ಬೆಂಗಳೂರು : ‘ಯಶ್’ ಬೈಕ್ ಸೀಜ್ ಆಗಿದೆ..! ಅರೆ, ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಬೈಕ್ ಸೀಜ್ ಆಯ್ತಾ? ಯಾಕೆ ಬೈಕ್ ಸೀಜ್ ಮಾಡಲಾಯ್ತು ಅಂತ ಯೋಚಿಸ್ತಿದ್ದೀರಾ? ಸ್ಟೋರಿಯ ಅಸಲಿಯತ್ತೇ ಬೇರೆ ಇದೆ..!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಬೈಕ್ ರೀತಿಯಲ್ಲೇ ಭೂಪನೊಬ್ಬ ಬೈಕ್ ಆಲ್ಟ್ರೇಷನ್ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ..!
ಯಶ್ ಅಭಿಮಾನಿ ಸಂಘದ ಕಾರ್ಯದರ್ಶಿ ಸುನೀಲ್ ರಾಕಿಭಾಯ್ ಬೈಕ್ ರೀತಿಯಲ್ಲಿ ಬೈಕ್ ಆಲ್ಟ್ರೇಷನ್ ಮಾಡಿದ್ದಾತ. ಆರ್ಟಿಒ ಅನುಮತಿ ಇಲ್ಲದೆ ಬೈಕ್ ಆಲ್ಟ್ರೇಷನ್ ಮಾಡುವಂತಿಲ್ಲ. ಬೈಕ್ ಸೈಲೆಂನ್ಸರ್ನಿಂದ ಹೆಚ್ಚು ಸೌಂಡು ಬರುವಂತಿಲ್ಲ. ಆದ್ರೆ ಸುನೀಲ್ ಯಾವ್ದೇ ಪರ್ಮಿಷನ್ ಪಡೆಯದೆ ಬೈಕ್ ಆಲ್ಟ್ರೇಷನ್ ಮಾಡಿದ್ದ. ಹೀಗಾಗಿ ಕೆ.ಆರ್ ಪುರಂ ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಇನ್ಸ್ಪೆಕ್ಟರ್ ಎಂ.ಎ ಮೊಹಮ್ಮದ್ ಸುನೀಲ್ ಕೆಜಿಎಫ್ ಬೈಕನ್ನು ಸೀಜ್ ಮಾಡಿ, ಆತನನ್ನು ಬಂಧಿಸಿದ್ದಾರೆ.