ವಿಶ್ವ ದಾಖಲೆಗಾಗಿ ರೋಹಿತ್​​-ಕೊಹ್ಲಿ ಜೋಡಿಗೆ ಬೇಕು 27 ರನ್​​..

0
532

ನವದೆಹಲಿ: ಪ್ರವಾಸಿ ಭಾರತ ತಂಡ ಆತಿಥೇಯ ವೆಸ್ಟ್​​​ ಇಂಡೀಸ್​​ ವಿರುದ್ಧ ಇಂದು ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನಾಡಲಿದೆ. ಇನ್ನು ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ಕ್ಯಾಪ್ಟನ್​​ ವಿರಾಟ್​​ ಕೊಹ್ಲಿ ಹಾಗೂ ವೈಸ್​ ಕ್ಯಾಪ್ಟನ್​​ ರೋಹಿತ್​ ಶರ್ಮಾ ಜೊತೆಯಾಟದಲ್ಲಿ 27 ರನ್ನುಗಳು ಬಂದ್ರೆ ಅದು ವಿಶ್ವದಾಖಲೆಗೆ ಕಾರಣವಾಗಲಿದೆ.

ಹೌದು. ವೆಸ್ಟ್​​ ಇಂಡೀಸ್​​ ವಿರುದ್ಧ ಈ ಜೋಡಿ ಈವರೆಗೆ 973 ರನ್​​ಗಳನ್ನು ಕಲೆಹಾಕಿದೆ. ಇಂದಿನ ಪಂದ್ಯದಲ್ಲಿ ಕೇವಲ 27 ರನ್ನ್​ಗಳು ಕೊಹ್ಲಿ-ರೋಹಿತ್​​ ಜತೆಯಾಟದಲ್ಲಿ ದಾಖಲಾದ್ರೆ, ಏಕದಿನ ಮಾದರಿಯಲ್ಲಿ ಕೆರಿಬಿಯನ್​ ತಂಡದ ವಿರುದ್ಧ 1000 ರನ್​​​​ ಜತೆಯಾಟವಾಡಿದ ವಿಶ್ವದ ಮೊದಲ ಜೋಡಿ ಎಂಬ ಸಾಧನೆಗೆ ಭಾಜನವಾಗಲಿದೆ.

LEAVE A REPLY

Please enter your comment!
Please enter your name here