ಕ್ರಿಕೆಟ್ ಶಿಶುವಿನ ಕಿವಿ ಹಿಂಡಿದ ಕಿವೀಸ್​​​​

0
93

ವಿಶ್ವಕಪ್​ ಟೂರ್ನಿಯಲ್ಲಿ ಕೇನ್​ ವಿಲಿಯಮ್​ಸನ್​ ನಾಯಕತ್ವದ ನ್ಯೂಜಿಲೆಂಡ್​ ತನ್ನ ಗೆಲುವಿನ ಓಟ ಮುಂದುವರೆಸಿದೆ. ಕ್ರಿಕೆಟ್ ಶಿಶು ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್​​ 7ವಿಕೆಟ್​ಗಳ ಅಂತರದಿಂದ ಗೆದ್ದು ಬೀಗಿದೆ.
ಟಾಸ್​ ಸೋತು ಬ್ಯಾಟಿಂಗ್​ಗಿಳಿದ ಅಫ್ಘಾನಿಸ್ತಾನ ತಂಡ ಹರ್ಝಾತುಲ್ಲಾ ಜಝೈ ಹಾಗೂ ನೂರ್ ಅಲಿ ಝರ್ದನ್ ಜೊತೆಯಾಟದೊಂದಿಗೆ ಉತ್ತಮ ಆರಂಭ ಪಡೆದುಕೊಳ್ತು. ​​​​​​​​​ ಮೊದಲ ವಿಕೆಟ್​ಗೆ 66 ರನ್​​​ಗಳ ಜೊತೆಯಾಟ ನೀಡಿದ ಈ ಜೋಡಿ ಭದ್ರ ಬುನಾದಿ ಹಾಕಿದ್ರು. ಬಿರುಸಿನ ಇನ್ನಿಂಗ್ಸ್​​ ಕಟ್ಟಿದ ಜಝೈ 28 ಎಸೆತದಲ್ಲಿ 34ಗಳಿಸಿ ಜೇಮ್ಸ್ ನಿಶಾಮ್​​ಗೆ ಬಲಿಯಾದ್ರು. ಇದ್ರ ಬೆನ್ನಲ್ಲೆ ನೂರ್ ಅಲಿ ಕೂಡ ಪೆವಿಲಿಯನ್ ಸೇರಿದ್ರು. ನಂತರ ಬಂದ ರೆಹಮತ್​ ಶಾ ಡಕೌಟ್​ ಆದ್ರು.
ಒಂದೆಡೆ ಹಸಮತ್ತುಲ್ಲಾ ಶಾಹಿದಿ ಕ್ರಿಸ್​ ಕಚ್ಚಿ ನಿಂತಿದ್ರೆ, ಇನ್ನೊಂದೆಡೆ ಅಫ್ಘನ್​​ ಆಟಗಾರರ ಪೆವಿಲಿಯನ್​ ಪರೇಡ್​ ನಡೆಸಿದ್ರು. ವಿಕೆಟ್​ಗಳು ಬೀಳುತ್ತಿದ್ರೂ ಮತ್ತೊಂದೆಡೆ ತಾಳ್ಮೆಯ ಆಟವಾಡಿದ ಹಸಮುತ್ತುಲ್ಲಾ ಶಾಹಿದಿ 59 ರನ್​ ಗಳಿಸಿದ್ರು. ಆದ್ರೆ ಜೇಮ್ಸ್ ನಿಶಾಮ್ ದಾಳಿಗೆ ತತ್ತರಿಸಿದ ಅಫ್ಘಾನ್​​​​​​​​​​​​​​ ತಂಡ 41.1 ಓವರ್​​ಗಳಲ್ಲಿ ಕೇವಲ172ರನ್​​​ಗಳಿಗೆ ಅಲೌಟ್​ ಆಯ್ತು. ಅಫ್ಘಾನ್​ ದಾಂಡಿಗರ ಮೇಲೆ ಮುಗಿಬಿದ್ದ ನಿಶಾಮ್​ 5 ವಿಕೆಟ್​ ಕಬಳಿಸಿ ಮಿಂಚಿದ್ರು.
173ರನ್​ಗಳ ಸುಲಭ ಗುರಿ ಬೆನ್ನತ್ತಿದ ನ್ಯೂಜಿಲೆಂಡ್​​ಗೆ ಆರಂಭದಲ್ಲೇ ಶಾಕ್​ ಕಾದಿತ್ತು. ಮೊದಲ ಎಸೆತದಲ್ಲೇ ಮಾರ್ಟಿನ್ ಗುಪ್ಟಿಲ್​ ತಮ್ಮ ವಿಕೆಟ್​ ಒಪ್ಪಿಸಿದ್ರು. ಮತ್ತೊಂದೆಡೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಕಾಲಿನ್ ಮನ್ರೋ 22 ರನ್​ಗಳಿಸಿ ಔಟ್​ ಆದ್ರು.
ನಂತರ ಕಣಕ್ಕಿಳಿದ ನಾಯಕ ಕೇನ್​ ವಿಲಿಯಮ್​ಸನ್​​ ಹಾಗೂ ರಾಸ್​​ ಟೇಲರ್ ಉತ್ತಮ ಜೊತೆಯಾಟವಾಡಿದ್ರು. 48 ರನ್​ಗಳಿಸಿ ಮಿಂಚಿದ ರಾಸ್​ ಟೇಲರ್ ಅರ್ಧಶತಕದ ಅಂಚಿನಲ್ಲಿ ಎಡವಿದ್ರು. ಅಂತಿಮವಾಗಿ ಟಾಮ್​ ಲಾಥಮ್​​​​ ಹಾಗೂ 79 ರನ್​ಗಳಿಸಿ ಅಜೇಯರಾಗುಳಿದ ವಿಲಿಯಮ್​ಸನ್​ರ ಜವಾಬ್ದಾರಿಯತ ಆಟದ ನೆರವಿನಿಂದ ಕಿವೀಸ್​​ 7 ವಿಕೆಟ್​​ಗಳ ಗೆಲುವಿನ ನಗೆ ಬಿರೀತು.
ಬಿಗಿ ಬೌಲಿಂಗ್​ ಹಾಗೂ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದ ಕಿವೀಸ್​ ಬಳಗ 32.1 ಓವರ್​ಗಳಲ್ಲೇ ಗೆಲುವಿನ ದಡ ಸೇರಿತು. ಕಿವೀಸ್​​ ಪಾಳಯದಲ್ಲಿ ಸತತ 3ನೇ ಗೆಲುವಿನ ಸಂಭ್ರಮ ಮನೆ ಮಾಡಿದ್ರೆ, ಕ್ರಿಕೆಟ್​​ ಶಿಶು ಅಫ್ಘನ್​ ಸತತ 3ನೇ ಸೋಲಿಗೆ ಶರಣಾಯಿತು.

LEAVE A REPLY

Please enter your comment!
Please enter your name here