ವಿರಾಟ್​​ ಪಡೆಗೆ ಆಘಾತ; ವರ್ಲ್ಡ್​ಕಪ್​ನಿಂದ ಧವನ್ ಔಟ್?

0
102

ವರ್ಲ್ಡ್​​​ಕಪ್​ನಲ್ಲಿ ಶುಭಾರಂಭ ಮಾಡಿರುವ ವಿರಾಟ್​ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾಕ್ಕೆ ಆಘಾತ ಎದುರಾಗಿದೆ. ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟ್ಸ್​ಮನ್ ಶಿಖರ್ ಧವನ್ ಟೂರ್ನಿಯಿಂದ ಹೊರ ನಡೆಯುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ವಿರುದ್ಧ ಓವೆಲ್​ನಲ್ಲಿ ನಡೆದ ಮ್ಯಾಚ್​​ನಲ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದ ಶಿಖರ್ ಧವನ್, ಪಂದ್ಯದ ವೇಳೆ ಎಡಗೈ ಹೆಬ್ಬೆರಳಿಗೆ ಗಾಯಮಾಡಿಕೊಂಡಿದ್ರು. ಗಾಯದ ಸಮಸ್ಯೆ ಹೆಚ್ಚಾಗಿದ್ದು ನ್ಯೂಜಿಲೆಂಡ್​ ವಿರುದ್ಧ ಜೂನ್​ 13ರಂದು ನಡೆಯಲಿರುವ ಮ್ಯಾಚ್​​ನಿಂದ ಧವನ್ ಹೊರಗುಳಿಯಲಿದ್ದಾರೆ ಅಂತ ತಿಳಿದುಬಂದಿದೆ.
ನೋವು ಹೆಚ್ಚಿದೆ. ಬೆರಳು ಊದಿಕೊಂಡಿದ್ದು, ಗಾಯದ ಸಮಸ್ಯೆ ಬಿಗುಡಾಯಿಸಿದೆ. ಹೀಗಾಗಿ ಧವನ್ ವಿಶ್ವಕಪ್​ನಿಂದಲೇ ಹೊರಬೀಳುವ ಸಾಧ್ಯತೆ ಹೆಚ್ಚಿದೆ ಅಂತ ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here