Home ಸಿನಿ ಪವರ್ 'ಯಜಮಾನ', 'ಹುಚ್ಚ' ರೀ ರಿಲೀಸ್..!

‘ಯಜಮಾನ’, ‘ಹುಚ್ಚ’ ರೀ ರಿಲೀಸ್..!

ಚಂದನವನದ ‘ಕರ್ಣ’, ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆನಿಂತಿರುವ ಅಭಿನಯ ಭಾರ್ಗವ ಸಾಹಸಸಿಂಹ ಡಾ. ವಿಷ್ಣುವರ್ಧನ್​ ಅಭಿನಯದ ‘ಯಜಮಾನ’ ಮತ್ತು ಕನ್ನಡದ ‘ಮಾಣಿಕ್ಯ’, ಕನ್ನಡಿಗರ ಪ್ರೀತಿಯ ‘ರನ್ನ’ ಅಭಿನಯ ಚಕವರ್ತಿ ಕಿಚ್ಚ ಸುದೀಪ್ ಅಭಿನಯದ ‘ಹುಚ್ಚ..! ಈ ಎರಡೂ ಸಿನಿಮಾಗಳು ಸ್ಯಾಂಡಲ್​ವುಡ್​ನ ಎವರ್​​ಗ್ರೀನ್ ಸಿನಿಮಾಗಳು.

2000ನೇ ಇಸವಿಯಲ್ಲಿ ರಿಲೀಸ್ ಆಗಿದ್ದ ‘ಯಜಮಾನ’ ಬಹಳ ದೊಡ್ಡ ಮಟ್ಟಿನ ಯಶಸ್ಸು ಕಂಡಿತ್ತು. ಆರ್​.ಶೇಷಾದ್ರಿ, ರಾಧಾ ಭಾರತಿ ಆ್ಯಕ್ಷನ್ ಕಟ್ ಹೇಳಿದ್ದ ಈ ಸಿನಿಮಾ ವಿಷ್ಣುವರ್ಧನ್​ ಸಿನಿ ಜರ್ನಿಯ ಹೊಸ ಮೈಲುಗಲ್ಲು..! ಈ ಸಿನಿಮಾ ಬಂದಮೇಲೆ ವಿಷ್ಣು ಮೇಲಿನ ಅಭಿಮಾನ ಕನ್ನಡಿಗರಲ್ಲಿ ಮತ್ತಷ್ಟು ಹೆಚ್ಚಾಯ್ತು. ಆಗಲೇ ಕನ್ನಡಿಗರಲ್ಲಿ ಬೆರೆತು ಹೋಗಿದ್ದ ವಿಷ್ಣುವರ್ಧನ್​ ಕನ್ನಡಿಗರ ಪ್ರೀತಿಯ ‘ಯಜಮಾನ’ನಾಗಿ ಮತ್ತಷ್ಟು ಹತ್ತಿರವಾದ್ರು. ವಿಷ್ಣುದಾದಾ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು. ಶಶಿಕುಮಾರ್, ಅಭಿಜಿತ್, ಪ್ರೇಮ ಸೇರಿದಂತೆ ಬಹುದೊಡ್ಡ ತಾರಾಗಣವನ್ನು ಹೊಂದಿದ್ದ ಸಿನಿಮಾ ದಾಖಲೆಯ ಕಲೆಕ್ಷನ್ ಕೂಡ ಮಾಡಿತ್ತು. ಆ ಕಾಲದಲ್ಲಿ ಬರೋಬ್ಬರಿ ಸುಮಾರು 45 ಕೋಟಿಯನ್ನು ‘ಯಜಮಾನ’ ಬಾಚಿಕೊಂಡಿತ್ತು.

ಇನ್ನು, ಸುದೀಪ್. 2000ರಲ್ಲಿ ರಿಲೀಸ್ ಆದ ‘ಸ್ಮರ್ಶ ಸಿನಿಮಾ ಮೂಲಕ ನಾಯಕ ನಟನಾಗಿ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡವರು. ಅದಕ್ಕಿಂತ ಮೊದಲು ಬಂದ ಸಿನಿಮಾಗಳಲ್ಲಿ ಯಶಸ್ಸು ಅಷ್ಟಾಗಿ ಸಿಗ್ಲಿಲ್ಲ. ಆರಂಭದ ಎರಡು ಸಿನಿಮಾಗಳು ರಿಲೀಸ್​ ಆಗ್ಲೇ ಇಲ್ಲ. ಸ್ಮರ್ಶ ಮೂಲಕ ಹೊಸ ಜರ್ನಿ ಆರಂಭಿಸಿದ್ದ ಸುದೀಪ್​ಗೆ ಬಳಿಕ ಬಂದ ‘ಹುಚ್ಚ’ ಬಿಗ್​ ಬ್ರೇಕ್ ನೀಡ್ತು. 2001ರಲ್ಲಿ ರಿಲೀಸ್​ ಆದ ಓಂ ಪ್ರಕಾಶ್​ ರಾವ್ ನಿರ್ದೇಶನದ ‘ಹುಚ್ಚ’ ಸ್ಯಾಂಡಲ್​ವುಡ್​ನಲ್ಲಿ ಇತಿಹಾಸ ನಿರ್ಮಿಸುವುದರ ಜೊತೆಗೆ ಸುದೀಪ್ ಎಂಬ ಸ್ಟಾರ್​ ನಟನನ್ನು ಹುಟ್ಟುಹಾಕಿತ್ತು. ಈ ಸಿನಿಮಾ ನಂತ್ರ ಸುದೀಪ್ ಹಿಂತಿರುಗಿ ನೋಡಲೇ ಇಲ್ಲ. ಒಂದಿಷ್ಟು ಸೋಲು-ಗೆಲುವುಗಳ ಜೊತೆಗೆ ಹೆಜ್ಜೆ ಹಾಕಿರುವ ಸುದೀಪ್ ಇಂದು ‘ಪೈಲ್ವಾನ್’ ಆಗಿ ವಿಶ್ವದಾದ್ಯಂತ ಅಬ್ಬರಿಸ್ತಿದ್ದಾರೆ.

ಹೀಗೆ ವಿಷ್ಣುದಾದಾರ ಸಿನಿ ಜರ್ನಿಯ ಹೊಸ ಅಲೆ ‘ಯಜಮಾನ’ , ಸುದೀಪ್​ ಸಿನಿ ಜರ್ನಿಯ ಮೊದಲ ಬಿಗ್ ಹಿಟ್ ‘ಹುಚ್ಚ’ ಕನ್ನಡ ಚಿತ್ರರಂಗದಲ್ಲಿ ಇತಿಹಾಸವನ್ನು ಬರೆದಿರುವ ಸಿನಿಮಾಗಳು. ವಿಶೇಷ ಅಂದ್ರೆ ಈ ಎರಡೂ ಸಿನಿಮಾಗಳನ್ನು ನಿರ್ಮಿಸಿದ್ದು ಕೆ. ಮುಸ್ತಫಾ ರಹಮಾನ್. ಇವರೀಗ ವಿಷ್ಣುದಾದಾ, ಕಿಚ್ಚನ ಫ್ಯಾನ್ಸ್​ಗೆ ಸರ್​ಪ್ರೈಸ್ ಆಗಿ ಸ್ವೀಟ್ ನ್ಯೂಸ್​ ಒಂದನ್ನು ಕೊಟ್ಟಿದ್ದಾರೆ. ಅದೇ ರೀ ರಿಲೀಸ್ ಅನ್ನೋ ಸೂಪರ್ ಸುದ್ದಿ..!

 2000, 2001ರಲ್ಲಿ ಬಾಕ್ಸ್​ ಆಫೀಸನ್ನು ಆಳಿದ್ದ ‘ಯಜಮಾನ’, ‘ಹುಚ್ಚ’ ಸಿನಿಮಾಗಳು ರೀ ರಿಲೀಸ್ ಆಗಲಿವೆ. ಸ್ವತಃ ಪ್ರೊಡ್ಯೂಸರ್ ರೆಹಮಾನ್ ಈ ವಿಷಯವನ್ನು ಹೇಳಿದ್ದಾರೆ. ಈ ಎರಡೂ ಸಿನಿಮಾಗಳನ್ನು ರೀ ರಿಲೀಸ್ ಮಾಡುವಂತೆ ಸ್ಯಾಂಡಲ್​ವುಡ್​​ ವಿತರಕರು ಡಿಮ್ಯಾಂಡ್ ಮಾಡ್ತಿದ್ದಾರಂತೆ. ಅಭಿಮಾನಿಗಳಿಂದಲೂ ದಿನೇ ದಿನ ಪ್ರೀತಿಯ ಒತ್ತಾಯ, ಒತ್ತಡ ಹೆಚ್ಚಾಗ್ತಿದೆಯಂತೆ.

ಹೀಗಾಗಿ ಎರಡು ಸಿನಿಮಾಗಳು ಶೀಘ್ರದಲ್ಲೇ ರೀ ರಿಲೀಸ್ ಆಗಲಿವೆ. ಇನ್ನೂ ವಿಶೇಷ ಅಂದ್ರೆ ಎಲ್ಲರಿಗೂ ಗೊತ್ತಿರುವಂತೆ ಕಿಚ್ಚ ಸುದೀಪ್​ ವಿಷ್ಣುದಾದಾರ ಬಿಗ್ ಫ್ಯಾನ್. ಅಪ್ಪಾಜಿ ಅಂದ್ರೆ ಸುದೀಪ್​ಗೆ ಗೌರವ, ಪ್ರೀತಿ. ‘ವಿಷ್ಣುವರ್ಧನ’ ಅನ್ನೋ ಸಿನಿಮಾದಲ್ಲೂ ಸುದೀಪ್ ವಿಷ್ಣುದಾದನ ಫ್ಯಾನ್ ಆಗಿ ಮಿಂಚಿದ್ರು.

 ಕಾಕತಾಳೀಯ ಎಂಬಂತೆ ಈಗ ವಿಷ್ಣುದಾದಾರ ‘ಯಜಮಾನ’ ಸಿನಿಮಾ ಜೊತೆಗೆ ಸುದೀಪ್ ಅಭಿನಯದ ‘ಹುಚ್ಚ’ ರೀ ರಿಲೀಸ್ ಆಗುತ್ತಿದ್ದು, ವಿಷ್ಣುವರ್ಧನ್ ಮತ್ತು ಸುದೀಪ್ ಫ್ಯಾನ್ಸ್​ಗೆ ‘ಹಬ್ಬ’. ಯಜಮಾನ, ಹುಚ್ಚ ಸಿನಿಮಾಕ್ಕೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದ್ದು. ಸದ್ಯದಲ್ಲೇ ಪ್ರೊಡ್ಯೂಸರ್ ರಹಮಾನ್ ರಿ ರಿಲೀಸ್ ಡೇಟ್ ಅನೌನ್ಸ್ ಮಾಡಲಿದ್ದಾರೆ. ರಿ ರಿಲೀಸ್ ಆದಲ್ಲಿ ಈ ಎರಡು ಸಿನಿಮಾಗಳು ಮತ್ತೊಮ್ಮೆ ಬಾಕ್ಸ್ ಆಫೀಸಲ್ಲಿ ಇತಿಹಾಸ ನಿರ್ಮಿಸುವುದರಲ್ಲಿ ಅನುಮಾನವೇ ಇಲ್ಲ.

 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments