ಇಂಗ್ಲೆಂಡ್ ಓಟಕ್ಕೆ ಬ್ರೇಕ್ ಹಾಕಿ, ಗೆಲುವಿನ ಖಾತೆ ತೆಗೆಯುತ್ತಾ ಪಾಕ್?

0
127

ಗೆಲುವಿನಿಂದ ವಿಶ್ವಕಪ್ ಅಭಿಯಾನವನ್ನು ಶುಭಾರಂಭ ಮಾಡಿರುವ ಅತಿಥೇಯ ಇಂಗ್ಲೆಂಡ್ ಮತ್ತು ಹೀನಾಯ ಸೋಲಿನೊಂದಿಗೆ ಟೂರ್ನಿಯನ್ನು ಆರಂಭಿಸಿರುವ ಪಾಕಿಸ್ತಾನ  ಇಂದು ಮುಖಾಮುಖಿ ಆಗಲಿವೆ.

ವಿಶ್ವಕಪ್ ಇತಿಹಾಸದಲ್ಲಿ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಲು ಸಾಧ್ಯವಾಗಿಲ್ಲ ಎನ್ನುವ ಕೊರಗಿನಲ್ಲಿರುವ ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್​ ತವರಿನಲ್ಲಿ ಪ್ರಶಸ್ತಿಗೆ ಮುತ್ತಿಕ್ಕುವ ಆತ್ಮವಿಶ್ವಾಸದಲ್ಲಿದೆ. ಅದಕ್ಕೆ ತಕ್ಕಂತೆ ಟೂರ್ನಿಯಲ್ಲಿ ಶುಭಾರಂಭ ಮಾಡಿ, ಎರಡನೇ ಪಂದ್ಯಕ್ಕೆ ಸಜ್ಜಾಗಿದೆ.

ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 12ರನ್​ ಗಳಿಂದ ಸೋತಿದ್ದ ಇಂಗ್ಲೆಂಡ್, ಎರಡನೇ ಅಭ್ಯಾಸ ಪಂದ್ಯದಲ್ಲಿ ಅಪ್ಘಾನಿಸ್ತಾನದ ವಿರುದ್ಧ 9 ವಿಕೆಟ್​ಗಳ ಅಧಿಕಾರಯುತ ಗೆಲುವನ್ನು ಪಡೆಯುವುದರ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ವಿಶ್ವಕಪ್ ಗೆ ಸನ್ನದ್ಧವಾಯಿತು.

ಬಳಿಕ ಮೇ 30ರಂದು ದಿ ಓವೆಲ್  ಮೈದಾನದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 104ರನ್​ ಗಳಿಂದ ಭರ್ಜರಿಯಾಗಿ ಗೆದ್ದು  ಬೀಗಿದ್ದು, ಇಂದು 2ನೇ ಮ್ಯಾಚ್​ಗೆ ರೆಡಿಯಾಗಿದೆ.

ಆದರೆ, ಪಾಕಿಸ್ತಾನದ ಸ್ಥಿತಿ ಇಂಗ್ಲೆಂಡ್​ ಗಿಂತ ವಿಭಿನ್ನ. ಯಾಕೆಂದರೆ ಚೊಚ್ಚಲ ಅಭ್ಯಾಸ ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಫ್ಘಾನಿಸ್ತಾನದ ವಿರುದ್ಧ 3 ವಿಕೆಟ್​ ಗಳಿಂದ ಸೋತು ಅವಮಾನ ಎದುರಿಸಿತ್ತು. ಬಾಂಗ್ಲಾ ವಿರುದ್ಧ ನಡೆಯಬೇಕಿದ್ದ 2ನೇ ಪ್ರಾಕ್ಟೀಸ್ ಮ್ಯಾಚ್​ ಮಳೆಯಿಂದ ರದ್ದಾಯಿತು. ಆಗಿದ್ದಾಗಲಿ, ಸರಣಿಯನ್ನು ಶುಭಾರಂಭ ಮಾಡೋಣ ಅಂತಿದ್ದ ಪಾಕ್​ ನಾಟಿಂಗ್ ಹ್ಯಾಮ್​ ನಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 47 ವಿಕೆಟ್​ ಗಳ ಹೀನಾಯ ಸೋಲುಂಡಿತು.

ಹೀಗಾಗಿ ಇಂದಿನ ಪಂದ್ಯ ಗೆದ್ದವರ ಮತ್ತು ಸೋತವರ ನಡುವಿನ ಕಾಳಗವಾಗಲಿದೆ. ವಿಶ್ವಕಪ್ ಇತಿಹಾಸವನ್ನು ನೋಡಿದ್ರೆ ಪಾಕ್ ಮತ್ತು ಇಂಗ್ಲೆಂಡ್​ ಸಮಬಲದ ಹೋರಾಟವನ್ನು ನಡೆಸಿವೆ. ಇದುವರೆಗೆ  ಒಟ್ಟು 9 ಬಾರಿ ಮುಖಾಮುಖಿಯಾಗಿರುವ ಈ ಎರಡು ತಂಡಗಳು ತಲಾ 4 ಪಂದ್ಯಗಳಲ್ಲಿ ಗೆದ್ದಿವೆ. ಒಂದು ಪಂದ್ಯ ಮಾತ್ರ ಫಲಿತಾಂಶ ಬಂದಿಲ್ಲ.

ಪಾಕಿಸ್ತಾನ 1992ರಲ್ಲಿ  ವಿಶ್ವಕಪ್ ಗೆದ್ದಿತ್ತು. 1999ರಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇಂಗ್ಲೆಂಡ್​​ 1979, 1987 ಮತ್ತು 1992ರಲ್ಲಿ ರನ್ನರ್ ಅಪ್ ಆಗಿದ್ದು ಬಿಟ್ಟರೆ ಇದುವರೆಗೆ ಚಾಂಪಿಯನ್ ಆಗಿಲ್ಲ.

ಇಂದಿನ ಪಂದ್ಯದ ಬಲಾಬಲ ನೋಡೋದಾದ್ರೆ,  ಇಂಗ್ಲೆಂಡ್​ ಪಾಕ್​ ಗಿಂತ ತುಂಬಾನೇ ಸ್ಟ್ರಾಂಗ್ ಇದೆ.  ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ ಜಾಸನ್ ರಾಯ್, ಜಾಯ್ ರೂಟ್, ನಾಯ ಇಯಾನ್ ಮಾರ್ಗನ್, ಆಲ್​ ರೌಂಡಿಂಗ್ ಪರ್ಫಾರ್ಮೆನ್ಸ್ ನೀಡಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾಗಿದ್ದ ಬೆನ್​ಸ್ಟ್ರೋಕ್ ಈ ಪಂದ್ಯದಲ್ಲೂ ಆರ್ಭಟಿಸೋ ನಿರೀಕ್ಷೆ ಇದೆ.  ಜಾನಿ ಬೈರ್​ಸ್ಟೋ, ಬಟ್ಲರ್ ಫಾರ್ಮ್​ ಗೆ ಮರಳೋ ನಿರೀಕ್ಷೆ ಇದೆ. ಬೌಲಿಂಗ್ ನಲ್ಲಿ ಜೋಫರ್ ಆರ್ಚರ್​, ಅದಿಲ್ ರಶೀದ್. ಲ್ಯಾಮ್ ಪ್ಲಂಕೆಟ್ ಮೊಯಿನ್ ಅಲಿ ಬಲವಿದೆ. ಜೊತೆಗೆ ಮೊದಲೇ ಹೇಳಿರುವಂತೆ ಬೆನ್ ಸ್ಟ್ರೋಕ್ ಬೌಲಿಂಗ್​ ನಲ್ಲೂ ಮಿಂಚಿದ್ದಾರೆ.

ಆದರೆ, ಗಾಯಗೊಂಡಿರುವ ಪಾಕಿಸ್ತಾನವನ್ನು ಇಂಗ್ಲೆಂಡ್ ಸುಲಭದಲ್ಲಿ ಪರಿಗಣಿಸುವಂತಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ಓಪನರ್ ಗಳಾದ ಇಮಾಮ್ ಉಲ್​ ಹಕ್, ಫಕರ್ ಜಮಾನ್​ ಕ್ಲಿಕ್ ಆದ್ರೆ ಇಂಗ್ಲೆಂಡ್ ಬೌಲರ್ ಗಳಿಗೆ ಸಿಂಹ ಸ್ವಪ್ನವಾಗಿ ಕಾಡಲಿದ್ದಾರೆ. ಅಷ್ಟೇ ಅಲ್ಲದೆ ಬಾಬರ್ ಅಜಾಮ್, ಹ್ಯಾರಿಸ್​ ಸೊಹೈಲ್ ನೆಲಕಚ್ಚಿ ಆಡಿದ್ರೆ ರನ್ ಮಳೆ ಸುರಿಯೋದಂತು ಗ್ಯಾರೆಂಟಿ. ಮೊಹಮ್ಮದ್ ಅಮಿರ್, ವಹಾಬ್ ರಿಯಾಜ್, ಹಸನ್ ಅಲಿ ಮೇಲೆ ನಿರೀಕ್ಷೆ ಇದ್ದು, ಒಟ್ನಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ  ಟ್ರೆಂಟ್​ ಬ್ರಿಡ್ಜ್​ ಸ್ಟೇಡಿಯಂ ಸಾಕ್ಷಿಯಾಗಲಿದೆ.

LEAVE A REPLY

Please enter your comment!
Please enter your name here