Home ಕ್ರೀಡೆ P.Cricket ಸಚಿನ್ ರೆಕಾರ್ಡ್​ಗಳನ್ನು ಬ್ರೇಕ್ ಮಾಡ್ತಾರಾ ರೋಹಿತ್ ಶರ್ಮಾ?

ಸಚಿನ್ ರೆಕಾರ್ಡ್​ಗಳನ್ನು ಬ್ರೇಕ್ ಮಾಡ್ತಾರಾ ರೋಹಿತ್ ಶರ್ಮಾ?

ವಿಶ್ವಸಮರ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇದೀಗ ಪ್ರಶಸ್ತಿ ಗೆಲ್ಲುವ ತಂಡದ ಲೆಕ್ಕಾಚಾರದೊಂದಿಗೆ ಸಾರ್ವಕಾಲಿಕ ದಾಖಲೆಗಳನ್ನ ಬ್ರೇಕ್​ ಮಾಡೋ ಆಟಗಾರ ಯಾರು ಎಂಬ ಚರ್ಚೆಯೂ ಆರಂಭವಾಗಿದೆ. ಇನ್ನುಳಿದ 3 ಪಂದ್ಯಗಳಲ್ಲಿ 4 ತಂಡಗಳಲ್ಲಿರುವ ಆಟಗಾರರಿಗೆ ಐತಿಹಾಸಿಕ ದಾಖಲೆಗಳನ್ನ ಬ್ರೇಕ್​ ಮಾಡಬಹುದಾದ ಅವಕಾಶವಿದೆ.
ಮಾಸ್ಟರ್​​ ದಾಖಲೆ ಮುರೀತಾರಾ ಹಿಟ್​ಮ್ಯಾನ್​? : 2003ರಲ್ಲಿ ಮಾಸ್ಟರ್​​ ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​​ ನಿರ್ಮಿಸಿದ ದಾಖಲೆಯನ್ನ ಮುರಿಯಲು ಇಬ್ಬರು ಬ್ಯಾಟ್ಸ್​ಮನ್​ಗಳು ತುದಿಗಾಲಲ್ಲಿ ನಿಂತಿದ್ದಾರೆ. ಸಚಿನ್​ 2003ರ ಟೂರ್ನಿಯಲ್ಲಿ 673 ರನ್​ ಸಿಡಿಸಿ ಒಂದೇ ವಿಶ್ವಕಪ್​ನಲ್ಲೇ ಹೆಚ್ಚು ರನ್​ ಕಲೆಹಾಕಿದ ಬ್ಯಾಟ್ಸ್​ಮನ್​ ಎಂಬ ದಾಖಲೆ ನಿರ್ಮಿಸಿದ್ರು. ಇದೀಗ 647 ರನ್​ ಕಲೆಹಾಕಿರುವ ಟೀಮ್​ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಹಾಗೂ 638 ರನ್​ಗಳನ್ನ ಹೊಂದಿರುವ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಸಚಿನ್ ದಾಖಲೆಯ ಹಿಂದಿದ್ದಾರೆ.
ಸೆಂಚುರಿ ಕಿಂಗ್​ ಆಗ್ತಾರಾ ಹಿಟ್​ಮ್ಯಾನ್​? : ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​​ರ ಇನ್ನೊಂದು ದಾಖಲೆಯನ್ನೂ ಮುರಿಯಲು ಹಿಟ್​ಮ್ಯಾನ್​ ರೋಹಿತ್​​ ಸಜ್ಜಾಗಿದ್ದಾರೆ. 2015ರ ವಿಶ್ವಕಪ್​ನಲ್ಲಿ 1 ಶತಕ ಬಾರಿಸಿದ್ದ ರೋಹಿತ್ ಶರ್ಮಾ ಪ್ರಸಕ್ತ ಟೂರ್ನಿಯಲ್ಲಿ 5 ಶತಕಗಳನ್ನು ಚಚ್ಚಿದ್ದಾರೆ. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಹೆಚ್ಚು ಸೆಂಚುರಿ ಬಾರಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಸಚಿನ್​ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ರೋಹಿತ್​​ ಶರ್ಮಾ ಬ್ಯಾಟ್​ನಿಂದ ಇನ್ನೊಂದು ಶತಕ ಸಿಡಿದಿದ್ದೇ ಆದ್ರೆ, ವಿಶ್ವಕಪ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಒಂದು ವಿಕೆಟ್​​ ಕಬಳಿಸಿದ್ರೆ ಸ್ಟಾರ್ಕ್​ ವಿಶ್ವದಾಖಲೆ : ಬ್ಯಾಟಿಂಗ್​ ಸಾಧನೆ ಒಂದೆಡೆಯಾದ್ರೆ, ಬೌಲಿಂಗ್​ ವಿಭಾಗದಿಂದ ರೆಕಾರ್ಡ್​​​ ಬ್ರೇಕ್​ ಮಾಡಲು ವೇಗಿ ಮಿಚೆಲ್​ ಸ್ಟಾರ್ಕ್ ಸಜ್ಜಾಗಿದ್ದಾರೆ. ಟೂರ್ನಿಯಲ್ಲಿ ಬೌಲಿಂಗ್ ಪರಾಕ್ರಮ ಮೆರೆಯುತ್ತಿರುವ ಆಸ್ಟ್ರೇಲಿಯಾದ ಸ್ಟಾರ್ಕ್​ ಸದ್ಯ 26 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್​ ಪಟ್ಟಿಯಲ್ಲಿ ಬೌಲಿಂಗ್​ ದಿಗ್ಗಜ ಗ್ಲೇನ್​ ಮೆಕ್​ಗ್ರಾಥ್​​​ರೊಂದಿಗೆ ಅಗ್ರಸ್ಥಾನದಲ್ಲಿದ್ಧಾರೆ. ಇನ್ನು ಒಂದು ವಿಕೆಟ್ ಉರುಳಿಸಿದರೆ ಸ್ಟಾರ್ಕ್​ ಮೆಕ್​ಗ್ರಾಥ್​​​ ದಾಖಲೆಯನ್ನ ಸರಿಗಟ್ಟಲಿದ್ದಾರೆ.
ಹೊಸ ದಾಖಲೆ ನಿರ್ಮಿಸಲು ರೂಟ್​ ಸಜ್ಜು : ಇಲ್ಲಿಯವರೆಗೆ ವಿಶ್ವಕಪ್ ಹಲವು ರೋಚಕ ಕ್ಯಾಚ್​ಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಇಂಗ್ಲೆಂಡ್​ನ ಜೋ ರೂಟ್ ಅದ್ಭುತ ಫೀಲ್ಡಿಂಗ್ ಮೂಲಕ ಅನೇಕರಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್ 11 ಕ್ಯಾಚ್​ ಹಿಡಿದು ಟೂರ್ನಿಯೊಂದರಲ್ಲಿ ಗರಿಷ್ಠ ಕ್ಯಾಚ್​ ಹಿಡಿದ ಪ್ಲೇಯರ್​​​ ಎಂಬ ಖ್ಯಾತಿಗೆ ಪಾತ್ರರಾಗಿದ್ರು. ಇದೀಗ ಪ್ರಸಕ್ತ ಟೂರ್ನಿಯಲ್ಲಿ ರೂಟ್​ ಕೂಡ 11 ಕ್ಯಾಚ್​​ ಹಿಡಿದಿದ್ದು, ಇನ್ನು 1 ಕ್ಯಾಚ್ ಪಡೆದರೂ ವಿಶ್ವಕಪ್​ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಲಿದ್ದಾರೆ.
ಕ್ಯಾರಿ ಕೈಚಳಕ : ಪ್ರಸಕ್ತ ಟೂರ್ನಿಯಲ್ಲಿ ಅಲೆಕ್ಸ್​​ ಕ್ಯಾರಿ ಹೆಸರು ಕೇಳಿ ಬಂದದ್ದು ವಿರಳ. ಬ್ಯಾಟಿಂಗ್​ನಲ್ಲಿ ವಿಫಲರಾದ ಕ್ಯಾರಿ ವಿಕೆಟ್ ಕೀಪಿಂಗ್ ಮೂಲಕ ಕೈಚಳಕ ತೋರಿಸಿದ್ದಾರೆ. ಚೊಚ್ಚಲ ವಿಶ್ವಕಪ್ ಪಂದ್ಯವಾಡುತ್ತಿರುವ ಕ್ಯಾರಿ 19 ಕೀಪಿಂಗ್ ಬಲಿ ಪಡೆದುಕೊಂಡಿದ್ದಾರೆ. ಇನ್ನು 4 ಬ್ಯಾಟ್ಸ್​​ಮನ್​ಗಳಿಗೆ ಪೆವಿಲಿಯನ್​ ದಾರಿ ತೋರಿಸಿದ್ರೆ, ವಿಶ್ವ ದಾಖಲೆಯೊಂದು ಕ್ಯಾರಿ ಹೆಸರಿಗೆ ಸೇರ್ಪಡೆಯಾಗಲಿದೆ. 2003ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಕೀಪರ್ ಆ್ಯಡಂ ಗಿಲ್​ಕ್ರಿಸ್ಟ್​ 21 ಬಲಿ ಪಡೆಯುವ ಮೂಲಕ ಸರ್ವಕಾಲಿಕ ದಾಖಲೆ ಬರೆದಿದ್ದರು.
ಒಟ್ಟಾರೆಯಾಗಿ, ವಿಶ್ವಸಮರ ಅಂತ್ಯಕ್ಕೆ ಇನ್ನೂ 3 ಪಂದ್ಯಗಳು ಮಾತ್ರ ಬಾಕಿ ಇವೆ. ಸಾರ್ವಕಾಲಿಕ ದಾಖಲೆಗಳನ್ನ ಉಡೀಸ್​​ ಮಾಡಲು ಆಟಗಾರರೂ ತಯಾರಾಗಿದ್ದಾರೆ. ಒಂದು ವೇಳೆ ಸೆಮೀಸ್​ ಪಂದ್ಯದಲ್ಲಿ ಗೆದ್ದರೆ ಆಟಗಾರಿಗೆ ರೆಕಾರ್ಡ್​​ ಬ್ರೇಕ್​ ಮಾಡಲು ಇನ್ನೊಂದು ಅವಕಾಶ ಬೋನಸ್​ ಆಗಿ ಸಿಗಲಿದೆ. ಹೀಗಾಗಿ ಯಾವೆಲ್ಲಾ ಐತಿಹಾಸಿಕ ದಾಖಲೆಗಳು ಈ ಬಾರಿ ಉಡೀಸ್​​ ಆಗಲಿವೆ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

Recent Comments