Thursday, October 6, 2022
Powertv Logo
Homeಸಿನಿಮಾಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ರಾಕಿಂಗ್ ಸ್ಟಾರ್ ಯಶ್..!

ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ರಾಕಿಂಗ್ ಸ್ಟಾರ್ ಯಶ್..!

ರಾಕಿಂಗ್ ಸ್ಟಾರ್ ಯಶ್ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ್ದಾರೆ. ಕೆಜಿಎಫ್ -2 ಬ್ಯುಸಿ ಶೆಡ್ಯೂಲ್ ನಡುವೆ ಯಶ್ ಪ್ರಧಾನಿಯನ್ನು ಭೇಟಿಯಾಗಿದ್ದು ಯಾಕೆ ಅಂತೀರಾ? ಅಸಲಿಗೆ ರಾಕಿಭಾಯ್ ಭೇಟಿಯಾಗಿದ್ದು ರಿಯಲ್ ಪ್ರಧಾನಿಯನ್ನಲ್ಲ.. ಬದಲಾಗಿ ರೀಲ್ ಪ್ರಧಾನಿ ರಿಮಿಕಾ ಸೇನ್ ಅವರನ್ನು.
ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳ್ತಿರೋ ಕೆಜಿಎಫ್​ -2ನಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಪ್ರಧಾನಿ ರಿಮಿಕಾ ಸೇನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪ್ರಧಾನಿಯನ್ನು ರಾಕಿಭಾಯ್ ಮೀಟ್ ಆಗಿದ್ದಾರೆ. ಯಶ್ ಮತ್ತು ರವೀನಾ ಜೊತೆಗಿರೋ ಫೋಟೋ, ವಿಡಿಯೋ ಗಮನ ಸೆಳೆಯುತ್ತಿದ್ದು, ಸ್ವತಃ ಯಶ್ ಈ ಫೋಟೋವನ್ನು ಇನ್ಸ್ಟಾಗ್ರಾಮಲ್ಲಿ ಹಂಚಿಕೊಂಡಿದ್ದಾರೆ. ” ಪ್ರಧಾನಮಂತ್ರಿ ರಮಿಕಾ ಸೇನ್​​ರನ್ನು ರಾಕಿ ಬೌಂಡ್ರಿಯೊಳಗೆ ಬರೋಕೆ ಸ್ವಾಗತ ಕೋರದಿರಬಹುದು. ಆದ್ರೆ, ರವೀನಾ ಟಂಡನ್​ ಅವರನ್ನು ಯಶ್ ಹೋಮ್​​ಟೌನ್​ಗೆ ಸ್ವಾಗತ ಮಾಡ್ಲೇಬೇಕು. ನೀವು ಚಿತ್ರತಂಡ ಸೇರಿದ್ದು ಸಂತಸ ತಂದಿದೆ. ಸ್ವಾಗತ’ ಅಂತ ಯಶ್ ಫೋಟೋ ಜೊತೆ ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments