ಬೆಂಗಳೂರು: ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗೋ ನಟಿ ರಾಗಿಣಿ ದ್ವಿವೇದಿ ಪರಿಸರ ದಿನದಂದು ಗಿಡ ನೆಡುವುದರ ಮೂಲಕ ಮತ್ತೆ ತಮ್ಮ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಯಾವುದಾದರು ಒಂದು ವಿಷಯಕ್ಕೆ ತುಪ್ಪದ ಹುಡುಗಿ ರಾಗಿಣಿ ಆಗಾಗ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಕೊರೋನಾದಿಂದ ಇಡೀ ದೇಶವೇ ತತ್ತರಿಸಿ ಹೋಗುತ್ತಿದ್ದಾಗ ಹಸಿದವರಿಗೆ ಊಟ ಕೊಡುವುದರ ಮೂಲಕ ಎಲ್ಲರ ಮನ ಸೆಳೆದಿದ್ದರು. ಇಂದು ವಿಶ್ವ ಪರಿಸರ ದಿನಚಾರಣೆ ಇದರ ಹಿನ್ನಲೆ ಬೆಂಗಳೂರಿನ ತಮ್ಮ ಮನೆಯ ಸಮೀಪದ ಖಾಲಿ ಜಾಗದಲ್ಲಿ ಅರಳಿ ಗಿಡ ನೆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಇಂದು ಎಲ್ಲರು ಪರಿಸರಕ್ಕೆ ಏನಾದರು ಕೊಡುಗೆ ನೀಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.