ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಾಲ್ಕನೇ ಬಾರಿ ಕೊವಿಡ್ ಟೆಸ್ಟ್ಗೆ ಒಳಗಾಗಿದ್ದು, ಈ ಬಾರಿಯೂ ಕೊರೊನಾ ನೆಗಿಟಿವ್ ಬಂದಿದೆ.
ಗೃಹ ಕಚೇರಿ ಕೃಷ್ಣಾ, ಸರ್ಕಾರಿ ನಿವಾಸ ಕಾವೇರಿ ಮತ್ತು ಅಧಿಕೃತ ನಿವಾಸ ಧವಳಗಿರಿಯ ಕೆಲ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರೋ ಹಿನ್ನೆಲೆಯಲ್ಲಿ ಸಿಎಂ ಕ್ವಾರೆಂಟೀನ್ನಲ್ಲಿದ್ದಾರೆ. ಕೊವಿಡ್ ಪರೀಕ್ಷೆ ಮಾಡಿಸಿದ್ದು, ಅದರ ವರದಿ ಬಂದಿದೆ. ಇದುವರೆಗೆ ಅವರು ನಾಲ್ಕು ಬಾರಿ ಪರೀಕ್ಷೆ ಮಾಡಿಸಿದ್ದಾರೆ. ನಾಲ್ಕೂ ಬಾರಿಯೂ ನೆಗಿಟಿವ್ ಅಂತ ವರದಿ ಬಂದಿದೆ.