ಆಸೀಸ್​ಗೆ ಲಂಕಾ ಸವಾಲು ; ‘ಸೋತಾ’ಫ್ರಿಕಾಕ್ಕೆ ಅಫ್ಘನ್​​​​​​​​​ ನೀಡುತ್ತಾ ಶಾಕ್?

0
137

ಇಂದು ಕ್ರಿಕೆಟ್ ಪ್ರಿಯರಿಗೆ ಡಬಲ್ ಧಮಾಕಾ. ವಿಕೆಂಡ್​​ ಫೈಟ್​​ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಸೆಣೆಸಿದರೆ, 2ನೇ ಮ್ಯಾಚ್​ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಪ್ಘಾನಿಸ್ತಾನ್ ಮುಖಾಮುಖಿ ಆಗಲಿವೆ.
ಆಡಿದ 4 ಪಂದ್ಯಗಳಲ್ಲಿ 1 ಗೆಲುವು, 1 ಸೋಲು… 2 ಪಂದ್ಯ ರದ್ದು…ಇದು ಟೂರ್ನಿಯಲ್ಲಿ ಲಂಕಾ ಪರಿಸ್ಥಿತಿ. ಇನ್ನು ಆಡಿದ 4 ಪಂದ್ಯದಲ್ಲಿ 3 ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರೋ ಆಸ್ಟ್ರೇಲಿಯಾ. ಗೆಲ್ಲಲ್ಲೇಬೇಕಾದ ಒತ್ತಡದಲ್ಲಿರುವ ಶ್ರೀಲಂಕಾ, ಪ್ರಬಲ ಆಸೀಸ್​​ ವಿರುದ್ಧ ಇಂದಿನ ಮೊದಲ ಪಂದ್ಯದಲ್ಲಿ ಸೆಣೆಸಲಿದೆ.
 ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಮಾಜಿ ಚಾಂಪಿಯನ್ ಶ್ರೀಲಂಕಾ ನಡುವಿನ ಹೋರಾಟಕ್ಕೆ ಕಿಂಗ್​ಸ್ಟನ್ ಮೈದಾನ ಸಾಕ್ಷಿಯಾಗಲಿದೆ. ಟೂರ್ನಿಯ ಮೊದಲೆರಡು ಪಂದ್ಯದಲ್ಲಿ ಅಫ್ಘಾನಿಸ್ತಾನ್, ವೆಸ್ಟ್​​ಇಂಡೀಸ್​​ ವಿರುದ್ಧ ಜಯ ದಾಖಲಿಸಿದ್ದ ಆಸಿಸ್​​ ಭಾರತದ ವಿರುದ್ಧ 3ನೇ ಮ್ಯಾಚ್​​ನಲ್ಲಿ ಮುಗ್ಗರಿಸಿತ್ತು. ಆದ್ರೆ 4ನೇ ಪಂದ್ಯದಲ್ಲಿ ಪಾಕ್​ ವಿರುದ್ಧ ಗೆಲುವಿನ ಹಳಿಗೆ ಕಮ್​ಬ್ಯಾಕ್​ ಮಾಡಿದೆ. ಇದೀಗ ಲಂಕಾ ವಿರುದ್ಧವೂ ಗೆಲುವಿನ ವಿಶ್ವಾಸದಲ್ಲಿದೆ.
 ಇನ್ನೊಂದೆಡೆ ಲಂಕಾ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದ್ದ ಲಂಕನ್ನರು, 2ನೇ ಮ್ಯಾಚ್​​ನಲ್ಲಿ ಅಫ್ಘನ್​ ವಿರುದ್ಧ ಜಯಿಸಿದ್ರು. ಆದ್ರೆ ನಂತರದ ಪಂದ್ಯಗಳು ಮಳೆಯಿಂದ ರದ್ದಾಗಿವೆ. ಹೀಗಾಗಿ 4ರಲ್ಲಿ ಒಂದೇ ಒಂದು ಪಂದ್ಯ ಗೆದ್ದಿರುವ ಲಂಕಾ ಪಡೆ ಆಸಿಸ್​​ ವಿರುದ್ಧ ಗೆಲುವನ್ನ ಎದುರು ನೋಡುತ್ತಿದೆ.
ವಿಶ್ವಕಪ್ ಇತಿಹಾಸದಲ್ಲಿ ಉಭಯ ತಂಡಗಳು 9 ಬಾರಿ ಮುಖಾಮುಖಿ ಆಗಿವೆ. ಅದರಲ್ಲೂ ಲಂಕಾ ವಿರುದ್ಧ ಆಸಿಸ್​​ ಮೇಲುಗೈ ಸಾಧಿಸಿದೆ. 9 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 7 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, ಶ್ರೀಲಂಕಾ 1 ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿದೆ.
ನಾಯಕ ಆ್ಯರನ್ ಫಿಂಚ್, ಡೇವಿಡ್ ವಾರ್ನರ್, ಸ್ಟೀವ್​ ಸ್ಮಿತ್ ರಂತಹ ಪ್ರಮುಖ ಬ್ಯಾಟ್ಸ್​ಮನ್​ಗಳು, ನಥಾನ್​ ಕೌಲ್ಟರ್​ನೈಲ್​, ಮಿಚೆಲ್​ ಸ್ಟಾರ್ಕ್​, ಪಾಟ್​ ಕಮಿನ್ಸ್​​ ರಂತಹ ಬೌಲಿಂಗ್​ ಅಸ್ತ್ರಗಳನ್ನ ಆಸಿಸ್​ ಬಳಗ ಹೊಂದಿದೆ. ಆದ್ರೆ ಲಂಕಾ ಪಡೆಯಲ್ಲಿ ನಾಯಕ ದಿಮುತ್ ಕರುಣರತ್ನೆ, ಕುಸಲ್ ಪೇರೆರಾ, ಲಸಿತ್​ ಮಲಿಂಗ ಹೊರತುಪಡಿಸಿದ್ರೆ ಉಳಿದ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಿಲ್ಲ.. ಹೀಗಾಗಿ ಪ್ರಬಲ ಆಸಿಸ್​ಗೆ, ಸಿಂಹಳೀಯರು ಸಾಟಿಯಾಗ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

‘ಸೋತಾ’ಫ್ರಿಕಾಕ್ಕೆ ಅಫ್ಘನ್​​​​​​​​​ ನೀಡುತ್ತಾ ಶಾಕ್?
 ಇಂದಿನ 2ನೇ ಪಂದ್ಯ ಸೋತವರ ಗೆಲುವಿನ ಹುಡುಕಾಟವಾಗಿದೆ. ಕಾರ್ಡಿಫ್​ನ ಸೋಫಿಯಾ ಗಾರ್ಡನ್ಸ್​​ ಮೈದಾನದಲ್ಲಿ ಸೌತ್​ ಆಫ್ರಿಕಾ – ಅಫ್ಘಾನಿಸ್ತಾನ ಸೆಣೆಸಲಿವೆ. ಟೂರ್ನಿಯಲ್ಲಿ ಗೆಲುವೇ ಕಾಣದ ಎರಡೂ ತಂಡಗಳು ಜಯದ ಹುಡುಕಾಟದಲ್ಲಿವೆ. ಏಕದಿನ ಕ್ರಿಕೆಟ್​​ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮುಖಾಮುಖಿ ಆಗುತ್ತಿರೋ ಉಭಯ ತಂಡಗಳಲ್ಲಿ ಗೆಲುವು ಯಾರಿಗೆ ಅನ್ನೋದು ಕುತೂಹಲ ಮೂಡಿಸಿದೆ.
ಸೌತ್​​ ಆಫ್ರಿಕಾ ಆಡಿದ ಎಲ್ಲಾ ಪಂದ್ಯಗಳಲ್ಲೂ ಸೋತಿದೆ ನಿಜ. ಆದರೆ ಪ್ರಬಲ ಬ್ಯಾಟಿಂಗ್​ ಹಾಗೂ ಬೌಲಿಂಗ್​ ದಂಡು ಡು ಪ್ಲೆಸಿಸ್​ ಬಳಗದಲ್ಲಿದೆ. ಇತ್ತ ಕ್ರಿಕೆಟ್​ ಶಿಶು ಅಫ್ಘನ್​ ರಶೀದ್​ ಖಾನ್​, ಮೊಹಮದ್​​ ನಬಿಯ ಸ್ಪಿನ್​ ತಂತ್ರವನ್ನೇ ಹೆಚ್ಚು ನಂಬಿದೆ. ​ವಿಶ್ವದ ಶ್ರೇಷ್ಠ ಆಟಗಾರರ ಪಡೆಯನ್ನೇ ಹೊಂದಿರುವ ಮಾತ್ರಕ್ಕೆ ಅಫ್ಘನ್​ ತಂಡವನ್ನ ಲಘುವಾಗಿ ಪರಿಗಣಿಸಿದ್ರೆ ಆಫ್ರಿಕಾಗೆ ಆಘಾತ ಕಟ್ಟಿಟ್ಟ ಬುತ್ತಿ. 

 ಒಟ್ಟಾರೆಯಾಗಿ ಕ್ರಿಕೆಟ್​ ಅಭಿಮಾನಿಗಳಿಗಿಂದು ಡಬಲ್​ ಧಮಾಕಾ.. 2 ಪಂದ್ಯಗಳಲ್ಲೂ ನಿರೀಕ್ಷಿತ ಫಲಿತಾಂಶ ಬರುತ್ತೆ ಅನ್ನೋ ಹಾಗಿಲ್ಲ… ಫೈಟ್​​ಬ್ಯಾಕ್​ ಶಕ್ತಿಯನ್ನ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಎರಡೂ ತಂಡಗಳು ಹೊಂದಿವೆ. ಹೀಗಾಗಿ ಆಸ್ಟ್ರೇಲಿಯಾ,ದಕ್ಷಿಣ ಆಫ್ರಿಕಾ ಕೊಂಚ ಎಡವಿದ್ರೂ ಪಂದ್ಯಗಳು ರೋಚಕ ಘಟ್ಟಕ್ಕೆ ತಿರುಗಲಿವೆ. ಆದರೆ ಇದಕ್ಕೆ ಮಳೆರಾಯ ಅನುವು ಮಾಡಿಕೊಡಬೇಕಷ್ಟೇ….

LEAVE A REPLY

Please enter your comment!
Please enter your name here