ಭಾರತ ನೀಡಿದ ಟಾರ್ಗೆಟ್​ ತಲುಪುವುದು ಪಾಕ್​ಗೆ ಕಷ್ಟ..!

0
563

ಭಾರತ ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಅಜೇಯ ಓಟವನ್ನು ಮುಂದುವರೆಸುವುದು ಬಹುತೇಕ ಕನ್ಫರ್ಮ್ ಆಗಿದೆ. ಭಾರತ ನೀಡಿರುವ ಟಾರ್ಗೆಟ್ ಅನ್ನು ತಲುಪುವುದು ಪಾಕ್​ಗೆ ಕಷ್ಟ..!
ಎಮರೇಟ್ಸ್ ಓಲ್ಡ್ ಟ್ರಾಫರ್ಡ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮ್ಯಾಚ್​​ನಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ಭಾರತವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಪಾಕ್ ಆಮಂತ್ರಣ ಸ್ವೀಕರಿಸಿ ಬ್ಯಾಟಿಂಗ್ ಮಾಡಿದ ಭಾರತ ರೋಹಿತ್ ಶರ್ಮಾ ಶತಕ, ರಾಹುಲ್, ಕೊಹ್ಲಿ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 336ರನ್​ ಗಳಿಸಿದೆ. 337ರನ್​ಗಳ ಗುರಿತಲುವುದು ಪಾಕಿಸ್ತಾನಕ್ಕೆ ನಿಜಕ್ಕೂ ದೊಡ್ಡ ಸವಾಲೇ.
ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ ಭಾರತಕ್ಕೆ ಉತ್ತಮ ಆರಂಭ ಒದಗಿಸಿ ಕೊಟ್ಟರು. ಈ ಆರಂಭಿಕ ಜೋಡಿ 136ರನ್​ಗಳ ಭರ್ಜರಿ ಜೊತೆಯಾಟವಾಡಿತು. ತಂಡದ ಮೊತ್ತ 136ರನ್ ಆಗಿದ್ದಾಗ ರಾಹುಲ್ ರಿಯಾಜ್​ಗೆ ವಿಕೆಟ್​ ಒಪ್ಪಿಸಿದ್ರು. ಪೆವಿಲಿಯನ್ ಸೇರುವ ಮುನ್ನ ರಾಹುಲ್ 57ರನ್​ ಸಿಡಿಸಿ ಮಿಂಚಿದ್ರು.
ನಂತರ ರೋಹಿತ್ ಜೊತೆಯಾದ ಕ್ಯಾಪ್ಟನ್ ಕೊಹ್ಲಿ ಕೂಡ ಪಾಕ್ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ್ರು. ರೋಹಿತ್ ಮತ್ತು ಕೊಹ್ಲಿ 98ರನ್​ ಗಳ ಅಮೋಘ ಜೊತೆಯಾಟವಾಡಿದ್ರು. ತಂಡದ ಮೊತ್ತ 264ರನ್ ಆಗಿದ್ದಾಗ ರೋಹಿತ್ ಶರ್ಮಾ ಪೆವಿಲಿಯನ್ ಸೇರಿದ್ರು. ರೋಹಿತ್ ಶರ್ಮಾ 113 ಬಾಲ್​ಗಳಲ್ಲಿ 3 ಸಿಕ್ಸರ್, 14 ಬೌಂಡರಿ ಸಮೇತ 140ರನ್​ಗಳಿಸಿ, ಪ್ರಸಕ್ತ ವಿಶ್ವಕಪ್​ನಲ್ಲಿ 2ನೇ ಶತಕ ದಾಖಲಿಸಿದ್ರು.
ಕೊಹ್ಲಿ 77, ಹಾರ್ದಿಕ್ ಪಾಂಡ್ಯ 26, ಧೋನಿ 1, ವಿಜಯ ಶಂಕರ್ ಅಜೇಯ 15, ಕೇದಾರ್ ಜಾಧವ್ ಅಜೇಯ 9ರನ್ ಗಳಿಸಿದರು.

ಧೋನಿಯನ್ನೇ ಹಿಂದಿಕ್ಕಿದ ರೋಹಿತ್ ಶರ್ಮಾ..!

ಸಚಿನ್ ರೆಕಾರ್ಡ್ ಬ್ರೇಕ್ ; ವಿರಾಟ್ ಕೊಹ್ಲಿ ಮತ್ತೊಂದು ವಿಶ್ವ ದಾಖಲೆ..!

ಆಲ್​ರೌಂಡರ್ ವಿಜಯ್​ಶಂಕರ್ ಕನಸು ನನಸಾಯ್ತು..!

LEAVE A REPLY

Please enter your comment!
Please enter your name here