Home ಕ್ರೀಡೆ P.Cricket  ಡಬಲ್​ ಧಮಾಕಾ :  ಫಸ್ಟ್​​ ಫೈಟ್​​ನಲ್ಲಿ ಭಾರತಕ್ಕೆ ಲಂಕಾ ಸವಾಲು

 ಡಬಲ್​ ಧಮಾಕಾ :  ಫಸ್ಟ್​​ ಫೈಟ್​​ನಲ್ಲಿ ಭಾರತಕ್ಕೆ ಲಂಕಾ ಸವಾಲು

ವಿಶ್ವಸಮರದಲ್ಲಿಂದು ಡಬಲ್​ ಧಮಾಕಾ. ವೀಕೆಂಡ್​​​​ ವಾರ್​ನಲ್ಲಿ ಭಾರತ-ಶ್ರೀಲಂಕಾ ಮೊದಲ ಪಂದ್ಯದಲ್ಲಿ ಸೆಣೆಸಿದ್ರೆ, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ-ಸೌತ್​ಆಫ್ರಿಕಾ ಕಾದಾಡಲಿವೆ. ಈ ಎರಡು ಪಂದ್ಯಗಳೊಂದಿಗೆ ವಿಶ್ವಸಮರದ ಲೀಗ್​ ಹೋರಾಟಗಳಿಗೆ ತೆರೆ ಬೀಳಲಿದೆ.
 ಟೂರ್ನಿಯಲ್ಲಿ ಈಗಾಗಲೇ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿರುವ ಟೀಮ್​ಇಂಡಿಯಾ, ಶ್ರೀಲಂಕಾ ಎದುರು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ. ಅತ್ತ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿರುವ ಶ್ರೀಲಂಕಾ ಕೊನೆಯ ಪಂದ್ಯದಲ್ಲಿ ಗೆದ್ದು ಟೂರ್ನಿಗೆ ಗುಡ್​ ಬೈ ಹೇಳಲು ತಯಾರಿ ನಡೆಸಿದೆ.
ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಟೀಮ್ಇಂಡಿಯಾ ಬಾಂಗ್ಲಾದೇಶ ತಂಡವನ್ನ 28 ರನ್​ಗಳಿಂದ ಮಣಿಸಿತ್ತು. ಆದ್ರೆ ಉತ್ತಮ ಆರಂಭ ಪಡೆದಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದ ವೈಫಲ್ಯ ಮುಳುವಾಗಿತ್ತು. ಭಾರತದ ಮಧ್ಯಮ ಕ್ರಮಾಂಕ ಸರಿಪಡಿಸಿಕೊಳ್ಳಲು ಸೆಮಿಫೈನಲ್​ ಪಂದ್ಯಕ್ಕೂ ಮುನ್ನ ಕೊಹ್ಲಿ ಪಡೆಗೆ ಇಂದಿನ ಪಂದ್ಯದಲ್ಲಿ ಅವಕಾಶವಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಕ್ಯಾಪ್ಟನ್​ ಕೊಹ್ಲಿ ಪ್ಲೇಯಿಂಗ್​ ಇಲೆವೆನ್​​​ನಲ್ಲಿ ಬದಲಾವಣೆ ಮಾಡೋ ಸಾಧ್ಯತೆ ಹೆಚ್ಚಿದೆ.
ವಿಜಯ್​ಶಂಕರ್​ರಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾದ ಕನ್ನಡಿಗ ಮಯಾಂಕ್​ ಅಗರ್​ವಾಲ್​ ಈಗಾಗಲೇ ತಂಡ ಸೇರಿಕೊಂಡಿದ್ದಾರೆ. ಆರಮಭಿಕ ಆಟಗಾರನಾಗಿ ಉತ್ತಮ ಇನ್ನಿಂಗ್ಸ್​ ಕಟ್ಟೋ ಸಾಮರ್ಥ್ಯ ಹೊಂದಿರುವ ಮಯಾಂಕ್​ ನಾಳಿನ ಪಂದ್ಯದಲ್ಲಿ ಕಣಕ್ಕಿಳಿತಾರಾ ಅನ್ನೋದು ಕುತೂಹಲ ಮೂಡಿಸಿದೆ. ಒಂದು ವೇಳೆ ಮಯಾಂಕ್​ ಕಣಕ್ಕಿಳಿದರೆ ಕೆ ಎಲ್​ ರಾಹುಲ್​ರನ್ನ 4ನೇ ಕ್ರಮಾಂಕದಲ್ಲಿ ಆಡಿಸಿ ಮಧ್ಯಮ ಕ್ರಮಾಂಕವನ್ನ ಬಲ ಪಡಿಸುವ ಪ್ರಯೋಗವನ್ನ ವಿರಾಟ್​​ ಕೊಹ್ಲಿ ಮಾಡೋ ಸಾಧ್ಯತೆ ಇದೆ.
ಅತ್ತ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿರುವ ಶ್ರೀಲಂಕಾ ತಂಡ ಗೆಲುವಿನೊಂದಿಗೆ ಅಭಿಯಾನಕ್ಕೆ ಗುಡ್​ ಬೈ ಹೇಳಲು ಸಜ್ಜಾಗಿದೆ. ವಿಶ್ವಕಪ್​ ಇತಿಹಾಸದಲ್ಲಿ ಭಾರತದ ವಿರುದ್ಧ ಲಂಕಾ ಬಳಗದ್ದೇ ಮೇಲುಗೈ. ಆಡಿರುವ 8 ಪಂದ್ಯಗಳಲ್ಲಿ 4ರಲ್ಲಿ ಸಿಂಹಳೀಯ ಪಡೆ ಗೆಲುವು ಸಾಧಿಸಿದ್ರೆ, ಭಾರತ 3 ಪಂದ್ಯಗಳಲ್ಲಿ ಜಯ ಕಂಡಿದೆ. ಇನ್ನೊಂದು ಪಂದ್ಯ ಟೈನಲ್ಲಿ ಅಂತ್ಯವಾಗಿದೆ. ಆದ್ರೆ ಏಕದಿನ ಮಾದರಿಯಲ್ಲಿ ಲಂಕಾ ವಿರುದ್ಧ ಭಾರತದ್ದೇ ಮೇಲುಗೈ.
 ಭಾರತ-ಶ್ರೀಲಂಕಾ ಏಕದಿನದಲ್ಲಿ 158 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ 90 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿದ್ರೆ, 56 ಪಂದ್ಯಗಳಲ್ಲಿ ಶ್ರೀಲಂಕಾ ಜಯ ಕಂಡಿದೆ. ಇನ್ನುಳಿದ 11 ಪಂದ್ಯಗಳು ರದ್ದಾಗಿದ್ರೆ, 1 ಪಂದ್ಯ ಟೈನಲ್ಲಿ ಅಂತ್ಯವಾಗಿದೆ.

2ನೇ ಪಂದ್ಯದಲ್ಲಿ ಸೌತ್​ಆಫ್ರಿಕಾ,ಆಸಿಸ್​ ಮುಖಾಮುಖಿ – ಗೆದ್ದು ಗುಡ್​ ಬೈ ಹೇಳುತ್ತಾ ‘ಸೋತಾ’ಆಫ್ರಿಕಾ?

ಮೊದಲ ಪಂದ್ಯದಲ್ಲಿ ಭಾರತ-ಲಂಕಾ ಸೆಣೆಸಿದ್ರೆ, 2ನೇ ಪಂದ್ಯದಲ್ಲಿ ಸೌತ್​ಆಫ್ರಿಕಾ, ಆಸ್ಟ್ರೇಲಿಯಾ ಕಾದಾಡಲಿವೆ. ಟೂರ್ನಿ ಆರಂಭಕ್ಕೂ ಪ್ರಶಸ್ತಿ ರೇಸ್​​ನಲ್ಲಿದ್ದ ಸೌತ್​ ಆಫ್ರಿಕಾ ಟೂರ್ನಿಯಿಂದ ಹೊರ ಬಿದ್ದಿದೆ. ಕಳೆದ ಪಂದ್ಯದಲ್ಲಿ 9 ವಿಕೆಟ್​ಗಳ ಗೆಲುವು ದಾಖಲಿಸಿರುವ ಡು ಪ್ಲೇಸಿಸ್​ ಪಡೆ ಅಂತಿಮ ಪಂದ್ಯದಲ್ಲೂ ಗೆದ್ದು ಟೂರ್ನಿಗೆ ಗುಡ್​ ಬೈ ಹೇಳುವ ಲೆಕ್ಕಾಚಾರದಲ್ಲಿದೆ.
ಅತ್ತ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಪೈನಲ್​ ಪ್ರವೇಶಿಸಿರುವ ಆಸ್ಟ್ರೇಲಿಯಾ, ಇಂದಿನ ಪಂದ್ಯದಲ್ಲೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಬ್ಯಾಟಿಂಗ್​,ಬೌಲಿಂಗ್​ ಎರಡೂ ವಿಭಾಗಗಳಲ್ಲಿ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ ಹರಿಣಗಳ ಮೇಲೆ ಸವಾರಿ ಮಾಡಲು ಸಜ್ಜಾಗಿದೆ.
ಒಟ್ಟಿನಲ್ಲಿ ಇಂದಿನ ಎರಡು ಪಂದ್ಯಗಳ ಫಲಿತಾಂಶ ಸೆಮಿಫೈನಲ್​ನಲ್ಲಿ ಯಾರಿಗೆ ಯಾರು ಎದುರಾಳಿ, ಅನ್ನೋದನ್ನ ನಿರ್ಧರಿಸಲಿದೆ. ಹೀಗಾಗಿ ವಿಕೇಂಡ್​ ವಾರ್​​ ಕ್ರಿಕೆಟ್​ ಅಭಿಮಾನಿಗಳ ಕುತೂಹಲವನ್ನ ಹೆಚ್ಚಿಸಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments