ರಂಗದಲ್ಲೇ ಕುಸಿದು ಬಿದ್ದು ಯಕ್ಷಗಾನ ಕಲಾವಿದ ಸಾವು

0
203

ಉಡುಪಿ: ಯಕ್ಷಗಾನ ನಡೆಯುತ್ತಿರುವ ವೇಳೆ ಹೃದಯಾಘಾತದಿಂದ ರಂಗಸ್ಥಳದಲ್ಲೇ ಕುಸಿದು ಬಿದ್ದು ಕಲಾವಿದ ಚಂದ್ರಹಾಸ ಹುಡಗೋಡು ನಿಧನರಾಗಿದ್ದಾರೆ. ನಿನ್ನೆ ತಡರಾತ್ರಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಜೋಗಿಬೆಟ್ಟು ಗ್ರಾಮದಲ್ಲಿ ಜಲವಳ್ಳಿ ಮೇಳದ ಪ್ರದರ್ಶನ ನಡೆಯುತ್ತಿರುವಾಗ ಹುಡಗೋಡು ಚಂದ್ರಹಾಸ(52) ರಂಗದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

11.30 ರ ಸುಮಾರಿಗೆ ‘ಭೀಷ್ಮ ವಿಜಯ’ ಎಂಬ ಯಕ್ಷಗಾನ ಮಾಡುತ್ತಿದ್ದರು. ಇದೆ ವೇಳೆ ಸಲ್ವಾನಾಗಿ ಅಭಿನಯಿಸುತ್ತಿದ್ದ ಚಂದ್ರಹಾಸರು ಕುಸಿದು ಬಿದ್ದರು. ಅವರನ್ನು ತಕ್ಷಣವೇ ಬೈಂದೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅದಾಗಲೇ ಅವರು ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಉತ್ತರ ಕನ್ನಡ ಮೂಲದ ಬಡಗುತಿಟ್ಟು ಯಕ್ಷಗಾನದ ಖ್ಯಾತ ಕಲಾವಿದ ಚಂದ್ರಹಾಸ ಅವರು 30ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿದ್ದು ಹೆಚ್ಚಾಗಿ ಖಳನಾಯಕನ ಪಾತ್ರವನ್ನೇ ಆಯ್ಕೆ ಮಾಡುತ್ತಿದ್ದರು. ಮೇಳವನ್ನ ಬಿಟ್ಟು ಬಳಿಕ ಅತಿಥಿ ಕಲಾವಿದರಾಗಿ ಪಾತ್ರಗಳನ್ನು ಮಾಡುತ್ತಿದ್ದರು. ಚಂದ್ರಹಾಸ ಸಾಗರದಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷರಾಗಿದ್ದರು. ಯಕ್ಷಗಾನ ಪ್ರಸಂಗದಲ್ಲಿ ಅವರ ಪುತ್ರ ಪ್ರದೀಪ್ ಸಹ ಭಾಗಿಯಾಗಿದ್ದರು ಎನ್ನಲಾಗಿದೆ. 

 

ಸಹ ಆಗಿದ್ರು ಚಂದ್ರಹಾಸ

ರಾಗಿದ್ದ ಚಂದ್ರಹಾಸ.

LEAVE A REPLY

Please enter your comment!
Please enter your name here