ಯಜಮಾನ’ ಟ್ರೇಲರ್ ರಿಲೀಸ್…ಸಿನಿಮಾ ‘ದರ್ಶನ’ಕ್ಕೆ ಡೇಟ್ ಫಿಕ್ಸ್..!

0
728

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಯಜಮಾನ ಟ್ರೇಲರ್ ರಿಲೀಸ್ ಆಗಿದೆ.  2 ನಿಮಿಷ 46 ನಿಮಿಷ ಇರೋ ಟ್ರೇಲರ್ ‘ಯಜಮಾನ’ ನ ಮೇಲಿನ ನಿರೀಕ್ಷೆಯನ್ನು ಸಿಕ್ಕಾಪಟ್ಟೆ ಹೆಚ್ಚಿಸಿದೆ.

ದರ್ಶನ್ ಅವರ ಡೈಲಾಗ್ ಸಕತ್ ಕಿಕ್ ಕೊಡುವಂತಿದೆ. ತನ್ನ ನೆಲದ ಜನರಿಗಾಗಿ ಹೋರಾಡುವ ‘ಯಜಮಾನ’ನಾಗಿ ದರ್ಶನ ನೀಡಿದ್ದಾರೆ ಚಾಲೆಂಜಿಂಗ್ ಸ್ಟಾರ್. ಈಗಾಗಲೇ ಚಿತ್ರದ ಹಾಡುಗಳು ಗಮನ ಸೆಳೆದಿವೆ. ಈಗ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿದೆ.

ಇನ್ನು ‘ಯಜಮಾನ’ನಿಗೆ ವಿ.‌ಹರಿಕೃಷ್ಣ‌ ಮತ್ತು ಪಿ. ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿ.ಹರಿಕೃಷ್ಣ ಸಂಗೀತದ ಬಲವನ್ನೂ ತುಂಬಿದ್ದಾರೆ. ಶೈಲಜಾ ನಾಗ್ ಮತ್ತು ಬಿ. ಸುರೇಶ್ ಬಂಡವಾಳ ಹಾಕಿದ್ದಾರೆ.

ದರ್ಶನ್ ಅವರಿಗೆ ಜೋಡಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಡಾಲಿ ಧನಂಜಯ್, ಸಾಧುಕೋಕಿಲಾ, ಮಂಡ್ಯ ರಮೇಶ್, ರವಿಶಂಕರ್ ಸೇರಿದಂತೆ ದೊಡ್ಡ ತಾರಗಣವಿದೆ.

ಇನ್ನು ಟ್ರೇಲರ್  ಕೊನೆಯಲ್ಲಿ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋದನ್ನು ಕೂಡ ಹೇಳಲಾಗಿದೆ. ಮಾರ್ಚ್ 1ಕ್ಕೆ ತೆರೆಯ ಮೇಲೆ ‘ಯಜಮಾನ’ನ  ‘ದರ್ಶನ’ ಆಗಲಿದೆ. ಅಂದರೆ, ಸಿನಿಮಾ ಮಾರ್ಚ್ 1ರಂದು ರಿಲೀಸ್ ಆಗುತ್ತದೆ.

ದರ್ಶನ್ ಅವರ ಕುರುಕ್ಷೇತ್ರವೇ ಮೊದಲು ರಿಲೀಸ್ ಆಗುತ್ತೆ. ಬಳಿಕ ಯಜಮಾನ ತೆರೆಗೆ ಬರುತ್ತಾನೆ ಅಂತ ಹೇಳಲಾಗುತ್ತಿತ್ತು. ಆದರೆ, ‘ಕುರುಕ್ಷೇತ್ರ’ ಅಬ್ಬರಕ್ಕೂ ಮುನ್ನ ‘ಯಜಮಾನ’ ಸದ್ದು ಮಾಡುತ್ತಾನೆ ಅನ್ನೋದು ಕೆಲವು ದಿನಗಳ ಹಿಂದಷ್ಟೇ ಗೊತ್ತಾಗಿತ್ತು. ಇದೀಗ ‘ಯಜಮಾನ’ ಥಿಯೇಟರ್​​ಗೆ ಎಂಟ್ರಿಕೊಡೋ ದಿನ ಕೂಡ ಪಕ್ಕಾ ಆಗಿದ್ದು ದರ್ಶನ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

LEAVE A REPLY

Please enter your comment!
Please enter your name here