ಕನ್ನಡಿಗ ರಾಹುಲ್​ ಓಪನಿಂಗ್ ಬಂದ್ರೆ, 4ನೇ ಕ್ರಮಾಂಕಕ್ಕೆ ಯಾರು?

0
92

ಗಾಯದ ಸಮಸ್ಯೆಯಿಂದ ಟೀಮ್ ಇಂಡಿಯಾದ ಓಪನರ್ ಶಿಖರ್ ಧವನ್ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನದ ವಿರುದ್ಧದ ಮ್ಯಾಚ್​ಗಳಿಂದ ಹೊರಗುಳಿಯಲಿದ್ದಾರೆ.
ಧವನ್ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಜೊತೆ ಓಪನರ್ ಆಗಿ ಯಾರು ಕಣಕ್ಕಿಳಿಯುತ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಕನ್ನಡಿಗ ಕೆ.ಎಲ್ ರಾಹುಲ್. ಸೌತ್​ ಆಫ್ರಿಕಾ ವಿರುದ್ಧದ ಮ್ಯಾಚ್​ನಲ್ಲಿ 4ನೇ ಕ್ರಮಾಂಕದಲ್ಲಿ, ಆಸೀಸ್​ ವಿರುದ್ಧದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್​​ ಬೀಸಿದ್ದ ಕೆ.ಎಲ್ ರಾಹುಲ್ ಓಪನರ್ ಆಗಿ ಕಣಕ್ಕಿಳಿಯುವುದು ಪಕ್ಕಾ.
ರಾಹುಲ್ ಓಪನರ್ ಆಗಿ ಕಣಕ್ಕಿಳಿದರೆ 4ನೇ ಕ್ರಮಾಂಕಕ್ಕೆ ಯಾರು ಅನ್ನೋದು ಪ್ರಶ್ನೆ. ಈ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಮತ್ತು ಆಲ್​ರೌಂಡರ್ ವಿಜಯ್ ಶಂಕರ್ ನಡುವೆ ಪೈಪೋಟಿ ಇದೆ. ಬ್ಯಾಟಿಂಗ್ ಮಾತ್ರ ಸಾಕು ಅಂತ ಪರಿಗಣಿಸಿದ್ರೆ ಕಾರ್ತಿಕ್ ಪಕ್ಕಾ ಆಗ್ತಾರೆ. ಆದ್ರೆ, ಬ್ಯಾಟಿಂಗ್ ಜೊತೆಗೆ ಬೌಲಿಂಗ್​ ಕೂಡ ಮಾಡ ಬಲ್ಲ ಆಟಗಾರ ಆಯ್ಕೆಯಂತಾದ್ರೆ ವಿಜಯ್​ ಶಂಕರ್ ಆಡುವ 11ರ ಬಳಗದಲ್ಲಿರ್ತಾರೆ.
ಇನ್ನು ರಿಷಭ್ ಪಂತ್ ಅಥವಾ ಅಂಬಟಿ ರಾಯುಡು ಅಥವಾ ಶ್ರೇಯಸ್ ಅಯ್ಯರ್​ಗೆ ಬುಲಾವ್ ಸಿಕ್ಕರೂ ಸಿಗಬಹುದು.

LEAVE A REPLY

Please enter your comment!
Please enter your name here