ವಿಂಡೀಸ್​ ಮೇಲೆ ಬಾಂಗ್ಲಾ ಹುಲಿಗಳ ಸವಾರಿ

0
83

ವಿಶ್ವಸಮರದಲ್ಲಿ ಬಲಿಷ್ಠ ತಂಡಗಳಿಗೆ ಶಾಕ್ ನೀಡುತ್ತಿರುವ ಬಾಂಗ್ಲಾ ಹುಲಿಗಳು, ನಿನ್ನೆ ಕ್ರಿಕೆಟ್​ ದೈತ್ಯರಿಗೆ ಮುಟ್ಟಿನೋಡಿಕೊಳ್ಳುವ ಏಟು ಕೊಟ್ಟಿದ್ದಾರೆ. ವೆಸ್ಟ್​ಇಂಡೀಸ್​ ನೀಡಿದ 322ರನ್​​​​​​​ಗಳ ಬೃಹತ್​​​​​ ಗುರಿಯನ್ನು ಕೇವಲ 41.3ಓವರ್​​ಗಳಲ್ಲಿ ಚೇಸ್​ ಮಾಡಿ ಬಾಂಗ್ಲಾದೇಶ ಗೆಲುವಿನ ಕೇಕೆ ಹಾಕಿದೆ.
 ಕೌಂಟಿ ಅಂಗಳದಲ್ಲಿ ಟಾಸ್‌ ಸೋತು ಬ್ಯಾಟಿಂಗಿಳಿದ ವೆಸ್ಟ್​​ಇಂಡೀಸ್​​ ಆರಂಭದಲ್ಲೇ ಆಘಾತ ಎದುರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಕ್ರಿಸ್​ಗೇಲ್​ ಡಕೌಟ್​​ ಆದ್ರು. ಆದ್ರೆ ಆರಂಭಿಕ ಆಘಾತ ಎದುರಿಸಿದ ತಂಡಕ್ಕೆ ಎವಿನ್​ ಲೂಯಿಸ್​, ಶಾಯ್​ ಹೋಪ್​ ಚೇತರಿಕೆ ನೀಡಿದ್ರು.
 2ನೇ ವಿಕೆಟ್​ಗೆ ಜೊತೆಯಾದ ಎವಿನ್​ ಲೂಯಿಸ್​​, ಶಾಯ್​ ಹೋಪ್​ 116 ರನ್​ ಕಲೆಹಾಕಿದ್ರು. ರಕ್ಷಣಾತ್ಮಕ ಬ್ಯಾಟಿಂಗ್​ ನಡೆಸಿದ ಎವಿನ್​ ಲೂಯಿಸ್​, 70 ರನ್​ಗಳಿಸಿ ಔಟಾದ್ರು. ಬಳಿಕ ಕಣಕ್ಕಿಳಿದ ನಿಕೂಲಸ್​ ಪೂರನ್​ ಹೆಚ್ಚು ಹೊತ್ತು ನಿಲ್ಲಲಿಲ್ಲ. 25 ರನ್​ ಗಳಿಸಿ ನಿರ್ಗಮಿಸಿದ್ರು.
 ಬಳಿಕ 4ನೇ ವಿಕೆಟ್​​ಗೆ ಜೊತೆಯಾದ ಶಾಯ್​ ಹೋಪ್​ ಹಾಗೂ ಶಿಮ್ರೋನ್​ ಹೆಟ್ಮೆಯರ್​​ 83 ರನ್​ಗಳ ಜೊತೆಯಾಟವಾಡಿದ್ರು. ಅಕ್ಷರಶಃ ಗುಡುಗಿದ ಈ ಇಬ್ಬರೂ ವಿಂಡೀಸ್​ ದೊಡ್ಡ ಮೊತ್ತ ಕಲೆ ಹಾಕಲು ನೆರವಾದ್ರು. ಹೆಟ್ಮೆಯರ್​ ಅರ್ಧಶತಕ ಸಿಡಿಸಿ ಔಟಾದ್ರು. ಬಳಿಕ ಕಣಕ್ಕಿಳಿದ ಶಿಮ್ರೋನ್​ ಹೆಟ್ಮೆಯರ್​ ಡಕೌಟ್​​ ಆದ್ರು.
ಅಂತಿಮ ಹಂತದಲ್ಲಿ ಜೇಸನ್​ ಹೋಲ್ಡರ್​ 33, ಡಾರೆನ್​ ಬ್ರಾವೋ 19 ರನ್​ಗಳಿಸಿದ್ರು. ನಿಗಧಿತ 50 ಓವರ್​ಗಳಲ್ಲಿ ವಿಂಡೀಸ್​​ 8 ವಿಕೆಟ್​ ನಷ್ಟಕ್ಕೆ 321 ರನ್​ಗಳಿಸಿತು. 
321ರನ್​ಗಳ ದೊಡ್ಡ ಗುರಿ ಬೆನ್ನತ್ತಿದ ಬಾಂಗ್ಲಾ ಪಡೆಗೆ ತಮೀಮ್​ ಇಕ್ಬಾಲ್​,ಸೌಮ್ಯಾ ಸರ್ಕಾರ್​ ಉತ್ತಮ ಆರಂಭವದಗಿಸಿದ್ರು. ಮೊದಲ ವಿಕೆಟ್​ಗೆ 52 ರನ್​ಗಳು ಹರಿದು ಬಂದ್ವು. ಉತ್ತಮವಾಗಿ ಬ್ಯಾಟ್​ ಬೀಸ್ತಾ ಇದ್ದ ಸೌಮ್ಯಾ ಸರ್ಕಾರ್​ 29 ರನ್​ಗಳಿಸಿ ನಿರ್ಗಮಿಸಿದ್ರು.
ಉತ್ತಮ ಬ್ಯಾಟಿಂಗ್​ ನಡೆಸಿದ ತಮೀಮ್​ ಇಕ್ಬಾಲ್​ 48 ರನ್​ಗಳಿಸಿ ಶೆಲ್ಢನ್​ ಕಾರ್ಟಲ್​ರ ಸೂಪರ್ಬ್​ ರನೌಟ್​ಗೆ ಬಲಿಯಾದ್ರು.
ತಮೀಮ್​ ಬೆನ್ನಲ್ಲೇ ಮುಷ್ಪೀಕರ್​ ರಹೀಮ್​ 1 ರನ್​ಗಳಿಗೆ ಔಟಾಗಿ ನಿರಾಸೆ ಮೂಡಿಸಿದ್ರು. ಆದ್ರೆ 4ನೇ ವಿಕೆಟ್​ಗೆ ಜೊತೆಯಾದ ಶಕೀಬ್​ ಆಲ್​​ ಹಸನ್, ಲಿಟನ್​ ದಾಸ್​ ವಿಂಡೀಸ್​​ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು.
ಲೀಲಾಜಾಲವಾಗಿ ಬ್ಯಾಟ್​​ ಬೀಸಿದ ಶಕೀಬ್​ ಆಲ್​ ಹಸಲ್​​ ಚೆಂಡಿಗೆ ಮೈದಾನದ ಅಷ್ಟ ದಿಕ್ಕುಗಳನ್ನ ಪರಿಚಯ ಮಾಡಿಕೊಟ್ರು. ಭರ್ಜರಿ ಶತಕ ಸಿಡಿಸಿ ಮಿಂಚಿದ ಶಕೀಬ್​ ಕೇವಲ 99 ಎಸೆತದಲ್ಲಿ 16 ಬೌಂಡರಿ ಮೂಲಕ 124ರನ್​​​ ಚಚ್ಚಿದ್ರು.
ಮತ್ತೊಂದೆಡೆ ಲಿಥಾನ್​ ದಾಸ್​ ಕೂಡ ಆರ್ಭಟಿಸಿದ್ರು. 69 ಎಸೆತದಲ್ಲಿ 4 ಸಿಕ್ಸರ್​ 8 ಬೌಂಡರಿ ಸಿಡಿಸಿದ ದಾಸ್​ 94 ರನ್​ ಗಳಿಸಿದ್ರು.ಅಂತಿಮ ಕೇವಲ 41.3ಓವರ್​ಗಳಲ್ಲಿ ಗುರಿಮುಟ್ಟಿದ ಬಾಂಗ್ಲಾದೇಶ ದಿಗ್ವಿಜಯ ಸಾಧಿಸಿತು. 
ಬಲಾಡ್ಯ ತಂಡ ಸೌತ್ ಆಫ್ರಿಕಾ ವಿರುದ್ಧ ಗೆದ್ದುಬೀಗಿದ ಬಾಂಗ್ಲಾ ಹುಲಿಗಳು ಇದೀಗ ಕ್ರಿಕೆಟ್​ ದೈತ್ಯರ ಮೇಲೆ ಸವಾರಿ ಮಾಡಿದ್ದಾರೆ.
ವಿಂಡೀಸ್​ ವಿರುದ್ಧ ಜಯಭೇರಿ ಬಾರಿಸುವ ಮೂಲಕ ಅಂಕಪಟ್ಟಿಯಲ್ಲಿ 5ಸ್ಥಾನಕ್ಕೆ ಜಿಗಿದಿದ್ದಾರೆ. ಈ ಮೂಲಕ ನಾವು ಯಾರಿಗೂ ಕಮ್ಮಿ ಇಲ್ಲ ಅನ್ನೋದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here