ವಿಶ್ವ ಕಪ್ನಲ್ಲಿಂದು ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಕಾಳಗಕ್ಕೆ ಸಾಕ್ಷಿಯಾಗಲಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಸೌತ್ ಆಫ್ರಿಕಾ ಹಾಗೂ ತಲಾ 1 ಜಯ ಹಾಗೂ ಸೋಲು ಕಂಡಿರುವ ವಿಂಡೀಸ್ ತಂಡಗಳು ರೋಸ್ ಬೌಲ್ ಮೈದಾನದಲ್ಲಿ ಕಾದಾಡಲಿವೆ. ಒಂದೆಡೆ ಟೂರ್ನಿಯ ಆರಂಭದಿಂದಲೂ ಗೆಲುವನ್ನೇ ಕಾಣದ ಸೌತ್ ಆಫ್ರಿಕಾ ಒತ್ತಡದಲ್ಲಿದ್ರೆ, ಕಳೆದ ಪಂದ್ಯದಲ್ಲಿ ಸಿಕ್ಕ ಅವಕಾಶ ಕೈಚೆಲ್ಲಿರುವ ವೆಸ್ಟ್ಇಂಡೀಸ್ ಕೂಡ ಗೆಲ್ಲುವ ಛಲದಲ್ಲಿದೆ.
ದೈತ್ಯ ಬ್ಯಾಟಿಂಗ್ ಬಲವನ್ನ ಹೊಂದಿರುವ ವೆಸ್ಟ್ಇಂಡೀಸ್ ಬಳಗ, ಪಾಕಿಸ್ತಾನ ವಿರುದ್ಧ ಜಯ ಸಾಧಿಸಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋಲುಂಡಿದೆ. ಇತ್ತ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದ ಸೌತ್ ಆಫ್ರಿಕಾ, ನಂತರ ಬಾಂಗ್ಲಾದೇಶ ಹಾಗೂ ಭಾರತ ವಿರುದ್ಧದ ಪಂದ್ಯಗಳಲ್ಲಿ ಸೋಲಿಗೆ ಶರಣಾಗಿದೆ.
ಈಗಾಗಲೇ ಸೋಲಿನಿಂದ ಕಂಗೆಟ್ಟಿರುವ ಆಫ್ರಿಕಾ ತಂಡಕ್ಕೆ ಇಂಜುರಿ ಸಮಸ್ಯೆಯೂ ಕಾಡ್ತಿದೆ. ಇಂದಿನ ಪಂದ್ಯ ವೆಸ್ಟ್ ಇಂಡೀಸ್ ಆಲ್ರೌಂಡರ್ಸ್ ಹಾಗೂ ಆಫ್ರಿಕಾ ತಂಡ ಬ್ಯಾಟಿಂಗ್ ಪಡೆ ನಡುವಿನ ಹಣಾಹಣಿಯಾಗಲಿದೆ. ಬಲಿಷ್ಠ ವಿಂಡೀಸ್ ಬಳಗವನ್ನು ಮಣಿಸಿ ಸೌತ್ ಆಫ್ರಿಕಾ ಪುಟಿದೇಳುತ್ತಾ ಅನ್ನೋದು ಕುತೂಹಲ ಮೂಡಿಸಿದೆ.