Thursday, September 29, 2022
Powertv Logo
Homeಈ ಕ್ಷಣ1000 ಕೋಟಿ ಬಜೆಟ್​ನಲ್ಲಿ ಯಶ್ ಐತಿಹಾಸಿಕ ಸಿನಿಮಾ..?

1000 ಕೋಟಿ ಬಜೆಟ್​ನಲ್ಲಿ ಯಶ್ ಐತಿಹಾಸಿಕ ಸಿನಿಮಾ..?

ಸ್ಯಾಂಡಲ್​ವುಡ್​​ ಸುಲ್ತಾನ್​​​, ಗ್ಲೋಬಲ್​ ಐಕಾನ್​​​​​, ಇಂಟರ್​​ನ್ಯಾಷನಲ್​ ಸೂಪರ್ ಸ್ಟಾರ್ ಯಾರಂದ್ರೆ ಅದು​​ ಒನ್​ ಅಂಡ್​ ಓನ್ಲಿ ನಮ್​​​ ರಾಕಿಭಾಯ್​​​. ಕೆಜಿಎಫ್​​ ತೂಫಾನ್​​ ನಂತ್ರ ರಾಜಾಹುಲಿಗೆ ರಾಜಮೌಳಿ ಡೈರೆಕ್ಷನ್​​ ಮಾಡ್ತಾರೆ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇತ್ತ ನರ್ತನ್​ ಪ್ರಾಜೆಕ್ಟ್ ಕೂಡ ಠುಸ್​​ ಆಯ್ತು. ಇದೀಗ ರಾಕಿಭಾಯ್ ಬರೋಬ್ಬರಿ​​ ಹೈಬಜೆಟ್​​ ಸಿನಿಮಾಗೆ ಯೆಸ್​​​​ ಎಂದಿದ್ದಾರೆ. ಯೆಸ್​​.. ನಿಜಕ್ಕೂ ಇದೊಂದು ಶಾಕಿಂಗ್​ ಸಂಗತಿ. ಡೈರೆಕ್ಟರ್​ ಯಾರು ಗೊತ್ತಾ..? ಮಿಸ್​ ಮಾಡದೆ ಈ ಸ್ಟೋರಿ ಓದಿ.

  • ರೊಬೋ, ಐ ನಂತ್ರ ಶಂಕರ್​​ ಚಿತ್ತ ರಾಕಿಭಾಯ್​ ಕಡೆಗೆ..!

ಸ್ಯಾಂಡಲ್​ವುಡ್​ ಸುಲ್ತಾನ್ ರಾಕಿಭಾಯ್​​​ ಸಕ್ಸಸ್​ ಹಾದಿ ನೆನಸ್ಕೊಂಡ್ರೆ ಮೈ ಜುಮ್ಮೆನ್ನುತ್ತೆ. ಇಡೀ ಇಂಡಿಯಾ ನಿಬ್ಬೆರಗಾಗಿ ಮಾಸ್ಟರ್​ಪೀಸ್​ ಸಾಧನೆಯ ಹಾದಿಯನ್ನು ಕಣ್ಣರಳಿಸಿ ನೋಡ್ತಿದೆ. ಭಾರತೀಯ ಚಿತ್ರರಂಗದ ಸ್ಟಾರ್​ ನಟರೂ ಕೂಡ ಟಾಪ್​​​ ಒನ್​ ನಟ ಎಂಬ ಬಿರುದು ಕೊಟ್ಟಿದ್ದಾರೆ. ರಾಜಾಹುಲಿ ನೆಕ್ಸ್ಟ್​​​​ ಪ್ರಾಜೆಕ್ಟ್​ ಬಗ್ಗೆ ಎಲ್ಲಾ ಕಡೆ ಗುಲ್ಲೆದ್ದಿದೆ. ಇದೀಗ ಅಚ್ಚರಿ ಎಂಬಂತೆ ರಾಕಿಂಗ್​ ಸ್ಟಾರ್​ ಯಶ್​ ಮುಂದಿನ ಸಿನಿಮಾದ ಅಪ್ಡೇಟ್​ ಬಗ್ಗೆ ಎಕ್ಸ್​​ಕ್ಲೂಸಿವ್​ ಮಾಹಿತಿ ಹೊರ ಬಿದ್ದಿದೆ.

ಯೆಸ್​​​.. ಟಾಲಿವುಡ್​​ ಕಾಸ್ಟ್ಲಿ ನಿರ್ಮಾಪಕ ದಿಲ್​ರಾಜು ಕೂಡ ಯಶ್​​​ಗೆ 100ಕೋಟಿ ಸಂಭಾವನೆಯ ಬೇಡಿಕೆ ಇಟ್ಟಿದ್ರಂತೆ. ಇತ್ತ ನರ್ತನ್​ ಪ್ರಾಜೆಕ್ಟ್​​​ ಕೂಡ ಆಫಿಶಿಯಲ್​ ಆದ್ರೂ, ಫೈನಲ್​ ಆಗದೆ ಠುಸ್​ ಆಗೋಯ್ತು. ರಾಜಮೌಳಿಯಂತಹ ಘಟಾನುಘಟಿ ನಿರ್ದೇಶಕರ ಹೆಸ್ರು ಕೂಡ ಕೇಳಿ ಬಂತು. ಆದ್ರೆ, ಯಶ್​ ತಲೆಯಲ್ಲಿ ಓಡ್ತಾ ಇರೋದೇನು ಅನ್ನೋ ಇನ್​ಸೈಡ್​​ ಕಹಾನಿಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ಹಿಸ್ಟಾರಿಕಲ್​ ಸಿನಿಮಾದಲ್ಲಿ ಯಶ್​ ಅಬ್ಬರಿಸೋಕೆ ಸಜ್ಜಾಗಿದ್ದಾರೆ.

ಕಾಲಿವುಡ್​​ ಟಾಪ್​​​ ಮೋಸ್ಟ್​ ಡೈರೆಕ್ಟರ್​​​ ಶಂಕರ್​​ ಚಿತ್ತ ರಾಕಿಭಾಯ್​ ಕಡೆ ನೆಟ್ಟಿದೆ. ರೋಬೋ, ಐ ಖ್ಯಾತಿಯ ಶಂಕರ್​ ಐತಿಹಾಸಿಕ ಸಿನಿಮಾಗೆ ಕೈ ಹಾಕಿದ್ದಾರಂತೆ. ತಮಿಳಿನ ಜನಪ್ರಿಯ ಕಾದಂಬರಿ ವೇಲ್​ಪರಿ ಎನ್ನುವ ಹಿಸ್ಟಾರಿಕ್​ ಕಥೆಯ ನಾಯಕನಾಗಿ ರಾಜಾಹುಲಿ ಆ್ಯಕ್ಟ್​​ ಮಾಡ್ತಾರಂತೆ. ತಮಿಳಿನ ಸ್ಟಾರ್​ ನಟ ಸೂರ್ಯನಿಗೆ ಓಕೆ ಆಗಿದ್ದ ಕಥೆ ರಾಕಿಭಾಯ್​​ ಸ್ಟಾರ್​ಡಂ ನಂತ್ರ ಶಿಪ್ಟ್​ ಆಗಿದೆ ಎನ್ನಲಾಗ್ತಿದೆ. ಬರೋಬ್ಬರಿ ಸಾವಿರ ಕೋಟಿ ಬಿಗ್​ ಬಜೆಟ್​​ನಲ್ಲಿ ಸಿನಿಮಾ ಬರಲಿದೆಯಂತೆ.

ಅದ್ದೂರಿ ಗ್ರಾಫಿಕ್ಸ್​​​, ಪ್ರತಿ ಸೀನ್​​ಗಳಲ್ಲೂ ಬಾಹುಬಲಿ ಮೀರಿಸೋ ದೃಶ್ಯವೈಭವ, ಬಿಗ್​ ಸ್ಟಾರ್​ ಕಾಸ್ಟಿಂಗ್​​​​​​, ಅಮೋಘ, ಅದ್ಭುತ ಸಾಂಗ್​​ಗಳು, ಹೀಗೆ ಪಕ್ಕಾ ಆ್ಯಕ್ಷನ್​ ವೆಂಚರ್​ನಲ್ಲಿ ಸಿನಿಮಾ ಮೂಡಿ ಬರಲಿದೆಯಂತೆ. ಇಂಡಿಯನ್​ ಸಿನಿಮಾದಲ್ಲೇ ಇತಿಹಾಸ ಬರೆಯೋ ಮೆಗಾ ಪ್ಲಾನ್​ ನಡಿತಿದೆ ಎನ್ನಲಾಗ್ತಿದೆ. ಶಂಕರ್​​ ಸಿನಿಮಾಗಳ ತಾಕತ್ತು ಎಲ್ರಿಗೂ ಗೊತ್ತಿದೆ. ಇದೀಗ ರಾಕಿಭಾಯ್​ ಜತೆ ಕೈ ಜೋಡಿಸಿ ಹಾಲಿವುಡ್​ ಕೂಡ ಮುಟ್ಟಿ ನೋಡಿಕೊಳ್ಳುವಂತೆ ಸಿನಿಮಾ ಮಾಡೋ ಭರ್ಜರಿ ತಯಾರಿ ನಡಿತಿದೆ ಎನ್ನಲಾಗ್ತಿದೆ. ಎನಿವೇ, ಈ ಕುರಿತು ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

- Advertisment -

Most Popular

Recent Comments