ಐಸಿಸಿ ಟೂರ್ನಿಗಳಲ್ಲಿ ಭಾರತವೇ ಕಿಂಗ್​​​!

0
147

ಕೊಹ್ಲಿ ಬಳಗದ ಅಸಲಿ ವಿಶ್ವಕಪ್​ ಹೋರಾಟ ಇಂದಿನಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯಕ್ಕೂ ಮೊದಲೇ ಟೀಮ್​ಇಂಡಿಯಾ ಪ್ರಶಸ್ತಿ ಗೆಲ್ಲುತ್ತೆ ಅನ್ನೋ ಮಾತುಗಳು ಕೇಳಿ ಬರ್ತಾ ಇವೆ. ಈ ದಶಕದಲ್ಲಿ ಐಸಿಸಿ ಟೂರ್ನಿಯಲ್ಲಿ ಟೀಮ್​ಇಂಡಿಯಾ ಮಾಡಿರುವ ಸಾಧನೆಗಳು ಈ ಮಾತಿಗೆ ಇನ್ನಷ್ಟು ಪುಷ್ಠಿ ನೀಡಿವೆ.
2011ರಲ್ಲಿ ವಿಶ್ವಕಪ್​ ಟ್ರೋಫಿ, 2013 ರಲ್ಲಿ ಅತಿಥೇಯ ಇಂಗ್ಲೆಂಡ್​​ ಬಳಗವನ್ನೇ ಸೋಲಿಸಿ ಚಾಂಪಿಯನ್ಸ್​​ ಟ್ರೋಫಿ, 2015 ವಿಶ್ವಕಪ್​ನಲ್ಲಿ ಸೆಮಿಫೈನಲಿಸ್ಟ್​​, 2017ರ ಚಾಂಪಿಯನ್ಸ್​​​ ಟ್ರೋಫಿಯಲ್ಲಿ ರನ್ನರ್​ ಅಪ್​. ಇವು ಟೀಮ್​ಇಂಡಿಯಾ ಈ ದಶಕದ ಐಸಿಸಿ ಟ್ರೋಫಿಯಲ್ಲಿ ಮಾಡಿರುವ ಸಾಧನೆಗಳು.
ಈ ದಶಕದಲ್ಲಿ ನಡೆದಿರುವ ನಾಲ್ಕು ಪ್ರಮುಖ ಟೂರ್ನಿಗಳಲ್ಲಿ ಆಡಿರುವ 27 ಪಂದ್ಯಗಳ ಪೈಕಿ 22ರಲ್ಲಿ ಟೀಮ್​ಇಂಡಿಯಾ ಜಯ ಸಾಧಿಸಿದೆ. ಸರಾಸರಿ 81.48ರ ಸರಾಸರಿಯಲ್ಲಿ ಜಯ ಸಾಧಿಸಿರುವ ಬ್ಲೂ ಬಾಯ್ಸ್​​​ ಬಳಗ ಕಳೆದೊಂದು ದಶಕದಲ್ಲಿ ಐಸಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ಯಶಸ್ಸು ಕಂಡ ತಂಡವಾಗಿದೆ.
 ಐಸಿಸಿ ಟೂರ್ನಿಗಳ ಬೆಸ್ಟ್​​ ಟೀಮ್ಸ್​
ತಂಡ                  ಪಂದ್ಯ         ಗೆಲುವು        ಜಯದ ಸರಾಸರಿ
ಭಾರತ                  27          22             81.48
ನ್ಯೂಜಿಲೆಂಡ್​            23         14              60.87
ಪಾಕಿಸ್ತಾನ              23         14              60.87
ಶ್ರೀಲಂಕಾ              23         13               56.52
ದಕ್ಷಿಣ​​ ಆಫ್ರಿಕಾ         22         12                54.55
ಆಸ್ಟ್ರೇಲಿಯಾ           21        11                52.38
 ಕಳೆದೊಂದು ದಶಕದಲ್ಲಿ ಐಸಿಸಿ ಟೂರ್ನಿಗಳಲ್ಲಿ ಬೆಸ್ಟ್​​ ಪ್ರದರ್ಶನ ನೀಡಿದ ತಂಡಗಳ ಪಟ್ಟಿಯಲ್ಲಿ 27 ಪಂದ್ಯಗಳನ್ನಾಡಿ 81.48ರ ಸರಾಸರಿಯಲ್ಲಿ 22 ಮ್ಯಾಚ್​​ಗಳಲ್ಲಿ ಜಯ ಸಾಧಿಸಿ 4 ಪಂದ್ಯಗಳಲ್ಲಿ ಸೋಲುಂಡಿರುವ ಟೀಮ್​ಇಂಡಿಯಾ ಅಗ್ರಸ್ಥಾನದಲ್ಲಿದೆ. 2 ಮತ್ತು 3ನೇ ಸ್ಥಾನದಲ್ಲಿ 23 ಪಂದ್ಯಗಳಿಂದ 60.87ರ ಸರಾಸರಿಯಲ್ಲಿ 14 ಪಂದ್ಯ ಗೆದ್ದಿರುವ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳಿವೆ. ಇನ್ನು 23 ಪಂದ್ಯಗಳನ್ನಾಡಿ 13ರಲ್ಲಿ ಜಯ ಸಾಧಿಸಿ 9 ಪಂದ್ಯಗಳಲ್ಲಿ ಸೋಲುಂಡಿರುವ ಶ್ರೀಲಂಕಾ 56.52ರ ಸರಾಸರಿ ಹೊಂದಿ 4ನೇ ಸ್ಥಾನದಲ್ಲಿದ್ರೆ, 22 ಮ್ಯಾಚ್​​ಗಳನ್ನಾಡಿ 54.55ರ ಸರಾಸರಿಯಲ್ಲಿ 12 ಪಂದ್ಯ ಗೆದ್ದಿರುವ ದಕ್ಷಿಣ​​ ಆಫ್ರಿಕಾ 5ನೇ, 52.38ರ ಸರಾಸರಿಯಲ್ಲಿ 21 ಪಂದ್ಯಗಳಿಂದ 11ರಲ್ಲಿ ಜಯ ಸಾಧಿಸಿರುವ ಆಸ್ಟ್ರೇಲಿಯಾ 6ನೇ ಸ್ಥಾನ ಅಲಂಕರಿಸಿದೆ.

ಈ ಅಂಕಿ-ಅಂಶಗಳಲ್ಲಿ ಮಾತ್ರವಲ್ಲ. ಐಸಿಸಿ ಟೂರ್ನಿಮೆಂಟ್​​ನ ಉದ್ದಕ್ಕೂ ಭಾರತ ಕನ್ಸಿಸ್ಟೇನ್ಸಿ ಪ್ರದರ್ಶನ ನೀಡಿದೆ. ಇದೇ 22 ಗೆಲುವುಗಳ ಪೈಕಿ 9 ಗೆಲುವುಗಳು 6ಕ್ಕಿಂತ ಹೆಚ್ಚು ವಿಕೆಟ್​ ಅಂತರದಲ್ಲಿ ಸಾಧಿಸಿದವುಗಳಾಗಿದ್ರೆ, 6 ಪಂದ್ಯಗಳಲ್ಲಿ 70ಕ್ಕೂ ಹೆಚ್ಚು ರನ್​ಗಳ ಜಯಭೇರಿ ಬಾರಿಸಿದೆ.

ಟೀಮ್​ಇಂಡಿಯಾದ ಐಸಿಸಿ ಟೂರ್ನಿ ಯಶೋಗಾಥೆಯಲ್ಲಿ ಬ್ಯಾಟಿಂಗ್​ ಪ್ರಮುಖ ಪಾತ್ರ ನಿರ್ವಹಿಸಿದೆ. ಮಹತ್ವದ ಟೂರ್ನಿಗಳಲ್ಲಿ ಟೀಮ್​ಇಂಡಿಯಾ ಬ್ಯಾಟ್ಸ್​​ಮನ್​ಗಳ ಔಟ್​​ಸ್ಟ್ಯಾಂಡಿಂಗ್​ ಪ್ರದರ್ಶನ ನೀಡಿದ್ದಾರೆ ಅನ್ನೋದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

ಐಸಿಸಿ ಟೂರ್ನಿಗಳ ಬೆಸ್ಟ್​​ ಬ್ಯಾಟಿಂಗ್​ ಟೀಮ್ಸ್​

ಪಂದ್ಯ          ಸರಾಸರಿ              100              50
ಭಾರತ           47.45             09               23
ದಕ್ಷಿಣ ಆಫ್ರಿಕಾ    36.12             06               20
ಶ್ರೀಲಂಕಾ         34.19            04               15
ಆಸ್ಟ್ರೇಲಿಯಾ      34.16             04              19
ಬಾಂಗ್ಲಾದೇಶ      32.59            05               13
ಇಂಗ್ಲೆಂಡ್​          31.16           04                17

ಐಸಿಸಿ ಟೂರ್ನಿಗಳಲ್ಲಿ ಬೆಸ್ಟ್​​ ಬ್ಯಾಟಿಂಗ್​ ಸರಾಸರಿ ಹೊಂದಿರುವ ತಂಡಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. 9 ಶತಕ ಹಾಗೂ 23ರ ಅರ್ಧಶತಕಗಳೊಂದಿಗೆ ಭಾರತ 47.45ರ ಬ್ಯಾಟಿಂಗ್​ ಸರಾಸರಿ ಹೊಂದಿದ್ರೆ, ಸೌತ್​ ಆಫ್ರಿಕಾ 6 ಶತಕಗಳು ಹಾಗೂ 20 ಅರ್ಧಶತಕಗಳೊಂದಿಗೆ 36.12ರ ಬ್ಯಾಟಿಂಗ್​ ಸರಾಸರಿ ಹೊಂದಿ 2ನೇ ಸ್ಥಾನದಲ್ಲಿದೆ. ಇನ್ನು 20 ಅರ್ಧಶತಕ, 4 ಶತಕಗಳ ಇನ್ನಿಂಗ್ಸ್​ಗಳಿಂದ 34.19ರ ಸರಾಸರಿ ಹೊಂದಿ ಶ್ರೀಲಂಕಾ 3ನೇ ಸ್ಥಾನದಲ್ಲಿದ್ರೆ, 34.16ರ ಸರಾಸರಿಯೊಂದಿಗೆ 4 ಶತಕ, 15 ಅರ್ಧಶತಕಗಳ ಇನ್ನಿಂಗ್ಸ್​ ಹೊಂದಿರುವ ಆಸ್ಟ್ರೇಲಿಯಾ 4ನೇ ಸ್ಥಾನ ಅಲಂಕರಿಸಿದೆ. 32.59ರ ಸರಾಸರಿಯಲ್ಲಿ 5 ಶತಕ ಹಾಗೂ 13 ಅರ್ಧಶತಕಗಳ ಇನ್ನಿಂಗ್ಸ್​ ಹೊಂದಿರುವ ಬಾಂಗ್ಲಾದೇಶ 5ನೇ ಸ್ಥಾನ ಹಾಗೂ 31.16ರ ಸರಾಸರಿಯಲ್ಲಿ 17 ಅರ್ಧಶತಕ ಹಾಗೂ 4 ಶತಕಗಳನ್ನ ಹೊಂದಿರುವ ಇಂಗ್ಲೆಂಡ್​​​ 6ನೇ ಸ್ಥಾನ ಅಲಂಕರಿಸಿದೆ.

ಟೀಮ್​ಇಂಡಿಯಾದ ಬಿಗ್​ ತ್ರಿಗಳಾದ ರೋಹಿತ್​​ ಶರ್ಮಾ, ವಿರಾಟ್​​ ಕೊಹ್ಲಿ, ಶಿಖರ್​ ಧವನ್​ ಭಾರತದ ಈ ಯಶಸ್ಸಿನ ಗುಟ್ಟುಗಳಾಗಿದ್ದಾರೆ. ಕಳೆದ 4 ಐಸಿಸಿ ಟೂರ್ನಿಗಳಿಂದ ಶಿಖರ್​ ಧವನ್ 1,113 ರನ್​ ಕಲೆಹಾಕಿದ್ರೆ, ರೋಹಿತ್​ ಶರ್ಮಾ 811 ರನ್​ಗಳಿಸಿದ್ದಾರೆ​​. ವಿರಾಟ್​​​ ಕೊಹ್ಲಿ 18 ಇನ್ನಿಂಗ್ಸ್​ಗಳಿಂದ 739 ರನ್​ ಕಲೆಹಾಕಿದ್ದಾರೆ.

ಒಟ್ಟಾರೆಯಾಗಿ, 2010ರ ಬಳಿಕದ ಐಸಿಸಿ ಟೂರ್ನಿಗಳಲ್ಲಿ ಟೀಮ್​ಇಂಡಿಯಾ ದಿ ಬೆಸ್ಟ್​​ ಫರ್ಪಾಮೆನ್ಸ್​​ ನೀಡಿದೆ. ಈ ಆವೃತ್ತಿಯ ವಿಶ್ವಕಪ್​ ಟೂರ್ನಿಯ ವಿಶ್ವಕಪ್​ ಟೂರ್ನಿಯಲ್ಲೂ ಕೊಹ್ಲಿ ಬಳಗ ಇದೇ ಪ್ರದರ್ಶನವನ್ನ ಮುಂದುವರೆಸಲಿ ಅನ್ನೋದು ನಮ್ಮ ಆಶಯ.

LEAVE A REPLY

Please enter your comment!
Please enter your name here