Home ಕ್ರೀಡೆ P.Cricket ರೋಹಿತ್, ರಾಹುಲ್ ಶತಕ ವೈಭವ ; ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ರೋಹಿತ್, ರಾಹುಲ್ ಶತಕ ವೈಭವ ; ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ವಿಶ್ವಕಪ್​ನಲ್ಲಿ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತನ್ನ ಕೊನೆಯ ಲೀಗ್ ಪಂದ್ಯದಲ್ಲೂ ಗೆದ್ದು ಬೀಗಿದೆ. ಉಪ ನಾಯಕ ರೋಹಿತ್ ಶರ್ಮಾ (103) ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಅವರ ಭರ್ಜರಿ ಶತಕದ ನೆರವಿನಿಂದ ವಿರಾಟ್​ ಪಡೆ ಲಂಕಾ ವಿರುದ್ಧ 7 ವಿಕೆಟ್​ ಗಳ ಜಯಭೇರಿ ಬಾರಿಸಿದೆ.
ಹೆಡಿಂಗ್ಲೆಯ ಲೀಡ್ಸ್​ನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿತು. ಏಂಜೆಲೋ ಮ್ಯಾಥ್ಯುಸ್ (113) ಶತಕ ಹಾಗೂ ಲುಹಿರು ತಿರುಮನೆ (53) ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್​​​ಗಳಲ್ಲಿ 7 ವಿಕೆಟ್ ಕಳ್ಕೊಂಡು 264ರನ್ ಮಾಡಿತು.
ಗುರಿ ಬೆನ್ನತ್ತಿದ್ದ ಭಾರತಕ್ಕೆ ರೋಹಿತ್ ಶರ್ಮಾ (103), ಕನ್ನಡಿಗ ಕೆ.ಎಲ್ ರಾಹುಲ್ (111) ಉತ್ತಮ ಆರಂಭ ಒದಗಿಸಿದ್ರು. ಈ ಆರಂಭಿಕ ಜೋಡಿ 189ರನ್​ಗಳ ಜೊತೆಯಾಟವಾಡಿತು. ವಿಕೆಟ್​ ನಷ್ಟವಿಲ್ಲದೇ ಗೆಲುವಿನ ದಡ ಸೇರಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಈ ಜೋಡಿಯನ್ನು ರಜಿತ ಬೇರ್ಪಡಿಸಿದ್ರು. 103ರನ್​ಗಳಿಸಿ ಆಡುತ್ತಿದ್ದ ರೋಹಿತ್ ರಜಿತ ಬೌಲಿಂಗ್​ನಲ್ಲಿ ಮ್ಯಾಥ್ಯುಸ್​ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ರು. ರಾಹುಲ್ ಜೊತೆಯಾದವರು ನಾಯಕ ಕೊಹ್ಲಿ. ಈ ಜೋಡಿ 55 ರನ್​ ಗಳ ಜೊತೆಯಾಟವಾಡಿತು. ತಂಡದ ಮೊತ್ತ 244ರನ್ ಆಗಿದ್ದಾಗ ರಾಹುಲ್ ಮಲಿಂಗಾಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ರಿಷಭ್ ಪಂತ್ 4ರನ್​ಗಳನ್ನಷ್ಟೇ ಮಾಡಿ ಪೆವಿಲಿಯನ್ ಸೇರಿದ್ರು. ನಾಯಕ ಕೊಹ್ಲಿ (ಅಜೇಯ 34) ಹಾಗೂ ಹಾರ್ದಿಕ್ ಪಾಂಡ್ಯ (ಅಜೇಯ 7) ಗೆಲುವಿನ ದಡ ಸೇರಿಸಿದ್ರು.

ವರ್ಲ್ಡ್​​ಕಪ್ ಇತಿಹಾಸದಲ್ಲೇ ಯಾರೂ ಮಾಡದ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ..!

ವರ್ಲ್ಡ್​​ಕಪ್​​ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಚೊಚ್ಚಲ ಶತಕ..!

LEAVE A REPLY

Please enter your comment!
Please enter your name here

- Advertisment -

Most Popular

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

ಚೆನ್ನೈ ವಿರುದ್ಧ ಹಸಿರು ಜೆರ್ಸಿಯಲ್ಲಿ ಆರ್​ ಸಿ ಬಿ ಕಣಕ್ಕೆ..! ಕಾರಣ ಏನ್ ಗೊತ್ತಾ?

  ದುಬೈ :  13 ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಳೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಲಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ...

Recent Comments