Sunday, June 26, 2022
Powertv Logo
Homeವಿದೇಶಶ್ರೀಲಂಕಾ- ವಿಂಡೀಸ್​ ನಡುವೆ ಪ್ರತಿಷ್ಠೆಯ ಕದನ

ಶ್ರೀಲಂಕಾ- ವಿಂಡೀಸ್​ ನಡುವೆ ಪ್ರತಿಷ್ಠೆಯ ಕದನ

ನೋಡು ನೋಡುತ್ತಿದ್ದಂತೆ ವಿಶ್ವಕಪ್ ಅಂತಿಮ ಘಟ್ಟದತ್ತ ತಲುಪುತ್ತಿದೆ. ಲೀಗ್ ಮ್ಯಾಚ್ಗಳು ಬಹುತೇಕ ಮುಗಿದಿವೆ. ಉಳಿದ ಮ್ಯಾಚ್ ಗಳ ಸೋಲು ಗೆಲುವುಗಳು ಸೆಮೀಸ್​​ಗೆ ದಾರಿಯ ನಿರ್ಣಾಯಕ ಮ್ಯಾಚ್​ಗಳು. ಇಂದಿನ ಮೆಗಾ ಫೈಟ್ ಕೂಡ ಅಂಥಾ ಒಂದು ನಿರ್ಣಾಯಕ ಪಂದ್ಯ..! ಒಂದೆಡೆ ಸೋಲಿನ ಗಾಯದ ಮೇಲೆ ಪಂದ್ಯ ರದ್ದಾಗಿರುವ ಬರೆಯ ಉರಿಯಿಂದಿರೋ ಶ್ರೀಲಂಕಾ… ಇನ್ನೊಂದೆಡೆ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ವೆಸ್ಟ್ ಇಂಡೀಸ್ ಇಂದು ಮುಖಾಮುಖಿಯಾಗಲಿವೆ.
ಹೌದು, ಇಂದು ಚೆಸ್ಟರ್ಲೆ ಸ್ಟ್ರೀಟ್​​​ನ ರಿವರ್ಸೈಡ್ ಗ್ರೌಂಡ್​​ನಲ್ಲಿ ನಡೆಯಲಿರುವ ವಿಶ್ವ ಸಮರದಲ್ಲಿ ಸಿಂಹಳೀಯರಿಗೆ ಕೆರಬಿಯನ್ನರು ಸವಾಲಾಗಿದ್ದಾರೆ. ಟೂರ್ನಿಯಲ್ಲಿ ಲಂಕಾ 2 ಪಂದ್ಯಗಳಲ್ಲಿ ಗೆದ್ದಿದ್ದು, 3ರಲ್ಲಿ ಸೋಲನುಭವಿಸಿದ್ದಾರೆ. ದುರಾದೃಷ್ಟವಶಾತ್ 2 ಮ್ಯಾಚ್ ಗಳು ರದ್ದಾಗಿರುವುದು ಲಂಕಾಗೆ ಮೈನಸ್.
ಇನ್ನು ವಿಂಡೀಸ್ 5 ಸೋಲು 1 ಮಾತ್ರ ಗೆಲುವನ್ನು ಕಂಡಿದ್ದು ಟೂರ್ನಿಯಿಂದ ಹೊರ ಹೋಗಿದೆ. ಆದರೆ, ಇಂದಿನ ಮ್ಯಾಚ್ ಅನ್ನು ಮರ್ಯಾದೆ ಉಳಿಸಿಕೊಳ್ಳಲಾದರೂ ಗೆಲ್ಲಲೇ ಬೇಕು ಎಂದು ಹಠಕ್ಕೆ ಬಿದ್ದಿದ್ದು, ತನ್ನೊಂದಿಗೆ ಲಂಕನ್ನರನ್ನು ಟೂರ್ನಿಯಿಂದ ವಾಪಸ್ ಕರೆಸಿಕೊಂಡು ಹೋಗುವ ಉತ್ಸಾಹದಲ್ಲಿದೆ.
ವಿಶ್ವಕಪ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ಲಂಕನ್ನರಿಗೆ ಸಿಂಹಸ್ವಪ್ನವಾಗಿ ಕಾಡಿದ್ದಾರೆ. ಒಟ್ಟು 6 ಮ್ಯಾಚ್​ಗಳಲ್ಲಿ 4ರಲ್ಲಿ ಕೆರಬಿಯನ್ನರೇ ಗೆದ್ದು ಬೀಗಿದ್ದಾರೆ. 2ರಲ್ಲಿ ಮಾತ್ರ ಲಂಕನ್ನರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಆದರೆ, ಈ ಇತಿಹಾಸದಿಂದಲೇ ಏನೂ ಹೇಳಲಾವಗದು. ಲಂಕನ್ನರು ಪ್ರಸಕ್ತ ಟೂರ್ನಿಯಲ್ಲಿ ಕಳಪೆ ಪ್ರದರ್ಶನವನ್ನೇ ಮುಂದುವರೆಸಿದ್ದಾರೆ. ಯಾವಬ್ಬ ಪ್ಲೇಯರ್ ಕೂಡ ಕನ್ಸಿಸ್ಟೆಂಟ್ ಪರ್ಫಾರ್ಮೆನ್ಸ್ ನೀಡುತ್ತಿಲ್ಲ. ಇದು ವಿಂಡೀಸ್​ಗೆ ದೊಡ್ಡ ತಲೆನೋವಾಗಿದೆ.
ಮತ್ತೊಂದು ಕಡೆ ಶ್ರೀಲಂಕಾ ಸೆಮಿಫೈನಲ್​ ಲೆಕ್ಕಚಾರದಲ್ಲಿದೆ. ನಿನ್ನೆ ಇಂಗ್ಲೆಂಡ್ ಗೆಲುವು ಸಾಧಿಸಿರೋದ್ರಿಂದ ಶ್ರೀಲಂಕಾ ಈಗಾಗಲೇ ಟೂರ್ನಿಯಿಂದ ಬಹುತೇಕವಾಗಿ ಹೊರಬಿದ್ದಿದೆ. ಆದ್ರೆ ಲಂಕಾಗೆ ಸಣ್ಣದೊಂದು ಆಸೆಯ ಕಿಡಿ ಇನ್ನೂ ಜೀವಂತವಾಗಿದೆ. ಆಡಿರುವ 7 ಪಂದ್ಯಗಳಲ್ಲಿ 6 ಅಂಕಪಡೆದುಕೊಂಡಿರುವ ಲಂಕಾಗೆ ಇನ್ನು 2 ಎರಡು ಪಂದ್ಯಗಳು ಬಾಕಿ ಉಳಿದಿದೆ. ಈ ಎರಡು ಪಂದ್ಯಗಳನ್ನು ಗೆದ್ರೆ ಶ್ರೀಲಂಕಾ 10 ಅಂಕ ಪಡೆಯಲಿದೆ. ಮತ್ತೊಂದು ಕಡೆ ಇಂಗ್ಲೆಂಡ್​ ಈಗಾಗಲೇ 10 ಅಂಕ ಪಡೆದುಕೊಂಡಿದೆ. ರನ್​ರೇಟ್​​ನಲ್ಲೂ ಆಂಗ್ಲರು ತುಂಬಾ ಮುಂದಿದ್ದಾರೆ. ಇಂಗ್ಲೆಂಡ್​ ಮುಂದಿನ ಪಂದ್ಯದಲ್ಲಿ ಸೋತು ಭಾರೀ ಅಂತರದಿಂದ ಸೋತು. ಶ್ರೀಲಂಕಾ ಭಾರೀ ಅಂತರದಿಂದ ಗೆದ್ರೆ ಸೆಮಿಫೈನಲ್​ ತಲುಪುವ ಸಣ್ಣದೊಂದು ಆಸೆ ಇದೆ. ಆದ್ರೆ ಅದು ಅಷ್ಟು ಸುಲಭದ ಮಾತಲ್ಲ.
ಶ್ರೀಲಂಕಾ ತಂಡಕ್ಕೆ ಸದ್ಯಕ್ಕೆ ಆಸರೆಯಾಗಿರೋದು ಅನುಭವಿ ವೇಗಿ ಲಸಿತ್​​ ಮಾಲಿಂಗ ಮಾತ್ರ. ಮತ್ತೊಂದು ಕಡೆ ನಾಯಕ ದಿಮುತ್​ ಕರುಣಾರತ್ನೆ ಮತ್ತೊಮ್ಮೆ ಸಿಡಿದೆಳಬೇಕಿದೆ. ಇನ್ನು ಲಂಕಾ ಸ್ಟಾರ್​ ಬೌಲರ್ ನುವಾನ್ ಪ್ರದೀಪ್​ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದು ಲಂಕಾ ಬೌಲಿಂಗ್ ಮೇಲೆ ಪರಿಣಾಮ ಬೀರಲಿದೆ.
ಇನ್ನು ವೆಸ್ಟ್​ ಇಂಡೀಸ್​ನಿಂದಲೂ ಈ ಬಾರಿಯ ವಿಶ್ವಸಮರದಲ್ಲಿ ನಿರೀಕ್ಷಿತ ಆಟ ಹೊರಬಿದ್ದಿಲ್ಲ. ಯಾವೊಬ್ಬ ಆಟಗಾರನು ಸ್ಥಿರತೆಯಿಂದ ಆಡಲೇ ಇಲ್ಲ. ಅದ್ರಲ್ಲೂ ಡೇಂಜರಸ್​ ಬಾಟ್ಸ್​ಮನ್ ರಸೇಲ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೊಡಿಬಡಿ ಆಟಗಾರರ ದಂಡನ್ನೇ ಹೊಂದಿರುವ ವೆಸ್ಟ್​ ಇಂಡೀಸ್ ಅದರ ಲಾಭವನ್ನು ಪಡೆಯಲು ವಿಫಲರಾಗಿದ್ದಾರೆ. ವೆಸ್ಟ್​ ಇಂಡೀಸ್​ ತಂಡದಿಂದ ಇಲ್ಲಿವರೆಗೂ ಉತ್ತಮ ಜೊತೆಯಾಟ ಹೊರಬಿದ್ದಿಲ್ಲ. ಇದು ಕ್ರಿಕೆಟ್​ ದೈತ್ಯರಿಗೆ ಮುಳುವಾಗಿದೆ.
ಟೂರ್ನಿಯಲ್ಲಿ ಇಂಗ್ಲೆಂಡ್​ಗೆ ಶಾಕ್ ಕೊಟ್ಟಿರುವ ಶ್ರೀಲಂಕಾ ಇಂದು ಕೆರೆಬಿಯನ್ನರನ್ನು ಕೆಡವಿ ಹಾಕುತ್ತಾ ಅಥವಾ ವೆಸ್ಟ್​ ಇಂಡೀಸ್​ ಲಂಕಾದ ಮೇಲೆ ಸವಾರಿ ಮಾಡುತ್ತ ಅನ್ನೋದನ್ನು ಕಾದು ನೋಡಬೇಕಿದೆ.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments