ವಿಶ್ವಸಮರದಲ್ಲಿಂದು ಬಿಗ್ ಫೈಟ್. ಒಂದೆಡೆ ಆಡಿದ ಎರಡೂ ಪಂದ್ಯಗಳಲ್ಲೂ ಜಯಭೇರಿ ಬಾರಿಸಿರುವ ಟೀಮ್ಇಂಡಿಯಾ, ಇನ್ನೊಂದೆಡೆ ಆಡಿದ 3 ಪಂದ್ಯಗಳಲ್ಲೂ ಗೆಲುವಿನ ನಗೆ ಬೀರಿರುವ ನ್ಯೂಜಿಲೆಂಡ್. ಪ್ರತಿ ಪಂದ್ಯದಲ್ಲೂ ಆಲ್ರೌಂಡ್ ಪ್ರದರ್ಶನ ನೀಡುತ್ತಿರುವ ಈ ಎರಡೂ ತಂಡಗಳೂ ಟ್ರೆಂಟ್ಬ್ರಿಡ್ಜ್ ಅಂಗಳದಲ್ಲಿ ಇಂದು ಅಖಾಡಕ್ಕೆ ಇಳಿಯಲಿವೆ.
ಸೌತ್ ಆಫ್ರಿಕಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ 6 ವಿಕೆಟ್ಗಳ ಜಯ ಸಾಧಿಸಿದ್ದ ಟೀಮ್ಇಂಡಿಯಾ 2ನೇ ಪಂದ್ಯದಲ್ಲಿ ಬಲಿಷ್ಠ ಆಸಿಸ್ ಬಳಗವನ್ನ ಬಗ್ಗು ಬಡಿದಿದೆ. ಆಸ್ಟ್ರೇಲಿಯಾ ಎದುರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಟೀಮ್ಇಂಡಿಯಾ 352 ರನ್ ಕಲೆ ಹಾಕಿತ್ತು. ಬಳಿಕ ಬೌಲಿಂಗ್ನಲ್ಲೂ ಹಿಡಿತ ಸಾಧಿಸಿದ್ದ ಭಾರತ 36 ರನ್ಗಳ ಗೆಲುವು ದಾಖಲಿಸಿತ್ತು. ಇದೀಗ ಇಂದಿನ ಪಂದ್ಯದಲ್ಲೂ ಗೆದ್ದು, ಹ್ಯಾಟ್ರಿಕ್ ಜಯ ಸಾಧಿಸೋ ಲೆಕ್ಕಾಚಾರದಲ್ಲಿದೆ ಕೊಹ್ಲಿ ಪಡೆ.
ಇತ್ತ ಆಡಿದ 3 ಪಂದ್ಯಗಳಲ್ಲೂ ನ್ಯೂಜಿಲೆಂಡ್ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. 2ನೇ ಪಂದ್ಯದಲ್ಲಿ ಬಾಂಗ್ಲಾ ಎದುರು ಪ್ರಯಾಸದ ಗೆಲುವು ದಾಖಲಿಸಿತು. ಅಫ್ಘಾನಿಸ್ತಾನ ವಿರುದ್ಧದ 3ನೇ ಪಂದ್ಯದಲ್ಲಿ 7 ವಿಕೆಟ್ಗಳ ಗೆಲುವು ಸಾಧಿಸಿರುವ ತಂಡ, ಜಯಭೇರಿಯ ಅಭಿಯಾನ ಮುಂದುವರೆಸೋ ಲೆಕ್ಕಾಚಾರದಲ್ಲಿದೆ.
ಸೋಲಿನ ಸೇಡು ತಿರೀಸಿಕೊಳ್ತಾರಾ ಕೊಹ್ಲಿ ಬಾಯ್ಸ್? : ಯೆಸ್! ಅಸಲಿ ವಿಶ್ವಕಪ್ ಟೂರ್ನಿಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಟೀಮ್ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋಲುಂಡಿದೆ. ಪ್ರಾಕ್ಟೀಸ್ ಮ್ಯಾಚ್ನಲ್ಲಿ ಟ್ರೆಂಟ್ ಬೋಲ್ಟ್, ಜೇಮ್ಸ್ ನೀಶಮ್ ಬೌಲಿಂಗ್ ಎದುರಿಸುವಲ್ಲಿ ಕೊಹ್ಲಿ ಬಾಯ್ಸ್ ಎಡವಿದ್ರು. ಕೇವಲ 175 ರನ್ಗಳಿಗೆ ಟೀಮ್ಇಂಡಿಯಾ ಆಲೌಟ್ ಆಗಿತ್ತು. ಗುರಿ ಬೆನ್ನತ್ತಿದ್ದ ಕಿವೀಸ್ ಬಳಗ 6 ವಿಕೆಟ್ಗಳ ಸುಲಭ ಗೆಲುವು ದಾಖಲಿಸಿತ್ತು. ಇಂದಿನ ಪಂದ್ಯದಲ್ಲಿ ಟೀಮ್ಇಂಡಿಯಾ ತಿರುಗೇಟು ನೀಡೋ ವಿಶ್ವಾಸದಲ್ಲಿದೆ.
ಏಕದಿನ ಮಾದರಿಯಲ್ಲಿ ಈವರೆಗೆ ಭಾರತ-ನ್ಯೂಜಿಲೆಂಡ್ 106 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 55 ಪಂದ್ಯಗಳಲ್ಲಿ ಟೀಮ್ಇಂಡಿಯಾ ಜಯ ಸಾಧಿಸಿದ್ರೆ, 45ರಲ್ಲಿ ಕಿವೀಸ್ ಬಳಗ ಗೆದ್ದಿದೆ. ಆದ್ರೆ ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಕಿವೀಸ್ ಬಳಗ ಮೇಲುಗೈ ಸಾಧಿಸಿದೆ.
ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ
ಪಂದ್ಯ 07
ಗೆಲುವು 03
ಸೋಲು 04
ವಿಶ್ವಕಪ್ ಇತಿಹಾಸದಲ್ಲಿ ಭಾರತ ನ್ಯೂಜಿಲೆಂಡ್ ಈವರೆಗೆ 7 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ 3 ಪಂದ್ಯದಲ್ಲಿ ಟೀಮ್ಇಂಡಿಯಾ ಗೆದ್ದಿದ್ರೆ, ನ್ಯೂಜಿಲೆಂಡ್ 4 ಭಾರಿ ಜಯ ಸಾಧಿಸಿದೆ.
ಧವನ್ ಜಾಗ ತುಂಬ್ತಾರಾ ರಾಹುಲ್?
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಕಮ್ಬ್ಯಾಕ್ ಇನ್ನಿಂಗ್ಸ್ ಕಟ್ಟಿದ್ದ ಶಿಖರ್ ಧವನ್ ಇಂಜುರಿ ಸಮಸ್ಯೆ ಅನುಭವಿಸ್ತಾ ಇದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರೋಹಿತ್ ಜೊತೆ ಕನ್ನಡಿಗ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ರಾಹುಲ್ ಆರಂಭಿಕರಾಗಿ ಕಣಕ್ಕಳಿದ್ರೆ, 4ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ವಿಜಯ್ ಶಂಕರ್ ಇಬ್ಬರಲ್ಲಿ ಯಾರು ಕಣಕ್ಕಿಳಿತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಇತ್ತ ನ್ಯೂಜಿಲೆಂಡ್ ಬಳಗ ಟೀಮ್ಇಂಡಿಯಾ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಲು ಸಜ್ಜಾಗಿದೆ. ಅಭ್ಯಾಸ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಆರ್ಡರ್ಗೆ ಪೆಟ್ಟು ನೀಡಿದ್ದ ಜೇಮ್ಸ್ ನೀಶಮ್, ಟ್ರೇಂಟ್ ಬೋಲ್ಟ್ ತಂಡದ ಬೆನ್ನಲುಬಾಗಿದ್ದಾರೆ. ಇನ್ನು ಲೂಕಿ ಫರ್ಗುಸನ್, ರಾಸ್ ಟೇಲರ್, ಮಾರ್ಟಿನ್ ಗಫ್ಟಿಲ್ ಉತ್ತಮ ಫಾರ್ಮ್ನಲ್ಲಿರೋದು ತಂಡದ ವಿಶ್ವಾಸವನ್ನ ಹೆಚ್ಚಿಸಿದೆ.
ಟ್ರೆಂಟ್ಬ್ರಿಡ್ಜ್ ಮೈದಾನ ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಮೇಲೆ ಟೀಮ್ಇಂಡಿಯಾ ಹೆಚ್ಚಿನ ನಿರೀಕ್ಷೆ ಇದೆ. ಜೊತೆಗೆ ನ್ಯೂಜಿಲೆಂಡ್ ವೇಗಿಗಳನ್ನು ಭಾರತೀಯ ಬ್ಯಾಟ್ಸ್ಮನ್ಗಳು ಹೇಗೆ ಎದುರಿಸುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಇದೇ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ ಏಕೈಕ ಪಂದ್ಯದಲ್ಲಿ ಸೋಲುಂಡಿದೆ.
ಟ್ರೆಂಟ್ಬ್ರಿಡ್ಜ್ ಮೈದಾನದಲ್ಲಿ ಭಾರತ
ಪಂದ್ಯ 6
ಸೋಲು 3
ಗೆಲುವು 3
ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಟೀಮ್ಇಂಡಿಯಾ ಇದುವರೆಗೆ 6 ಪಂದ್ಯಗಳನ್ನಾಡಿ ಸಮಾನ ಸೋಲು-ಗೆಲುವನ್ನ ಕಂಡಿದೆ. 6 ಮ್ಯಾಚ್ಗಳ ಪೈಕಿ 3ರಲ್ಲಿ ಗೆದ್ದು 3 ಪಂದ್ಯಗಳಲ್ಲಿ ಸೋಲುಂಡಿದೆ.
ಇನ್ನು ಈ ವರ್ಷಾರಂಭದಲ್ಲಿ ಭಾರತದ ಪ್ರವಾಸ ಕೈಗೊಂಡಿದ್ದ ಕಿವೀಸ್ ಬಳಗ ಏಕದಿನ ಸರಣಿ ಕೈ ಚೆಲ್ಲಿತ್ತು. ಸರಣಿಯಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದ ಕೊಹ್ಲಿ ಬಳಗ 4-1 ಅಂತರದಲ್ಲಿ ಸರಣಿ ಜಯಿಸಿತ್ತು. ಆದ್ರೆ ನಂತರದ ಟಿ-20 ಸರಣಿಯಲ್ಲಿ ನ್ಯೂಜಿಲೆಂಡ್ 2-1 ಗೆದ್ದಿತ್ತು. ಹೀಗಾಗಿ ಇಂದಿನ ಪೈಪೋಟಿ ಅಭಿಮಾನಿಗಳ ಕುತೂಹಲವನ್ನ ಇನ್ನಷ್ಟು ಹೆಚ್ಚಿಸಿದೆ.
ಒಟ್ಟಿನಲ್ಲಿ, ಟೂರ್ನಿ ಆರಂಭದಿಂದ ಸೋಲನ್ನೆ ಕಾಣದ ಎರಡೂ ತಂಡಗಳು ಇಂದು ಸೆಣಸಲಿವೆ. ಈ ಅಜೇಯರ ಹೋರಾಟದಲ್ಲಿ ಯಾರಿಗೆ ಜಯ ಅನ್ನೋದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಆದ್ರೆ ಪಂದ್ಯಕ್ಕೆ ಭಾರಿ ಮಳೆ ಮುನ್ಸೂಚನೆ ಇರೋದು ಕೂಡ ಮತ್ತೊಂದು ಆತಂಕ ಮೂಡಿಸಿದೆ.
zithromax class
zithromax azithromycine
3celebration