ರೂಟ್​​ ಸೆಂಚುರಿ, ಇಂಗ್ಲೆಂಡ್ ಜಯಭೇರಿ

0
82

ವಿಶ್ವಕಪ್​ 19ನೇ ಪಂದ್ಯದಲ್ಲಿ ದೈತ್ಯ ವೆಸ್ಟ್​ಇಂಡೀಸ್​ ವಿರುದ್ಧ ಅತಿಥೇಯ ಇಂಗ್ಲೆಂಡ್​​ 8 ವಿಕೆಟ್​​ಗಳ ಅಧಿಕಾರಯುತ ಗೆಲುವು ದಾಖಲಿಸಿತು. ಶಿಸ್ತುಬದ್ಧ ಬೌಲಿಂಗ್​ ದಾಳಿ ಹಾಗೂ ಉತ್ತಮ ಬ್ಯಾಟಿಂಗ್​ ಮೂಲಕ ಆಲ್​ರೌಂಡಿಂಗ್​ ಪರ್ಪಾಮೆನ್ಸ್​​ ನೀಡಿದ ಆಂಗ್ಲರ ಬಳಗ ವಿಂಡೀಸ್​​ ಮೇಲೆ ಸವಾರಿ ಮಾಡಿತು.
ಟಾಸ್​​ ಸೋತು ಬ್ಯಾಟಿಂಗ್​ಗಿಳಿದ ವಿಂಡೀಸ್​ ಆರಂಭದಲ್ಲೇ ಮುಗ್ಗರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಎವಿನ್​ ಲೆವಿಸ್​​ 2 ರನ್​ಗಳಿಗೆ ಔಟಾಗಿ ನಿರಾಸೆ ಮೂಡಿಸಿದ್ರು. ಅತ್ತ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ನಿಧಾನಗತಿಯ ಬ್ಯಾಟಿಂಗ್​ ನಡೆಸಿದ್ರು. 41 ಎಸೆತಗಳನ್ನ ಎದುರಿಸಿದ ಗೇಲ್​​ 36 ರನ್ ಗಳಿಸಿ ಔಟಾದ್ರು..
ಗೇಲ್​ ಬೆನ್ನಲ್ಲೇ ಭರವಸೆಯ ಬ್ಯಾಟ್ಸ್​​ಮನ್​ ಶಾಯ್​ ಹೋಪ್​ ಕೂಡ ಪೆವಿಲಿಯನ್​ ಸೇರಿದ್ರು. ಪರಿಣಾಮ 13.2 ಓವರ್​ಗಳಿಗೆ 3 ವಿಕೆಟ್​​ ಕಳೆದುಕೊಂಡ ವಿಂಡೀಸ್​​ ಸಂಕಷ್ಡಕ್ಕೆ ಸಿಲುಕಿತು. ಆದ್ರೆ 4ನೇ ವಿಕೆಟ್​​ಗೆ ಜೊತೆಯಾದ ನಿಕೋಲಸ್​ ಪೂರನ್​, ಶಿಮ್ರೋನ್​ ಹೆಟ್ಮೆಯರ್​​ ತಂಡಕ್ಕೆ ಚೇತರಿಕೆ ನೀಡಿದ್ರು.
4ನೇ ವಿಕೆಟ್​​ಗೆ 89 ರನ್​ಗಳ ಜೊತೆಯಾಟ ನೀಡಿದ ಈ ಜೋಡಿ ತಂಡಕ್ಕೆ ಬಲ ತುಂಬಿದ್ರು. ಆದ್ರೆ ರಕ್ಷಣಾತ್ಮಕ ಆಟವಾಡುತ್ತಿದ್ದ ಹೆಟ್ಮೆಯರ್​​ ಜೋ ರೂಟ್​ಗೆ ವಿಕೆಟ್​ ಒಪ್ಪಿಸಿದ್ರು. ಇದರ ಬೆನ್ನಲ್ಲೇ ನಾಯಕ ಜೇಸನ್​ ಹೋಲ್ಡರ್​​ಗೂ ಪೆವಿಲಿಯನ್​ ದಾರಿ ತೋರಿಸಿ ರೂಟ್​​ ವಿಂಡೀಸ್​​ ಪಡೆಗೆ ಪೆಟ್ಟು ನೀಡಿದ್ರು.
​ಹೋಲ್ಡರ್​ ನಿರ್ಗಮನದ ಬಳಿಕ ಕಣಕ್ಕಿಳಿದ ಆ್ಯಂಡ್ರೆ ರಸೆಲ್​ ಸ್ಪೋಟಕ ಬ್ಯಾಟಿಂಗ್​ಗೆ ಮುಂದಾದ್ರು. ಒಂದು ಬೌಂಡರಿ, 2 ಸಿಕ್ಸರ್​​ ಸಿಡಿಸಿ ಅಬ್ಬರಿಸಿದ ರಸೆಲ್​ ಆಟ 21 ರನ್​ಗಳಿಗೆ ಅಂತ್ಯವಾಯ್ತು. ಒಂದೆಡೆ ವಿಕೆಟ್​​ ಪತನವಾಗುತಿದ್ರೂ ಎಚ್ಚರಿಕೆಯ ಬ್ಯಾಟಿಂಗ್​ ನಡೆಸಿದ ನಿಕೋಲಸ್​ ಪೂರನ್​ ಅರ್ಧಶತಕ ಸಿಡಿಸಿದ್ರು.
ಅರ್ಧಶತಕದ ಬೆನ್ನಲ್ಲೇ ಪೂರನ್​ ಆಟವೂ ಅಂತ್ಯವಾಯ್ತು. 63 ರನ್​ಗಳಿಸಿ ತಂಡಕ್ಕೆ ಆಸರೆಯಾದ ನಿಕೋಲಸ್​ ಪೂರನ್​ ಪತನದೊಂದಿಗೆ ವಿಂಡೀಸ್​​ ಬ್ಯಾಟ್ಸ್​​ಮನ್​ಗಳು ಪೆವಿಲಿಯನ್​ ಪರೇಡ್​​ ನಡೆಸಿದ್ರು. ಅಂತಿಮವಾಗಿ 212 ರನ್​ಗಳಿಗೆ ಕೆರಿಬಿಯನ್​ ಪಡೆ ಆಲೌಟ್​ ಆಯ್ತು. ಶಿಸ್ತುಬದ್ಧ ದಾಳಿ ನಡೆಸಿದ ಜೋಫ್ರಾ ಆರ್ಚರ್ ಹಾಗೂ ಮಾರ್ಕ್ ವುಡ್ ತಲಾ 3 ವಿಕೆಟ್​​ ಕಬಳಿಸಿ ಮಿಂಚಿದ್ರು.
213 ರನ್​ಗಳ ಸುಲಭ ಗುರಿ ಬೆನ್ನತ್ತಿದ ಆಂಗ್ಲ ಪಡೆ ಉತ್ತಮ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ಜೋ ರೂಟ್​, ಜಾನಿ ಬೈರ್​​ಸ್ಟೋವ್​ 95 ರನ್​ಗಳ ಜೊತೆಯಾಟ ನಡೆಸಿದ್ರು. ವಿಂಡೀಸ್​​ ಬೌಲರ್​ಗಳ ಮೇಲೆ ಸವಾರಿ ಮಾಡಿದ ಬೈರ್​​ಸ್ಟೋವ್​ 46 ರನ್​ ಸಿಡಿಸಿ ಔಟಾದ್ರು.
ಬೈರ್​ಸ್ಟೋವ್​ ನಿರ್ಗಮನದ ಬಳಿಕ ಬ್ಯಾಟಿಂಗ್​ನಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ಕ್ರಿಸ್ ​ವೋಕ್ಸ್​ ​​40 ರನ್​ ಚಚ್ಚಿದ್ರು. ಅತ್ತ ಅದ್ಭುತ ಫಾರ್ಮ್​ ಮುಂದುವರೆಸಿದ ಜೋ ರೂಟ್​ ಟೂರ್ನಿಯಲ್ಲಿ 2ನೇ ಶತಕ (100) ಸಿಡಿಸಿ ಮಿಂಚಿದ್ರು. ಅಂತಿಮವಾಗಿ 33.1 ಓವರ್​​ಗಳಲ್ಲಿ 2 ವಿಕೆಟ್​​ ನಷ್ಟಕ್ಕೆ ಗುರಿ ಮುಟ್ಟಿದ ಇಂಗ್ಲೆಂಡ್​​ ರೋಸ್​ಬೌಲ್​ ಗೆಲುವಿನ ಕೇಕೆ ಹಾಕಿತು.
ಒಟ್ಟಾರೆಯಾಗಿ 8 ವಿಕೆಟ್​ಗಳ ಜಯ ದಾಖಲಿಸಿದ ಇಂಗ್ಲೆಂಡ್​ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಇನ್ನು ಬೌಲಿಂಗ್​ನಲ್ಲಿ 2 ವಿಕೆಟ್​​ ಕಬಳಿಸಿ, ಬಳಿಕ ಬ್ಯಾಟಿಂಗ್​ನಲ್ಲಿ ಶತಕ ಸಾಧನೆ ಮಾಡಿದ ಜೋ ರೂಟ್​​ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ್ರು.

LEAVE A REPLY

Please enter your comment!
Please enter your name here