Home ಕ್ರೀಡೆ P.Cricket 'ವಿನ್​'ಡೀಸ್​ ಆಟಕ್ಕೆ ಪಾಕ್ ಉಡೀಸ್​..!

‘ವಿನ್​’ಡೀಸ್​ ಆಟಕ್ಕೆ ಪಾಕ್ ಉಡೀಸ್​..!

ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್​​ ವಿರುದ್ಧ ಅಬ್ಬರಿಸಿದ ವಿಶ್ವಾಸದಲ್ಲೇ ಕಣಕ್ಕಿಳಿದಿದ್ದ ವೆಸ್ಟ್​​​ಇಂಡೀಸ್​ ವಿಶ್ವಕಪ್​ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಲಿಷ್ಠ ಬೌಲಿಂಗ್​ ಪ್ರದರ್ಶನ ನೀಡಿದ ಕೆರಿಬಿಯನ್​ ಬಳಗ ದಿಗ್ವಿಜಯ ಸಾಧಿಸಿತು.
ಮಹತ್ವದ ವಿಶ್ವಕಪ್​ ಟೂರ್ನಿಯಲ್ಲಿ ವೆಸ್ಟ್​​ಇಂಡೀಸ್​​ ಬಳಗ ಶುಭಾರಂಭ ಮಾಡಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾರಕ ಬೌಲಿಂಗ್​ ಪ್ರದರ್ಶನ ನೀಡಿದ ಕೆರಿಬಿಯನ​ ಬಳಗ 7 ವಿಕೆಟ್​​ಗಳ ಸುಲಭ ಜಯ ಸಾಧಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಪಾಕಿಸ್ತಾನ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಕೆರಿಬಿಯನ್ ಬೌಲರ್​​ಗಳು ಸಂಘಟಿತ ಪ್ರದರ್ಶನ ನೀಡಿದ್ರು. ವಿಂಡೀಸ್​​ ವೇಗಿಗಳ ಮಾರಕ ದಾಳಿಗೆ ಎದುರಾಳಿ ಪಾಕ್​ ಬ್ಯಾಟ್ಸ್​​ಮನ್​ಗಳು ಮಂಡಿಯೂರಿದ್ರು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕ್​​ 3ನೇ ಓವರ್​​ನಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ಫಖರ್ ಜಮಾನ್ ಹಾಗೂ ಬಾಬರ್ ಅಜಮ್​ ವಿಂಡೀಸ್ ವೇಗಿಗಳಿಗೆ ಅಲ್ಪ ಪ್ರತಿರೋಧ ಒಡ್ಡಿದರು. ಆದ್ರೆ ಇವರಿಬ್ಬರ ವಿಕೆಟ್ ಬೀಳುತ್ತಿದ್ದಂತೆ ಪಾಕ್​ ಪಡೆಯ ಪೆವಿಲಿಯನ್​ ಪರೇಡ್​​ ಆರಂಭವಾಯ್ತು.
ಒಂದು ಹಂತದಲ್ಲಿ 83 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು 100 ರನ್​ಗಳ ಗಡಿ ದಾಟುವುದೂ ಪಾಕ್​ ಪಡೆಗೆ ಕಷ್ಟವಾಗಿತ್ತು. ಕೊನೆಯಲ್ಲಿ ವಹಾಬ್ ರಿಯಾಜ್ 1 ಬೌಂಡರಿ ಹಾಗೂ 2 ಸಿಕ್ಸರ್ ಜೊತೆಗೆ 18 ರನ್ ಸಿಡಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿ ಮಾನ ಉಳಿಸಿದ್ರು.
ಸರ್ಫರಾಜ್​ ಅಹಮದ್​​ ಬಳಗ 105 ರನ್​ಗಳಿಗೆ ಆಲೌಟ್​​​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್​ಗೆ ಗುರಿಯಾಯ್ತು. ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಪಾಕ್ ಪ್ರದರ್ಶನ ಕಂಡು ಸ್ಪಿಚ್​​ ಲೆಸ್​​ ಎಂದು ಟ್ವೀಟ್​​ ಮಾಡಿದ್ರೆ, ಕೆಲವರು ಪಾಪ ಪಾಕಿಸ್ತಾನ ಎಂದು ಕಾಲೆಳೆದಿದ್ದಾರೆ.
ಪಾಕ್​ ನೀಡಿದ 106 ರನ್​ಗಳ ಗುರಿ ಬೆನ್ನತ್ತಿದ್ದ ಹೋಲ್ಡರ್​ ಬಳಗ ಉತ್ತಮ ಆರಂಭ ಪಡೆದುಕೊಳ್ತು. ಮೊದಲ ವಿಕೆಟ್​ಗೆ ಕ್ರಿಸ್​ ಗೇಲ್​, ಶಾಯ್​ ಹೋಪ್​ ಜೋಡಿ 36 ರನ್​ ಕಲೆ ಹಾಕಿದ್ರು. ಇದರ ಬೆನ್ನಲ್ಲೇ ಹೋಪ್​ ಮೊಹಮದ್​​ ಅಮೀರ್​ಗೆ ವಿಕೆಟ್​​ ಒಪ್ಪಿಸಿದ್ರು. ಹೋಪ್​ ಬೆನ್ನಲ್ಲೇ ಕಣಕ್ಕಿಳಿದ ಬ್ರಾವೋ ಸೊನ್ನೆ ಸುತ್ತಿದ್ರು.
ಆದ್ರೆ ಅಬ್ಬರದ ಪ್ರದರ್ಶನ ನೀಡಿದ ಕ್ರಿಸ್​​​ಗೇಲ್​ ಅರ್ಧಶತಕ ಸಿಡಿಸಿ ಮಿಂಚಿದ್ರು. 34 ಎಸತಗಳಲ್ಲಿ 6 ಬೌಂಡರಿ 3 ಸಿಕ್ಸರ್​​ ಸಿಡಿಸಿ ಅಬ್ಬರಿಸಿದ್ರು. ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಮೊಹಮದ್​​ ಅಮೀರ್​ಗೆ ವಿಕೆಟ್​​ ಒಪ್ಪಿಸಿದ್ರು.
ಅಂತಿಮವಾಗಿ ನಿಕೋಲಸ್​​​ ಪೋರನ್​, ಶಿಮ್ರೋನ್​ ಹೆಟ್ಮೆಯರ್​​ ತಂಡವನ್ನ ಗೆಲುವಿನ ದಡ ಮುಟ್ಟಿಸಿದ್ರು. 3 ಕಳೆದುಕೊಂಡು ಗುರಿ ತಲುಪಿದ ವಿಂಡೀಸ್​​ ಟ್ರೆಂಟ್​​ ಬ್ರಿಡ್ಜ್​ ಅಂಗಳದಲ್ಲಿ 7 ವಿಕೆಟ್​ಗಳ ಗೆಲುವಿನ ಕೇಕೆ ಹಾಕಿತು. 4 ವಿಕೆಟ್​​ ಕಬಳಿಸಿದ ಓಶಾನೆ ಥಾಮಸ್ ಹಾಗೂ 3 ವಿಕೆಟ್​ ಕಿತ್ತ ನಾಯಕ ಜೇಸನ್ ಹೋಲ್ಡರ್ ಗೆಲುವಿನ ರೂವಾರಿಗಳಾದ್ರು.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments