ಸೋತವರ ಕಾಳಗದಲ್ಲಿ ಗೆಲುವು ಯಾರಿಗೆ?

0
147

ದಿಮಿತ್ ಕರುಣ ರತ್ನೆ ನಾಯಕತ್ವದ ಶ್ರೀಲಂಕಾ ಹಾಗೂ ಗುಲ್ಬದಿನ್ ನೈಬ್ ಮುಂದಾಳತ್ವದ ಅಫ್ಘಾನ್ ಎರಡು ತಂಡಗಳು ಗಾಯಗೊಂಡಿರುವ ಹುಲಿಗಳು..! ಟೂರ್ನಿಯಲ್ಲಿ ಇತ್ತಂಡಗಳಿಗಿದು ಎರಡನೇ ಮ್ಯಾಚ್. ಆಡಿರೋ ಮೊದಲ ಪಂದ್ಯದಲ್ಲೇ ಸೋತು ನಿರಾಸೆ ಅನುಭವಿಸಿವೆ.

ಅಪ್ಘಾನಿಸ್ತಾನ್  ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಸೋಲುಂಡಿದೆ. ಶ್ರೀಲಂಕಾ ಕೂಡ ತನ್ನ ಫಸ್ಟ್ಮ್ಯಾಚ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲನುಭವಿಸಿದೆ. ಹೀಗಾಗಿ ಸೋತವರ ನಡುವಿನ ಕಾಳಗಕ್ಕೆ ಸಾಕ್ಷಿಯಾಗಲಿದೆ ಕಾರ್ಡೀಫ್ ಸೋಪಿಯಾ ಗಾರ್ಡನ್ಸ್ಟೇಡಿಯಂ.

ಇನ್ನು ಅಭ್ಯಾಸ ಪಂದ್ಯದ ವಿಚಾರಕ್ಕೆ ಬಂದ್ರೆ ಅಪ್ಘಾನ್  ಪಾಕಿಸ್ತಾನ್ ವಿರುದ್ಧ 3 ವಿಕೆಟ್ಗಳಿಂದ ಗೆದ್ದು ಬೀಗಿತ್ತುನಂತರ ಇಂಗ್ಲೆಂಡ್ ವಿರುದ್ಧ 9 ವಿಕೆಟ್ಗಳಿಂದ ಸೋಲುಂಡಿತ್ತು. ಆದರೆ, ಶ್ರೀಲಂಕಾ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡೂ ಪ್ರಾಕ್ಟೀಸ್ಮ್ಯಾಚ್ನಲ್ಲಿ ಸೋತು ಸುಣ್ಣಾಗಿತ್ತು.

1996ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಶ್ರೀಲಂಕಾ 2007 ಮತ್ತು 2011ರಲ್ಲಿ ಸತತ ಎರಡು ಬಾರಿ ಫೈನಲ್ ಪ್ರವೇಶಿಸಿದ್ದರೂ ಗೆಲುವು ಸಾಧ್ಯವಾಗಿರಲಿಲ್ಲ. ಬಾರಿ ವಿಶ್ವಕಪ್ ಎತ್ತಿ ಹಿಡಿಯ ಬಲ್ಲ ತಂಡಗಳ ಪೈಕಿ ಅಗ್ರಪಂಕ್ತಿಯಲ್ಲಿದ್ದರೂ ಕೂಡ ಪ್ರಾಕ್ಟೀಸ್ ಮ್ಯಾಚ್ಗಳು ಮತ್ತು ಮೊದಲ ಪಂದ್ಯದ ಸೋಲು ತಂಡದ ಆತ್ಮಬಲವನ್ನು ಕುಗ್ಗಿಸಿರೋದಂತೂ ಸುಳ್ಳಲ್ಲ.

ವಿಶ್ವಕಪ್ ಮ್ಯಾಚ್ಸೇರಿದಂತೆ ಒಟ್ಟಾರೆ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ 3 ಪಂದ್ಯಗಳು ನಡೆದಿವೆ. ಮೂರು ಮ್ಯಾಚ್​​ಗಳಲ್ಲಿ  1 ಮ್ಯಾಚ್ನಲ್ಲಿ ಅಫ್ಘಾನಿಸ್ತಾನ್ ಶ್ರೀಲಂಕಾಕ್ಕೆ ಶಾಕ್ ನೀಡಿದ ದಾಖಲೆಯೂ ಇದೆ. 2018ರಲ್ಲಿ ನಡೆದ ಏಷ್ಯಾಕಪ್ನಲ್ಲಿ ಅಫ್ಘಾನ್ ಸಿಂಹಳಿಯರ ವಿರುದ್ಧ 91ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿ ಲಂಕಾ ಅಫ್ಘಾನ್ ಅನ್ನು ಲಘುವಾಗಿಯಂತೂ ಪರಿಗಣಿಸುವಂತಿಲ್ಲ.

ತಂಡಗಳ ಬಲಾಬಲ ನೋಡೋದಾದ್ರೆ ಶ್ರೀಲಂಕಾಕ್ಕೆ ನಾಯಕ ದಿಮಿತ್​​ ಕರುಣರತ್ನೆ, ಲಹಿರು ತಿರುಮನ್ನೆ, ಕುಸಲ್ ಮೆಂಡೀಸ್ಪ್ರಮುಖ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ತಿಸೆರಾ ಪೆರೇರಾ, ಜೀವನ್ ಮೆಂಡೀಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲೂ ನೆರವಾಗಬಲ್ಲರು. ಲಸಿತ್ ಮಾಲಿಂಗಾ, ಇಸುರು ಉದನಾ ಬೌಲಿಂಗ್​​ ವಿಭಾಗದ ಪ್ರಮುಖ ಅಸ್ತ್ರಗಳು.

ಇನ್ನು ಅಫ್ಗಾನ್ನಲ್ಲಿ ನಾಯಕ ಗುಲ್ಬದಿನ್ ನೈಬ್ , ಮೊಹಮ್ಮದ್ ನಬಿ ಆಲ್​​ರೌಂಡರ್ ಗಳಾಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರಗಳಾಗಿದ್ದಾರೆ. ,ರೆಹ್ಮತ್ ಶಾ, ಹಶ್ಮತುಲ್ಲಾ ಶಾಹಿದಿ, ನೂರ್ ಅಲಿ ಜದ್ರನ್ ಬ್ಯಾಟಿಂಗ್ ವಿಭಾಗದಲ್ಲಿ ಬಲ ತುಂಬಿದ್ರೆ, ದವ್ಲತ್ ಜದ್ರನ್, ಮುಜೀದ್ ಉರ್ ರೆಹ್ಮಾನ್ ಪ್ರಮುಖ ಬೌಲರ್ ಗಳು.

ಮೇಲ್ನೊಟಕ್ಕೆ ಶ್ರೀಲಂಕಾ ಬಲಾಢ್ಯ ಅನಿಸಿದ್ರೂ, ಅಪ್ಘಾನಿಸ್ತಾನ್​ ಸುಲಭ ತುತ್ತಂತೂ ಅಲ್ವೇ ಅಲ್ಲ. ಎರಡು ತಂಡಗಳ ನಡುವೆ ರೋಚಕ ಹಣಾಹಣಿಯಂತು ಪಕ್ಕಾ!

ತಂಡಗಳು ಇಂತಿವೆ

ಶ್ರೀಲಂಕಾ : ದಿಮಿತ್ ಕರುಣರತ್ನೆ (ನಾಯಕ), ಅವಿಷ್ಕ ಫೆರ್ನಾಂಡೊ, ಲಹಿರು ತಿರುಮನ್ನೆ, ಕುಸಲ್ ಮೆಂಡಿಸ್, ಕುಸಲ್ ಪೆರೇರ್​, ಆ್ಯಂಜಲೋ ಮ್ಯಾಥ್ಯೂಸ್, ಧನಂಜಯ್ ಡಿ ಸಿಲ್ವಾ, ಜೀವನ್ ಮೆಂಡಿಸ್, ಮಿಲಿಂಡಾ ಸಿರಿವರ್ದನೆ ,ತಿಸಾರ ಪೆರೇರಾ,ಇಸುರು ಉದನಾ, ಸುರಂಗ ಲಕ್ಮಲ್ ,ನುವನ್ ಪ್ರದೀಪ್ ,ಜೆಫ್ರಿ ವಂದರ್ಸೆ, ಲಸಿತ್ ಮಲಿಂಗಾ

ಅಫ್ಘಾನ್​ : ಗುಲ್ಬದಿನ್ ನೈಬ್ (ನಾಯಕ) , ಅಸ್ಗರ್ ಅಫ್ಗನ್, ಹಶ್ಮತುಲ್ಲಾ ಶಾಹಿದಿ, ಹಜ್ರತುಲ್ಲಾ ಜಜಾಯ್ , ನಜೀಬುಲ್ಲಾ ಜದ್ರನ್, ನೂರ್ ಅಲಿ ಜದ್ರನ್ ,ರೆಹ್ಮತ್ ಶಾ, ಸಮಿಉಲ್ಲಾ ಶೆನ್ವರಿ, ಮೊಹಮ್ಮದ್ ನಬಿ , ಮೊಹಮ್ಮದ್ ಶೆಹ್ಜಾದ್, ಮುಜೀದ್ ಉರ್ ರೆಹ್ಮಾನ್, ದವ್ಲತ್ ಜದ್ರನ್ , ಹಮಿದ್ ಹಸನ್, ರಶೀದ್ ಖಾನ್, ಅಫ್ತಾಬ್ ಅಲಮ್

LEAVE A REPLY

Please enter your comment!
Please enter your name here