Homeಸಿನಿ ಪವರ್ಟಾಲಿವುಡ್ಯೂಟ್ಯೂಬ್​ನಲ್ಲೀಗ ದರ್ಶನ್​ 'ಯಜಮಾನ'..!

ಯೂಟ್ಯೂಬ್​ನಲ್ಲೀಗ ದರ್ಶನ್​ ‘ಯಜಮಾನ’..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೀಗ ಯೂಟ್ಯೂಬ್​ನಲ್ಲಿ ‘ಯಜಮಾನ’..! ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಟ್ರೇಲರ್ ಈಗ ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ನಂಬರ್​ 1 ಸ್ಥಾನದಲ್ಲಿದೆ.
ನಿನ್ನೆಯಷ್ಟೇ ಯೂಟ್ಯೂಬ್​ಗೆ ಲಗ್ಗೆ ಇಟ್ಟ ಟ್ರೇಲರ್ ಕೇವಲ 24ಗಂಟೆಯೊಳಗೆ 8 ಮಿಲಿಯನ್​ಗಿಂತಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದಿದೆ. 2.46 ನಿಮಿಷ​ ಇರುವ ಈ ಟ್ರೇಲರ್​ ನಲ್ಲಿ ದರ್ಶನ್ ಅವರ ಖದರ್ ಹಾಗೂ ಡೈಲಾಗ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.
ವಿ.ಹರಿಕೃಷ್ಣ ಮತ್ತು ಪಿ.ಕುಮಾರ್ ನಿರ್ದೇಶನದ ‘ಯಜಮಾನ’ ಮಾರ್ಚ್​ 1ರಂದು ರಿಲೀಸ್ ಆಗಲಿದೆ. ಈಗಾಗಲೇ ಹಾಡುಗಳಿಂದ ಸೌಂಡು ಮಾಡಿದ್ದ ‘ಯಜಮಾನ’ ಸಿನಿಮಾ ಇದೀಗ ಟ್ರೇಲರ್ ಮೂಲಕ ಯೂಟ್ಯೂಬ್​ನಲ್ಲಿ ತನ್ನದೇ ಟ್ರೆಂಡ್​ ಸೆಟ್ಟು ಮಾಡಿದೆ. ಇನ್ನು ‘ಯಜಮಾನ’ ದರ್ಶನ್​ಗೆ ಜೋಡಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಡಾಲಿ ಧನಂಜಯ್, ಸಾಧುಕೋಕಿಲಾ, ರವಿಶಂಕರ್, ಮಂಡ್ಯ ರಮೇಶ್ ಮತ್ತಿತರರು ತಾರಗಣದಲ್ಲಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments