ಬಾಂಗ್ಲಾ ಹುಲಿ ಹಸನ್ ಆಟ ವ್ಯರ್ಥ -ಇಂಗ್ಲೆಂಡ್​ಗೆ ‘ರಾಯ್​’ಲ್ ಗೆಲುವು

0
119

ಬಾಂಗ್ಲಾ ಹುಲಿಗಳ ಎದುರಿನ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್​​ 106 ರನ್​ಗಳ ಜಯ ದಾಖಲಿಸಿತು. ಆರಂಭದಿಂದಲೇ ಬಾಂಗ್ಲಾ ಬೌಲರ್​​ಗಳ ಮೇಲೆ ಸವಾರಿ ಮಾಡಿದ ಆಂಗ್ಲರ ಬಳಗ, ಬೌಲಿಂಗ್​ನಲ್ಲೂ ಬಾಂಗ್ಲಾದೇಶದ ಬ್ಯಾಟ್ಸ್​​ಮನ್​ಗಳನ್ನ ಕಟ್ಟಿಹಾಕಿದ್ರು.
ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಇಂಗ್ಲೆಂಡ್​, ಡೀಸೆಂಟ್​​​ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ಜೇಸನ್​ ರಾಯ್​​​, ಜಾನಿ ಬೈರ್‌ಸ್ಟೋವ್ ಎಚ್ಚರಿಕೆಯ ಆರಂಭದೊಂದಿಗೆ ಅಬ್ಬರದ ಪ್ರದರ್ಶನ ನೀಡಿದರು. ಮೊದಲ ವಿಕೆಟ್​​ಗೆ 128 ರನ್​ಗಳ ಜೊತೆಯಾಟ ನೀಡಿದ ಈ ಜೋಡಿ ಉತ್ತಮ ಆರಂಭ ಒದಗಿಸಿದ್ರು.
48 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಬೈರ್​ಸ್ಟೋವ್​ ನಿರ್ಗಮಿಸಿದ್ರೆ, ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿದ ರಾಯ್ ಅಭಿಮಾನಿಗಳನ್ನ ರಂಜಿಸಿದ್ರು. 92 ಎಸೆತಗಳಲ್ಲೇ ಸೆಂಚುರಿ ಸಿಡಿಸಿದ ರಾಯ್​ ಏಕದಿನ ಮಾದರಿಯ 9ನೇ ಶತಕ ಪೂರೈಸಿದ್ರು.
ಇನ್ನು 21 ರನ್​ಗಳಿಸಿದ್ದ ಜೋ ರೂಟ್​​ ಮೊಹಮದ್​ ಸೈಫುದ್ದೀನ್​ ಎಸೆತದಲ್ಲಿ ಔಟಾದ್ರೆ, ಇದರ ಬೆನ್ನಲ್ಲೇ 121 ಎಸೆತಗಳನ್ನೆದುರಿಸಿ 14 ಬೌಂಡರಿ, 5 ಸಿಕ್ಸರ್​​ ನೆರವಿನಿಂದ 153 ರನ್​ಗಳಿಸಿದ್ದ ರಾಯ್​ ಆಟವೂ ಅಂತ್ಯವಾಯ್ತು. ಈ ಮೂಲಕ ಅತಿಥೇಯ ಬಳಗ 40 ಓವರ್​ಗಳಲ್ಲಿ 275 ರನ್​ ಕೆಲೆ ಹಾಕಿತು.
ಅಂತಿಮ ಹಂತದಲ್ಲಿ ಬಾಂಗ್ಲಾ ಬೌಲರ್​​ಗಳ ಮೇಲೆ ಸವಾರಿ ಮಾಡಿದ ಜೋಸ್​ ಬಟ್ಲರ್​​ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ರು. ಇನ್ನು ನಾಯಕ ಇಯಾನ್​ ಮಾರ್ಗನ್ 35 ರನ್​ಗಳಿಸಿ ಔಟಾದ್ರು. ಆಲ್​ರೌಂಡರ್​​ ಬೆನ್​​​ಸ್ಟೋಕ್ಸ್​​ 6 ರನ್​ಗಳಿಸಿ ನಿರ್ಗಮಿಸಿದ್ರು. ಕೊನೆಯಲ್ಲಿ ಲಯಮ್​ ಪ್ಲಂಕೆಂಟ್​​, ಕ್ರಿಸ್​ ವೋಕ್ಸ್​​ 7ನೇ ವಿಕೆಟ್​​ಗೆ ಅಜೇಯ 45 ರನ್​ಗಳ ಜೊತೆಯಾಟ ನೀಡಿದ್ರು. ಅಂತಿಮವಾಗಿ 50 ಓವರ್​ಗಳಲ್ಲಿ ಇಂಗ್ಲೆಂಡ್​ 386 ರನ್​ ಕಲೆ ಹಾಕಿತು.
 387 ರನ್​ಗಳ ಬೃಹತ್​ ಗುರಿ ಬೆನ್ನತ್ತಿದ ಬಾಂಗ್ಲಾ ಪಡೆ ಆರಂಭದಲ್ಲೇ ಸೌಮ್ಯಾ ಸರ್ಕಾರ್​​ ವಿಕೆಟ್​​ ಕಳೆದುಕೊಳ್ತು. 2ನೇ ವಿಕೆಟ್​​ಗೆ ಜೊತೆಯಾದ ಶಕೀಬ್​ ಆಲ್​ ಹಸನ್​, ತಮೀಮ್​ ಇಕ್ಬಾಲ್​ ಜೋಡಿ 55 ರನ್​ಗಳ ಜೊತೆಯಾಟ ನಡೆಸಿದ್ರು. ಆದ್ರೆ ಮಾರ್ಕ್​ ವುಡ್​​ ಎಸೆತವನ್ನು ಎದುರಿಸುವಲ್ಲಿ ವಿಫಲರಾದ ತಮೀಮ್​ 19 ರನ್​ಗಳಿಗೆ ಪೆವಿಲಿಯನ್​ ಸೇರಿದ್ರು. ಇದರ ಬೆನ್ನಲ್ಲೇ ಮೊಹಮದ್​ ಮಿಥುನ್​ ಸೊನ್ನೆ ಸುತ್ತಿದ್ರು.
 ಬಳಿಕ ಜೊತೆಗೂಡಿದ ಶಕಿಬ್ ಹಾಗೂ ಮುಶ್ಪಿಕರ್ ರಹೀಮ್​ ಉತ್ತಮ ಇನ್ನಿಂಗ್ಸ್​ ಕಟ್ಟುವ ಸೂಚನೆ ನೀಡಿದ್ರು. ಶತಕದ ಜೊತೆಯಾಟ ಆಡಿದ ಈ ಜೋಡಿ ತಂಡಕ್ಕೆ ಆಸರೆಯಾದ್ರು. 44 ರನ್​ಗಳಿಗೆ ಮುಷ್ಪಿಕರ್​​ ರಹೀಮ್​ ಔಟಾದ್ರೆ, ಫೈಟ್ ಬ್ಯಾಕ್ ಇನ್ನಿಂಗ್ಸ್ ಕಟ್ಟಿದ ಶಕಿಬ್ ಶತಕ ಸಾಧನೆ ಮಾಡಿದರು. ಈ ಶತಕ ಸಾಧನೆಯ ಬೆನ್ನಲ್ಲೇ ಶಕಿಬ್​ ಹೋರಾಟ ಅಂತ್ಯವಾಯ್ತು.
ಶಕಿಬ್​ ಆಲ್​ ಹಸನ್​ ಪತನದ ಬಳಿಕ ಬಾಂಗ್ಲಾ ಪಡೆಯ ಪೆವಿಲಿಯನ್​ ಪರೇಡ್​​ ನಡೆಸಿದ್ರು. ಪರಿಣಾಮ ಬಾಂಗ್ಲಾದೇಶ 48.5 ಓವರ್‌ಗಳಲ್ಲಿ 280 ರನ್‌ಗಳಿಗೆ ಆಲೌಟ್​​ ಆಯ್ತು. ಈ ಮೂಲಕ 106 ರನ್ ಅಂತರದ ಸೋಲಿಗೆ ಶರಣಾಯಿತು.

LEAVE A REPLY

Please enter your comment!
Please enter your name here