಆದರೆ ಅದನ್ನು ಬೇಕಾದಂತೆ ಮುಖ್ಯಮಂತ್ರಿಗಳು ತುಂಡರಿಸಿ ತಿರುಚಿದ್ದಾರೆ ಎಂಬ ಆರೋಪವನ್ನು ಸ್ವತಃ ಬಿಎಸ್​ವೈ ಹಾಗೂ ಬಿಜೆಪಿ ನಾಯಕರು ಮಾಡ್ತಿದ್ದಾರೆ.

ಬಿಜೆಪಿಯ ಆರೋಪಕ್ಕೆ ತಿರುಗೇಟು ಕೊಟ್ಟ ಕುಮಾರಸ್ವಾಮಿ ಅವರು, ‘ಕೆಲವೇ ಕೆಲವು ನಿಮಿಷದ ಆಡಿಯೋವನ್ನೇ ನಿಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸಂಪೂರ್ಣ ಆಡಿಯೋ ರಿಲೀಸ್ ಮಾಡಿದ್ರೇ ಅಷ್ಟೇ ಕಥೆ ಅಂತ’ ಎಚ್ಚರಿಕೆಯನ್ನೂ ನೀಡಿದ್ರು! ಅದರಂತೆ ಇಂದು 40 ನಿಮಿಷದ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ. ಆ ಆಡಿಯೋದಲ್ಲಿ ಬಿಜೆಪಿ ಶಾಸಕ ಶಿವನಗೌಡ, ಪ್ರೀತಮ್​ ಗೌಡ,  ಎಂಎಲ್​ಎ ನಾಗನಗೌಡ ಅವರ ಪುತ್ರ ಶರಣಗೌಡ ಮತ್ತು ಬಿಎಸ್​ವೈ ಹಾಗೂ ಮತ್ತೋರ್ವ ಅನಾಮಿಕ ಮಾತಾನಾಡಿರುವುದು ತಿಳಿದುಬಂದಿದೆ.  ಈ ಆಡಿಯೋ ಬಿಜೆಪಿ ಹಾಗೂ ಬಿ.ಎಸ್​ ಯಡಿಯೂರಪ್ಪ ಅವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ.

LEAVE A REPLY

Please enter your comment!
Please enter your name here