ಸುಮಲತಾ ಮೇಲೆ ವಿಶ್ವಾಸವಿರಲಿ: ನಟ ಯಶ್​

0
176

ಮಂಡ್ಯ: ಲೋಕಸಭಾ ಚುನಾವಣೆ ಸಮೀಪಿಸಿದ್ದು ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸಮಲತಾ ಅಂಬರೀಶ್ ಪರ ರಾಕಿಂಗ್​ ಸ್ಟಾರ್ ಯಶ್​ ಎರಡನೇ ದಿನವೂ ಪ್ರಚಾರ ನಡೆಸಿದ್ದಾರೆ. ಮಂಗಳವಾರ 24 ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ನಡೆಸಿದ್ದ ಯಶ್ ಅವರು ಇಂದು ರಂಗನಾಥಸ್ವಾಮಿ ದೇವಸ್ಥಾನದಿಂದ ಪ್ರಚಾರ ಆರಂಭಿಸಿದ್ದು, 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ ನಡೆಸಿದ್ದಾರೆ.

“ಒಂಟಿ ಹೆಣ್ಣು ಚುನಾವಣೆಗೆ ಸ್ಪರ್ಧಿಸುತ್ತೇನೆಂದು ಮುಂದೆ ಬಂದರೆ ತಪ್ಪಾ ಅಂತ ಪ್ರಶ್ನಿಸಿರೋ ಯಶ್​ ಅವರು ಧೈರ್ಯ ಮಾಡಿ ಮುಂದೆ ಬಂದ ಹೆಣ್ಣು ಮಗಳನ್ನು ಹೊಸಕಿಹಾಕೋದು ತಪ್ಪು ಅಂತ ಹೇಳಿದ್ದಾರೆ. ಹಾಗೆಯೇ ಸುಮಲತಾ ಅವರ ಮೇಲೆ ವಿಶ್ವಾಸವಿರಿಸಿ ಮತಚಲಾಯಿಸಿ, ಅವರು ವಿಶ್ವಾಸ ಉಳಿಸಿಕೊಳ್ತಾರೆ” ಅಂತ ಕೇಳಿಕೊಂಡಿದ್ದಾರೆ.

ನಾಲ್ವರು ಸುಮಲತಾ ಅವರು ಕಣಕ್ಕಿಳಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಯಶ್​ ಅವರು, “ನಾಲ್ವರು ಸುಮಲತಾ ಸ್ಪರ್ಧಿಸುತ್ತಿದ್ದು, ನಮ್ಮ ಕ್ರಮ ಸಂಖ್ಯೆ 20” ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here