ಆಸೀಸ್​ ಎದುರು ನಡೆಯಲಿಲ್ಲ ವಿಂಡೀಸ್ ಆಟ

0
107

ವಿಶ್ವಕಪ್​ ​​ನ 10ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 15 ರನ್​ಗಳ ಗೆಲುವು ದಾಖಲಿಸಿತು. ಆರಂಭದಲ್ಲಿ ವಿಫಲತೆ ಕಂಡರೂ ನಥನ್​ ಕೌಲ್ಟರ್​​ ನೈಲ್​ರ ಅಬ್ಬರ​ ಹಾಗೂ ಸ್ಟೀವ್​ ಸ್ಮಿತ್​​ರ ತಾಳ್ಮೆಯ ಬ್ಯಾಟಿಂಗ್​ ಬಲದಿಂದ ಅಸಿಸ್​​ ದೈತ್ಯ ವಿಂಡೀಸ್​ ಎದುರು ಜಯದ ನಗೆ ಬೀರಿತು.
ಪಂದ್ಯದಲ್ಲಿ ಟಾಸ್​​ ಗೆದ್ದು ಬೌಲಿಂಗ್​ ಆಯ್ದುಕೊಂಡ ವೆಸ್ಟ್​ಇಂಡೀಸ್​​​ ಉತ್ತಮ ದಾಳಿ ಸಂಘಟಿಸಿತು. ಆರಂಭದಲ್ಲೇ ನಾಯಕ ಆ್ಯರೋನ್ ಫಿಂಚ್, ಡೇವಿಡ್ ವಾರ್ನರ್,ಗ್ಲೇನ್​ ಮ್ಯಾಕ್ಸ್​​ವೆಲ್​, ಉಸ್ಮಾನ್ ಖವಾಜ ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿತು.
ಬಳಿಕ ಕಣಕ್ಕಿಳಿದು ಉತ್ತಮ ಬ್ಯಾಟಿಂಗ್​ ಸಂಘಟಿಸುವ ಸೂಚನೆ ನೀಡಿದ ಮಾರ್ಕಸ್​​​ ಸ್ಟೋಯಿನಿಸ್​​ ಆಟವೂ 19 ರನ್​ಗಳಿಗೆ ಅಂತ್ಯವಾಯ್ತು. ನಂತರ ಜೊತೆಯಾದ ಸ್ಟೀವ್​ ಸ್ಮಿತ್​​ ಹಾಗೂ ಅಲೆಕ್ಸ್​ ಕ್ಯಾರಿ 68 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ರು.
45 ರನ್​ಗಳಿಸಿದ್ದ ಅಲೆಕ್ಸ್​​ ಕ್ಯಾರಿ ಆಂಡ್ರೆ ರಸೇಲ್​ ಗೆ ವಿಕೆಟ್​​ ಒಪ್ಪಿಸಿದ್ರು. ಕ್ಯಾರಿ ನಿರ್ಗಮನದ ಬಳಿಕ ಕಣಕ್ಕಿಳಿದ ನಥನ್​ ಕೌಲ್ಟರ್​​ ನೈಲ್​ ಅಬ್ಬರಿಸಿದ್ರು. 7ನೇ ವಿಕೆಟ್​​ಗೆ ಜೊತೆಯಾದ ಸ್ಮಿತ್​-ಕೌಲ್ಟರ್​ ನೈಲ್​ 102 ರನ್​ಗಳ ಜೊತೆಯಾಟವಾಡಿದ್ರು.
ತಾಳ್ಮೆಯ ಇನ್ನಿಂಗ್ಸ್​​ ಕಟ್ಟಿದ ಸ್ಮಿತ್​​ 73 ರನ್​ಗಳಿಸಿ ಔಟಾದ್ರೆ, 8 ಬೌಂಡರಿ,4 ಸಿಕ್ಸರ್​​ ಸಿಡಿಸಿ ಅಬ್ಬರಿಸಿದ ಕೌಲ್ಟರ್​​ ನೈಲ್​ 92 ರನ್​ಗಳಿಸಿದ್ರು. ಅಂತಿಮವಾಗಿ ಮಿಚೆಲ್ ಸ್ಟಾರ್ಕ್ ವಿಕೆಟ್ ಪತನದೊಂದಿಗೆ ಆಸ್ಟ್ರೇಲಿಯಾ 49 ಓವರ್‌ಗಳಲ್ಲಿ 288 ರನ್‌ಗೆ ಆಲೌಟ್ ಆಯಿತು. 
ಗೆಲುವಿಗೆ 289 ರನ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ಆರಂಭದಲ್ಲೇ ಇವಿನ್​ ಲಿವಿಸ್​​ ವಿಕೆಟ್​​ ಕಳೆದುಕೊಳ್ತು. ಇನ್ನೋರ್ವ ಆರಂಭಿಕ ಆಟಗಾರ ಕ್ರಿಸ್ ಗೇಲ್ 4 ಬೌಂಡರಿ ಸಿಡಿಸಿದರೂ ಸ್ಫೋಟಿಸೋ ಸೂಚನೆ ನೀಡಲಿಲ್ಲ. ಗೇಲ್ ಆಟ 21 ರನ್​ಗಳಿಗೆ ಅಂತ್ಯವಾಯ್ತು.
ಗೇಲ್​ ಪತನದ ಬಳಿಕ ಜೊತೆಯಾದ ಶಾಯ್​ ಹೋಪ್ ಹಾಗೂ ನಿಕೋಲಸ್ ಪೂರನ್ 68 ರನ್​ಗಳ ಜೊತೆಯಾಟವಾಡಿದ್ರು. ಪೂರನ್ 40 ರನ್ ಸಿಡಿಸಿ ಔಟಾದರು.ಪೂರನ್​ ಬೆನ್ನಲ್ಲೇ ಶಿಮ್ರೊನ್ ಹೆಟ್ಮೆಯರ್ ರನೌಟ್​​​ ಬಲೆಗೆ ಬಿದ್ದರು. ಇತ್ತ ಅರ್ಧಶತಕ ಸಿಡಿಸಿ ಮುನ್ನಗ್ಗುತ್ತಿದ್ದ ಶಾಯ್​ ಹೋಪ್ ಆಟ 68 ರನ್​ಗಳಿಗೆ ಅಂತ್ಯವಾಯ್ತು.
ಇದರ ಬೆನ್ನಲ್ಲೇ ಸ್ಪೋಟಕ ಬ್ಯಾಟ್ಸ್​​ಮನ್​ ಆ್ಯಂಡ್ರೆ ರಸೆಲ್​ 15 ರನ್​ಗಳಿಸಿ ನಿರ್ಗಮಿಸಿದ್ರು. ಕಾರ್ಲೋಸ್​​ ಬ್ರಾಥ್ ​​ವೈಟ್​ ಆಟವೂ 16 ರನ್​ಗಳಿಗೆ ಅಂತ್ಯವಾಯ್ತು. ಹೋರಾಟ ನಡೆಸಿದ ನಾಯಕ ಜೇಸನ್​ ಹೋಲ್ಡರ್​ 51 ರನ್​​ ಗಳಿಸಿ ಪೆವಿಲಿಯನ್​ ಸೇರಿದ್ರು. ಅಂತಿಮವಾಗಿ ಆಶ್ಲೆ ನರ್ಸ್​​​ ಹಾಗೂ ಒಶಾನೆ ಥಾಮಸ್​ ಹೋರಾಟ ನಡೆಸಿದರಾದೂ ಗೆಲುವು ಸಿಗಲಿಲ್ಲ.  ನಿಗದಿತ ಓವರ್​​ಗಳಲ್ಲಿ 9 ವಿಕೆಟ್​​ ನಷ್ಟಕ್ಕೆ 273 ರನ್​ ಗಳಿಸಲಷ್ಟೇ ಶಕ್ತವಾದ ದೈತ್ಯ ವೆಸ್ಟ್​ಇಂಡೀಸ್​​ ಬಲಿಷ್ಠ ಆಸ್ಟ್ರೇಲಿಯಾ ಎದುರು ಮಂಡಿಯೂರಿತು. 15 ರನ್​ಗಳ ರೋಚಕ ಜಯ ಸಾಧಿಸಿದ ಆಸಿಸ್​​, ಟೂರ್ನಿಯಲ್ಲಿ ಸತತ 2 ಗೆಲುವು ಸಿಹಿಯುಂಡಿತು.

LEAVE A REPLY

Please enter your comment!
Please enter your name here