ಶಿಖರ್ ಧವನ್ ‘ನಾಟ್ ಔಟ್’ ..!

0
246

ಟೀಮ್ ಇಂಡಿಯಾದ ಓಪನರ್ ಶಿಖರ್ ಧವನ್ ಅವರನ್ನು ಇಂಗ್ಲೆಂಡ್​ನಲ್ಲೇ ಉಳಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ‘ಶಿಖರ್ ಧವನ್ ಇಂಗ್ಲೆಂಡ್​ನಲ್ಲೇ ಉಳಿದುಕೊಳ್ಳಲಿದ್ದಾರೆ. ಬಿಸಿಸಿಐನ ಮೆಡಿಕಲ್​ ಟೀಮ್​ನ ಅಬ್ಸರ್ವೇಷನ್​ನಲ್ಲಿ ಅವರಿದ್ದಾರೆ. ಅವರನ್ನು ಅಲ್ಲಿಯೇ ಉಳಿಸಿಕೊಳ್ಳಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ’ ಅಂತ ಬಿಸಿಸಿಐ ಟ್ವೀಟ್​ ಮಾಡಿದೆ.
ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್​ನಲ್ಲಿ ಶಿಖರ್ ಧವನ್ ಸೆಂಚುರಿ ಬಾರಿಸಿದ್ರು. ಪಂದ್ಯದ ವೇಳೆ ಅವರ ಎಡಗೈ ಹೆಬ್ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದರು. ಗಾಯದ ಸಮಸ್ಯೆ ಹೆಚ್ಚಿದ್ದರಿಂದ ಅವರು ವಿಶ್ವಕಪ್​ನಿಂದಲೇ ಹೊರ ನಡೆಯಲಿದ್ದಾರೆ. ಅವರ ಸ್ಥಾನಕ್ಕೆ ರಿಷಭ್ ಪಂತ್ ಅವರಿಗೆ ಬುಲಾವ್ ಬರಲಿದೆ ಎನ್ನಲಾಗಿತ್ತು. ಆದರೆ, ಬಿಸಿಸಿಐ ಧವನ್ ಅವರನ್ನು ಇಂಗ್ಲೆಂಡ್​ನಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದ್ದು, ಶಿಖರ್ ಧವನ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಮಾತ್ರ ಹೊರಗುಳಿಯುವ ಸಾಧ್ಯತೆ ಇದೆ. ನಂತರದ ಪಂದ್ಯಗಳಿಗೆ ಅವರು ಲಭ್ಯರಾಗಬಹುದು.
ನ್ಯೂಜಿಲೆಂಡ್ ವಿರುದ್ಧ ಕನ್ನಡಿಗ ಕೆ.ಎಲ್ ರಾಹುಲ್ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ. ದಿನೇಶ್ ಕಾರ್ತಿಕ್ ಅವರು ಆಡುವ 11ರ ಬಳಗದಲ್ಲಿ ಸ್ಥಾನ ಪಡೆದು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಯಲಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here