ಲಂಕಾ ವಿರುದ್ಧ ನ್ಯೂಜಿಲೆಂಡ್​​ಗೆ 10 ವಿಕೆಟ್​ಗಳ ಭರ್ಜರಿ ಜಯ..!

0
156

ಕಾರ್ಡೀಫ್ : ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್​​ 10 ವಿಕೆಟ್​ ಗಳ ಭರ್ಜರಿ ಜಯ ದಾಖಲಿಸಿ ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ.
ಸೋಫಿಯಾ ಗಾರ್ಡಿಯನ್ಸ್​ನಲ್ಲಿ ನಡೆದ ಮ್ಯಾಚ್​ ನಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನ್ಯೂಜಿಲೆಂಡ್​ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 29.2 ಓವರ್ ಗಳನ್ನಾಡಲಷ್ಟೇ ಶಕ್ತವಾಗಿ 136ರನ್ ಗಳಿಸಿತು. ನ್ಯೂಜಿಲೆಂಡ್ ಪರ ಮ್ಯಾಟ್​ ಹೆನ್ರಿ, ಲೂಕಿ ಫರ್ಗುಸನ್ ತಲಾ 3 ವಿಕೆಟ್ ಕಿತ್ತು ಮಿಂಚಿದ್ರು. ಬೋಲ್ಟ್, ಗ್ರಾಂಡ್​ಹೋಮ್, ನೀಶಮ್, ಸ್ಯಾಟ್ನರ್​ ತಲಾ 1 ವಿಕೆಟ್ ಕಿತ್ರ. ಶ್ರೀಲಂಕಾ ಪರ ದಿಮಿತ್​ ಕರುಣರತ್ನೆ ಅಜೇಯ ಅರ್ಧಶತಕ (52) ಗಳಿಸಿದ್ದು ಬಿಟ್ಟರೆ ಯಾರೊಬ್ಬರಿಂದಲೂ ಹೇಳಿಕೊಳ್ಳುವಂತ ಆಟ ಬರಲಿಲ್ಲ. ಅವರನ್ನು ಹೊರತು ಪಡಿಸಿದ್ರೆ, ಕುಸಲ್ ಪೆರೇರ (29), ತ್ರಿಸಾರ ಪೆರೇರಾ (27) ರನ್ ಗಳಿಸಿದ್ರು. ಮತ್ಯಾವ ಬ್ಯಾಟ್ಸ್​ಮನ್ ಒಂದಂಕಿ ದಾಟಲಿಲ್ಲ.
137ರನ್​ ಗಳ ಸುಲಭ ಗುರಿ ಬೆನ್ನತ್ತಿದ ನ್ಯೂಜಿಲೆಂಡ್​ ವಿಕೆಟ್​ ಕಳೆದುಕೊಳ್ಳದೆ 16.1 ಓವರ್​ಗಳಲ್ಲಿ ಗುರಿ ತಲುಪಿತು. ಮಾರ್ಟಿನ್ ಗುಪ್ಟಿಲ್ ಅಜೇಯ 73, ಮನ್ರೋ ಅಜೇಯ 58ರನ್​ ಗಳಿಸಿದ್ರು. ಲಂಕಾ ಬೌಲರ್​ ಗಳು ಸುಲಭದ ಗೆಲುವಿಗೆ 6 ರನ್ ಉಡುಗೊರೆಯನ್ನೂ (ಎಕ್ಸ್ಟ್ರಾ) ನೀಡಿದರು.

LEAVE A REPLY

Please enter your comment!
Please enter your name here